ಸೋಮಲಾಪುರ ಐರಣಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಭಾರಿ ಬಿರುಗಾಳಿ, ಗುಡುಗು ಸಿಡಿಲು, ಮತ್ತು ಆನೆಕಲ್ಲು ಸಹಿತ ಬಿದ್ದ ಮಳೆಗೆ ಅಧಿಕ ಪ್ರಮಾಣದಲ್ಲಿ ನಷ್ಟ

ಸೋಮಲಾಪುರ ಐರಣಿ  ಸೇರಿದಂತೆ ಇತರೆ ಗ್ರಾಮಗಳಲ್ಲಿ ಭಾರಿ ಬಿರುಗಾಳಿ, ಗುಡುಗು ಸಿಡಿಲು, ಮತ್ತು ಆನೆಕಲ್ಲು  ಸಹಿತ ಬಿದ್ದ ಮಳೆಗೆ ಅಧಿಕ ಪ್ರಮಾಣದಲ್ಲಿ  ನಷ್ಟ  Heavy rains, thunderstorms, and hailstorms caused extensive damage in Somalapur, Ironi and other vil

ರಾಣೆಬೆನ್ನೂರು 18 : ತಾಲೂಕಿನ ಮೇಡ್ಲೆರಿ ಹೋಬಳಿ ವ್ಯಾಪ್ತಿಯ ಹಿರೇಬಿದರಿ ಕೋಣನ ತಲೆ ಸೋಮಲಾಪುರ ಐರಣಿ  ಸೇರಿದಂತೆ ಇತರೆ ಗ್ರಾಮಗಳಲ್ಲಿ ಭಾರಿ ಬಿರುಗಾಳಿ, ಗುಡುಗು ಸಿಡಿಲು, ಮತ್ತು ಆನೆಕಲ್ಲು  ಸಹಿತ ಬಿದ್ದ ಮಳೆಗೆ ಅಧಿಕ ಪ್ರಮಾಣದಲ್ಲಿ  ನಷ್ಟ ಸಂಭವಿಸಿದ ಗ್ರಾಮೀಣ ಪ್ರದೇಶಗಳ    ಜಮೀನುಗಳಿಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಅವರು ವಿವಿಧ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.  

 ಜಿಲ್ಲಾಧಿಕಾರಿಗಳು ಅಡಿಕೆ ಬೆಳೆ ಕಳೆದುಕೊಂಡ ಜಮೀನು ಮಾಲಿಕ ವಿರೂಪಾಕ್ಷಪ್ಪ ಮಳವಳ್ಳಿ ಸಹೋದರ ಬಸವರಾಜಪ್ಪ ಮಳವಳ್ಳಿ ಅವರ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಅಡಿಕೆ ಬೆಳೆ ಆನೆ ಕಂಡಿದ್ದು ಅತಿ ಸೂಕ್ಷ್ಮವಾಗಿ ಪರೀಶೀಲಿಸಿ ನೆಲಕಪ್ಪಳಿಸಿದ ಅಡಿಕೆ ಹಿಚು, ಸಹ ಆನೇಕಲ್ ಹೊಡಿತಕ್ಕೆ  ತೋಟದ ತುಂಬಾ ರಾಶಿ ರಾಶಿಯಾಗಿ ಬಿದ್ದಿರುವುದನ್ನು ನೋಡಿ ಸಹೋದರರ  ಆಹವಾಲು ಸ್ವೀಕರಿಸಿದರು.   

 ಭ ಭತ್ತ ಬೆಳೆದು ಅಪಾರ ನಷ್ಟಕ್ಕಿಡಾದ ಬಸವರಾಜ ಕುರುವತ್ತಿ, ಹನುಮಂತಪ್ಪ ಚಂದಾಪುರ, ನಾಗಪ್ಪ ಚಂದಾಪುರ, ಕರಬಸಪ್ಪ ಕಂಚಿಕೇರಿ, ನಾಗಪ್ಪ ಓಲೆಕಾರ್, ಶರಣಪ್ಪ ಮಲ್ಲಾಪುರ ಸೇರಿದಂತೆ ಮತ್ತಿತರ ಜಮೀನುಗಳ ರೈತ ಮಾಲೀಕರನ್ನು ಭೇಟಿಯಾಗಿ ನಷ್ಟದ ಪರಿಹಾರ ಕುರಿತು ಅವರಿಂದ ಮೌಖಿಕ ಮನವಿ ಸ್ವೀಕರಿಸಿ, ಬೆಳೆ ಹಾನಿ  ಪರೀಶೀಲಿಸಿ,ವರದಿ ಆಧರಿಸಿ  ಸರ್ಕಾರದ  ನಿಯಮಾವಳಿ ಪ್ರಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದರು.  

 ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ರೈತರಲ್ಲಿ ಕೆಲವು ಮುಖಂಡರು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಅದು ಸೂಕ್ತವೂ ಅಲ್ಲ ಇದರಿಂದ ರೈತರು ಮಾನಸಿಕವಾಗಿ ಕುಗ್ಗುವಂತಾಗಿದೆ ಆದ್ದರಿಂದ ಹೊಲಕ್ಕೆ ಹಾಕಿದ ಬೀಜ ಗೊಬ್ಬರ ಮತ್ತು ಮಾಡಿದ ಖರ್ಚು ಕೊಟ್ಟರೆ ಸಾಕು ಅದಕ್ಕೆ ಸರ್ಕಾರದ ಮಟ್ಟದಲ್ಲಿ ತಾವುಗಳು ಚರ್ಚಿಸಿ ವೈಜ್ಞಾನಿಕ ಬೆಲೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಪ್ರಕಾಶ್ ಕೋಳಿವಾಡ್ ಅವರು, ರೈತರು ಹೇಳುವಂತೆ ಇಂದಿನ ವೈಜ್ಞಾನಿಕ ಬೆಲೆ ನೀಡಬೇಕು. ಅದಕ್ಕೆ ಸರ್ಕಾರದ ಮಟ್ಟದಲ್ಲಿ ಕೋಲಂಕುಶವಾಗಿ ಚರ್ಚೆಯಾಗಬೇಕು ಈ ನಿಟ್ಟಿನಲ್ಲಿ ನಾವು ಈಗಾಗಲೇ ಸದನದ ಸಭೆಯಲ್ಲಿ ಚರ್ಚಿಸಿದ್ದೇನೆ. ಅದಕ್ಕೆ ಸರ್ಕಾರ ಮತ್ತೊಂದು ಸಾರಿ ನಿರ್ಧರಿಸುವ ಹಂತದಲ್ಲಿದೆ ಈ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ತಾವು ಮತ್ತು ಸಚಿವರು ಶಾಸಕರೊಂದಿಗೆ  ಪ್ರತ್ಯೇಕವಾಗಿ ಚರ್ಚಿಸುವುದಾಗಿ ಪ್ರಕಾಶ್ ಕೋಳಿವಾಡ  ಹೇಳಿದರು.   

 ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಸಿ ಇ ಓ, ದಲ್ಜಿತಕುಮಾರ್,  ರೈತ ಮುಖಂಡರಾದ ಸುರೇಶಪ್ಪ ಬಿರಾಳ, ಚಂದ್ರಣ್ಣ ಬೇಡರ, ತಿರುಪತಿ ಅಜ್ಜನವರ, ಸಿದ್ದನಗೌಡ ಪಾಟೀಲ, ಅಣ್ಣಪ್ಪ ಚಿಕ್ಕಬಿದರಿ, ಸಿದ್ದೇಶ್ ಬಿರಾಳ, ತಿಪ್ಪೇಶ್ ಮೂಗಾನವರ, ಬಸವರಾಜ ಕುರುವತ್ತಿ, ಚಂದ್ರು ಪಾಟೀಲ, ವೀರೇಶ್ ಕುಮರಿ, ಪತ್ರೇಶಗೌಡ ಪಾಟೀಲ, ಚಂದ್ರ​‍್ಪ ಓಲೆಕಾರ, ಪರ್ವತಗೌಡ ಪಾಟೀಲ, ಕಲ್ಲಪ್ಪ ಚಂದಾಪುರ, ಸೇರಿದಂತೆ ಮತ್ತಿತರ ರೈತರು. ಗ್ರಾಮದ ಮುಖಂಡರು ನಾಗರಿಕರು ಪಾಲ್ಗೊಂಡಿದ್ದರು.