ಯರಗಟ್ಟಿ 03: ಪರಸಗಡ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ/ಶಿಕ್ಷಕಿಯರ ಪರಸ್ಪರ ಸಹಕಾರ ಪತ್ತಿನ ಸಂಘ, ಸವದತ್ತಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಳ್ಳಿಕೇರಿ ತೋಟದ ಶಾಲಾ ಶಿಕ್ಷಕರಾದ ಮಂಜುನಾಥ ಕಂಬಾರ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬೂದನೂರ ಶಾಲೆಯ ಶಿಕ್ಷಕರಾದ ಬಿ ಎಸ್ ವಾರಿ ಇವರು ಆಯ್ಕೆಯಾಗಿರುತ್ತಾರೆ.ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಎಲ್ಲಾ ಹಿರಿಯ ಶಿಕ್ಷಕರು ಹಾಗೂ ಶಿಕ್ಷಕರ ಸಂಘದ ಪ್ರತಿನಿಧಿಗಳು ಹಾಗೂ ಸೊಸೈಟಿಯ ಸರ್ವ ನಿರ್ದೇಶಕರು ಭಾಗವಹಿಸಿದ್ದರು.