ಶ್ರೀಗೌರಿ ಮಹಿಳಾ ಮಂಡಳದಿಂದ ಶಿಕ್ಷಕರ ದಿನಾಚರಣೆ

ಬೆಳಗಾವಿ 20: ಶಿಕ್ಷಕ, ಗುರುವಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಅದಕ್ಕೆ ಕಾರಣವೂ ಇದೆ. ಒಳ್ಳೆಯ ನಾಗರಿಕರನ್ನಾಗಿ ಮಕ್ಕಳನ್ನು ನಿರ್ಮಿಸುವುದರ ಮೂಲಕ ಉತ್ತಮ ಸುಂಸಕೃತ ಸಮಾಜ, ಸದೃಢ ದೇಶ ನಿರ್ಮಿಸುವ ಶಿಲ್ಪಿಗಳು ಶಿಕ್ಷಕರು. ಕೇವಲ ಶಾಲೆಯಲ್ಲಿ ಅಕ್ಷರ ಜ್ಞಾನ ನೀಡುವ ಶಿಕ್ಷಕರು ಮಾತ್ರ ಶಿಕ್ಷಕರಲ್ಲ. ನಮಗೆ ವಿದ್ಯೆ, ಅರಿವು ಜೀವನದ ಪಾಠ ವ್ಯವಹಾರ ಜ್ಞಾನ ನೀಡುವ ಪ್ರತಿಯೊಬ್ಬರು ಗುರುಗಳು ಎಂದು ಬೆಳಗಾವಿ ಮ.ನ.ರ. ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ನಿರ್ಮಲಾ ಬಟ್ಟಲ ಅವರು ಹೇಳಿದರು. 

ಶ್ರೀಗೌರಿ ಮಹಿಳಾ ಮಂಡಳ ವತಿಯಿಂದ ದಿ. 19 ಗುರುವಾರದಂದು  ಅರ್ಥಪೂರ್ಣವಾಗಿ ಆಚರಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. 

ಶಿಕ್ಷಣ ನೀತಿ ಬದಲಾವಾಣೆಯಿಂದ ಶಿಕ್ಷಕರಿಗೆ ಆಗುವ ತೊಂದರೆಗಳ ಕುರಿತು ಅವರು ವಿವರಿಸಿದರು. ಈಗಿನ ಶಿಕ್ಷಣದ ವಾಸ್ತವ ಸ್ಥಿತಿಯನ್ನು ಮನದಟ್ಟಾಗುವಂತೆ ತಿಳಿಸಿದ ಅವರು ಶಿಕ್ಷಕರ ಪಾತ್ರ ಎಷ್ಟು ಮುಖ್ಯವೆಂಬುದನ್ನು ತಿಳಿಸಿದರು. 

ಶ್ರೀಗೌರಿ ಮಹಿಳಾ ಮಂಡಳ ವತಿಯಿಂದ ನಿರ್ಮಲಾ ಬಟ್ಟಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.