ಶಿಕ್ಷಕ ವೀರಣ್ಣ ಅವರಿಗೆ ಸನ್ಮಾನ

ಬೆಳಗಾವಿ: 03 :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿರುವ ಅಂಬೇಡ್ಕರ್ ನಗರದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲಿಯೇ ವಿಶಿಷ್ಠ ರೀತಿಯಲ್ಲಿ ರೂಪಿಸಿ, ಅಭಿವೃದ್ಧಿಪಡಿಸಿದ ಶಿಕ್ಷಕ ವೀರಣ್ಣ ಮಡಿವಾಳರರವರನ್ನು ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯ ಇತರ ಶಿಕ್ಷಕರು ವೀರಣ್ಣನವರಂತೆ ಸಕರ್ಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದು ಹೇಳಿದರು.

ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ನಗರ ನಿಡಗುಂದಿಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ವಂತ ವೆಬ್ಸೈಟ್ನ್ನು ಹೊಂದಿರುವ ವಿಶಿಷ್ಠತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ವೀರಣ್ಣನವರಿಂದ ಶಾಲೆ ಅಭಿವೃದ್ಧಿ ಹೊಂದಿದ ಕಥನವನ್ನು ಕೇಳಿ ವಿಶ್ಮಿತರಾದರು. ಇದೇ ರೀತಿ ಸಕರ್ಾರಿ ಶಾಲೆಯ ಈ ಅಭಿವೃದ್ಧಿಯ ಕಥನ ಜಿಲ್ಲೆಯ ಎಲ್ಲಾ ಸಕರ್ಾರಿ ಶಾಲೆಗಳಿಗೆ ಪ್ರೇರಣೆ ನೀಡಲಿ ಎಂದು ಆಶಿಸಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ವೀರಣ್ಣ ಮಡಿವಾಳರ ಅವರು ಶಾಲೆಯ ಮಕ್ಕಳ ಸಂಪೂರ್ಣ ನೈರ್ಮಲ್ಯಕ್ಕಾಗಿ ರೂ. 1.00 ಲಕ್ಷ ಅನುದಾನವನ್ನು ನೀಡಿದ ಬೆಳಗಾವಿಯ ರತ್ನಾಕರ ಬ್ಯಾಂಕ್ಗೆ ಕೃತಜ್ಞತೆ ಸಲ್ಲಿಸಿದರು. ಇದನ್ನು ಸಾಧ್ಯವಾಗಿಸಿದ ಮಾನ್ಯ ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳವರಿಗೆ ವಂದನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ             ಗಜಾನನ ಮನ್ನಿಕೇರಿಯವರು ಮಾತನಾಡಿ, ನಿಡಗುಂದಿ ಗ್ರಾಮದಲ್ಲಿರುವ ಅಂಬೇಡ್ಕರ್ನಗರದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಶಿಷ್ಠತೆಗಳು ಹಲವು ಶಾಲೆಯ ಉದ್ಯಾನವನ, ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳ, ಗುಣಮಟ್ಟದ ಕಲಿಕೆಗಾಗಿ ತಂತ್ರಜ್ಞಾನದ ಸದುಪಯೋಗ ಮುಂತಾದವುಗಳನ್ನು ಪ್ರಶಂಸಿಸಿ, ನಮ್ಮ ಜಿಲ್ಲೆಯ ಎಲ್ಲಾ ಸಕರ್ಾರಿ ಶಾಲೆಗಳು ಇದೇ ರೀತಿ ಸಮಗ್ರ ಅಭಿವೃದ್ಧಿ ಹೊಂದಿ ನಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲಿ ಎಂದು ಆಶಿಸಿದರು. 

ನಿಡಗುಂದಿ ಗ್ರಾಮದಲ್ಲಿರುವ ಅಂಬೇಡ್ಕರ್ನಗರದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ಹೀಗೆಯೇ ಇನ್ನಷ್ಟು ಅಭಿವೃದ್ಧಿ ಹೊಂದಲಿ ಸಕರ್ಾರಿ ಶಾಲೆಗಳ ಹೊಸ ಮಾದರಿಯೊಂದನ್ನು ದೇಶಕ್ಕೆ ಕೊಡಲಿ, ಇಲಾಖೆ ಅವರ ಜೊತೆ, ಅವರ ಶಾಲೆಯ ಜೊತೆ ಸದಾ ಇರುತ್ತದೆ ಎಂದು ಭರವಸೆ ನೀಡಿದರು. 

ಇದೇ ಸಂದರ್ಭದಲ್ಲಿ ರತ್ನಾಕರ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದು, ನಿಡಗುಂದಿ ಗ್ರಾಮದಲ್ಲಿರುವ ಅಂಬೇಡ್ಕರ್ನಗರದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಯ ಪರಿಯನ್ನು ಶ್ಲಾಘಿಸಿ, ಆ ಶಾಲೆಯ ಮಕ್ಕಳ ಸಂಪೂರ್ಣ ನೈರ್ಮಲ್ಯಕ್ಕಾಗಿ ನಮ್ಮ ಬ್ಯಾಂಕ್ ರೂ. 1.00 ಲಕ್ಷ ಗಳನ್ನು ನೀಡಲು ಹಷರ್ಿಸುತ್ತದೆ ಎಂದು ಹೇಳಿದರು.  

ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್., ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ ಬನಶಂಕರಿ, ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಗಜಾನನ ಮನ್ನಿಕೇರಿ, ಡಯೆಟ್ ಉಪನ್ಯಾಸಕರಾದ ಹೊನಕುಪ್ಪಿ, ರತ್ನಾಕರ ಬ್ಯಾಂಕ್ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.