ಗುರು ಪರಂಪರೆ ಭಾರತೀಯ ಸಂಸ್ಕೃತಿಯ ತಿರುಳು: ಡಾ.ಅಜಿತ ಪ್ರಸಾದ
ಧಾರವಾಡ 16; ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಸಂಬಂಧಗಳು ಕದಡಿ ಹೋಗುತ್ತಿದ್ದು ಆಧುನಿಕ ಯುಗದಲ್ಲಿ ಶಿಕ್ಷಕರಿಲ್ಲದೇ ತಂತ್ರಜ್ಞಾನದ ಮುಖಾಂತರ ಜ್ಞಾನ ಸಂಪಾದನೆ ಸಾಧ್ಯವಾಗಿದೆ. ಆದರೆ ವಿದ್ಯಾಥರ್ಿಗಳಿಗೆ ತಾಳ್ಮೆ, ಸಹನೆ, ಭಕ್ತಿ ಗೌರವ ಇವುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಕೇವಲ ಗುರುಕುಲದಲ್ಲಿ ಕಲಿತ ಹಲವಾರು ವಿದ್ವಾನರು ನಮಗೆ ಗೋಚರಿಸುತ್ತಾರೆ. ಆದರೆ ಬೆರಳ ತುದಿಯಲ್ಲಿಯೇ ಸಮಗ್ರ ಜ್ಞಾನದ ಕಣಜವಿದ್ದರೂ ಆತಂಕವಾದ ಮಾದಕ ವಸ್ತುಗಳ ಸೇವನೆ ಮುಂತಾದವುಗಳು ಮಿತಿ ಮೀರಿ ನಡೆಯುತ್ತಿರುವದಕ್ಕೆ ಗುರುಗಳ ಮಾರ್ಗದರ್ಶನವಿಲ್ಲದಿರುವುದೇ ಕಾರಣ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಮಂಜುನಾಥೇಶ್ವರ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಆಯೋಜಿಸಿದ್ದ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯ ವಿವಿಧ ಮಜಲುಗಳ ಸನ್ನಿವೇಶಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗುರುವೆಂದರೆ ಕೇವಲ ಪಾಠ ಹೇಳುವ ಯಂತ್ರವಲ್ಲ, ಜೀವನವನ್ನು ರೂಪಗೊಳಿಸುವ ಚೇತನ ಶಕ್ತಿ ಎಂದು ಹೇಳಿದರು.
ಆಶ್ರಮ, ಯಜ್ಞಕುಂಡ, ಪಾಠಶಾಲೆ, ಉದ್ಯಾನವನ, ನೀರಿನ ಹೊಂಡ ನೋಡುಗರ ಕಣ್ಮನ ಸೆಳೆಯುವಂತಿದ್ದವು. ಇದೇ ಸಂದರ್ಭದಲ್ಲಿ ಶಾಲೆಯವತಿಯಿಂದ ಡಾ. ಅಜಿತ ಪ್ರಸಾದರವರನ್ನು ಪ್ರಾಚಾರ್ಯರಾದ ಸಾಧನಾ ಸನ್ಮಾನಿಸಿದರು. ಮಹಾವೀರ ಉಪಾದ್ಯೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 