ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರ ಕಾರ್ಯಾಗಾರ

Teacher's Workshop for Essex Result Improvement

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರ ಕಾರ್ಯಾಗಾರ

ಹೂವಿನ ಹಡಗಲಿ 18: ಭಾಷೆಯನ್ನು ಪರಿಣಾಮಕಾರಿಯಾಗಿ ಬೋಧಿಸಿದಾಗ ಶಬ್ಧ ಭಂಡಾರ ಜ್ಞಾನದ ವೃದ್ಧಿ ಆಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ  ಹೇಳಿದರು. ಪಟ್ಟಣದ ಜಿ ಪಿ ಜಿ ಪ್ರೌಢಶಾಲೆಯಲ್ಲಿ ಬುಧವಾರ ನಾನಾ ಇಲಾಖೆ  ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಹಿಂದಿ ವಿಷಯ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಹಿಂದಿ ವಿಷಯಗಳ ಪಾಠ ಪದ್ಯ ವ್ಯಾಕರಣಂಶಗಳನ್ನು ಪಠ್ಯಕ್ರಮ ಪೂರ್ತಿಗೊಳಿಸಿ ಪುನರಾವರ್ತನೆ ಮಾಡಬೇಕು.ಸುಲಭವಾಗಿ ಅಂಕ ಗಳಿಸುವ ಘಟಕಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.ಖಚಿತವಾಗಿ ಕೇಳುವ ಪ್ರಶ್ನೆಗಳಿಗೆ ಮಕ್ಕಳು ಬರೆಯುವ ಹಾಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೂ ವಿಶೇಷ ಗಮನಹರಿಸಬೇಕು ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಎಲ್ಲಾ ವಿಷಯಗಳ ಪರೀಕ್ಷಾ ಪ್ಯಾಕೇಜ್ ಸಿದ್ಧಪಡಿಸಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಶೀಘ್ರದಲ್ಲೇ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಮಕ್ಕಳಿಗೆ ಹೆಚ್ಚು ಬರವಣಿಗೆ ಸುಧಾರಣೆಗೆ  ಆದ್ಯತೆ ನೀಡಬೇಕು ಎಂದರು.ತಾಲೂಕು ದೈಹಿಕ ಅಧೀಕ್ಷಕರಾದ ರಫಿ ಅಹಮದ್ ಖವಾಸ್ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ ಶಾಲೆಯ ಉಪ ಪ್ರಾಂಶುಪಾಲ ಜಿ ಕವಿತಾ, ರಾಜ್ಯ ಸಂಪನ್ಮೂಲ ವ್ಯಕ್ತಿ ಅಬ್ದುಲ್ ಕಲಾಂ ಸೂಕ್ತ ತರಬೇತಿ ಮಾರ್ಗದರ್ಶನ ನೀಡಿದರು.ಹಿಂದಿ ಶಿಕ್ಷಕರ ವೇದಿಕೆಯ ಎಲ್ ಖಾದರಬಾಷ  ಇತರರು ಉಪಸ್ಥಿತರಿದ್ದರು.ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಹಿಂದಿ ವಿಷಯ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.