ಮಾತೃ ದ್ರೋಹಿಗಳಿಗೆ ತಕ್ಕ ಪಾಠ ಕಳಿಸಿ : ಡಿ.ಕೆ.ಶಿವಕುಮಾರ್

DK Shivakumar

ಬೆಂಗಳೂರು,ನ 29-ತಾಯಿ ಸ್ಥಾನದಲ್ಲಿರುವ ಪಕ್ಷಕ್ಕೆ ದ್ರೋಹ ಬಗೆದವರಿಗೆ ಬುದ್ಧಿ ಕಲಿಸಿ.ಬೇರೆ ರಾಜ್ಯಗಳಲ್ಲಿ ಪಕ್ಷ ದ್ರೋಹ ಮಾಡಿದವರನ್ನು ಹೀನಾಯವಾಗಿ ಸೋಲಿಸಿ ಮತದಾರರು ಪಾಠ ಕಲಿಸಿದ್ದಾರೆ.ಅದೇ ರೀತಿ ನೀವು ಬಿಜೆಪಿಗೆ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಕರೆ ನೀಡಿದರು.  

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿ ನಾವೆಲ್ಲ ವಿಶೇಷ ಚುನಾವಣೆ ಎದುರಿಸುತ್ತಿದ್ದೇವೆ.ಈ ಚುನಾವಣೆಯಲ್ಲಿ ಪಕ್ಷ ದ್ರೋಹಿಗಳನ್ನು ಮನೆಗೆ ಕಳುಹಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾದ ಜವಾಬ್ದಾರಿ ಮತದಾರರ ಮೇಲಿದೆ. ಜನರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಪ್ರಜಾಪ್ರಭುತ್ವ ಕಾಪಾಡಬೇಕು ಅವರು ಮನವಿ ಮಾಡಿದರು.

  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗೆಲ್ಲಾ ಆಪರೇಷನ್ ಕಮಲದ ಸಾಧನೆ ಮಾಡುತ್ತಿದ್ದಾರೆ.ಅವರು ಗೆದ್ದಿದ್ದು 104, ಕಾಂಗ್ರೆಸ್ ಮತ್ತು ಜನತಾದಳ ಸೇರಿ 120 ಸ್ಥಾನಗಳೊಂದಿಗೆ ಅಧಿಕಾರ ಮಾಡಿದೆವು.ಒಂದು ಪಕ್ಷ ಸಿದ್ಧಾಂತಗಳ ಮೇಲೆ ಸರ್ಕಾರ ರಚನೆ ಮಾಡುತ್ತೇವೆ.ಅದೇ ರೀತಿ ನಾವು ಸಿದ್ಧಾಂತದ ಮೇಲೆ ಸರ್ಕಾರ ಮಾಡಿ ಅಧಿಕಾರ ನಡೆಸಿದ್ದೇವೆ.ಯಾರಿಗೆ ಏನಾದರೂ ಪರವಾಗಿಲ್ಲ ಯಡಿಯೂರಪ್ಪ ಅವರಿಗೆ ತಾನು ಕಡೇ ಬಾರಿ ಮುಖ್ಯಮಂತ್ರಿ ಆಗಬೇಕು ಎಂದು ನಮ್ಮ ಸರ್ಕಾರ ಪತನಗೊಳಿಸಲು ಎಲ್ಲಾ ಪ್ರಯತ್ನ ಮಾಡಿದರು.ಕೊನೆಗೆ ನಮ್ಮ ಹಾಗೂ ದಳದ ಶಾಸಕರನ್ನೇ ಸೆಳೆದು ಸರ್ಕಾರ ಮಾಡಿ ದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ 15 ಜನ ಶಾಸಕರಲ್ಲಿ ಯಾರೂ ಮತದಾರರು ಹಾಗೂ ಕಾರ್ಯಕರ್ತರನ್ನು ಕೇಳಿ ರಾಜೀನಾಮೆ ನೀಡಲಿಲ್ಲ ಎಂದು ಅವರು ಅನರ್ಹ ಶಾಸಕರ ಬಗ್ಗೆ ಕಿಡಿಕಾರಿದರು. 

  ನಮ್ಮ ಹಳ್ಳಿಗಳಲ್ಲಿ ಕುರಿ,ಕೋಳಿಗಳನ್ನು ತಂದು ಸಂತೆಯಲ್ಲಿ ಮಾರಾಟ ಮಾಡುತ್ತಾರೆ.ಆದರೆ ಇವರು ತಾವು ಮಾರಾಟವಾಗು ವುದಲ್ಲದೆ,ಕ್ಷೇತ್ರದ ಮತದಾರರ ತೀರ್ಪನ್ನು ಮಾರಿದ್ದಾರೆ.ನಿಮ್ಮ ಕ್ಷೇತ್ರದಲ್ಲಿ ಹಿರಿಯ ನಾಯಕ ರೋಷನ್ ಬೇಗ್,ತಾನು ಬೆಳೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ದ್ರೋಹ ಮಾಡಿದರು.ಅವರನ್ನು ಬಿಜೆಪಿಯವರು ಹತ್ತಿರಕ್ಕೂ ಸೇರಿಸಿಕೊಂಡಿಲ್ಲ.ನೀನು ಹತ್ತಿರ ಇದರೆ ಬಿಜೆಪಿ ಬರುವ ಮತಗಳೂ ಬೀಳಲ್ಲ ಎಂದು ದೂರ ಇಟ್ಟಿದ್ದಾರೆ. ಈಗ ರೋಷನ್ ಬೇಗ್ ಬಿಜೆಪಿ ಅಭ್ಯರ್ಥಿ ಪರ ಮತ ಕೇಳುತ್ತಿದ್ದಾರೆ.ನಿನಗೆ ಮತ ಕೇಳಲು ಮುಖ ಇಲ್ಲ ಅಂದರೆ ನೀವೂ ಹೇಳಿದವರಿಗೆ ಜನ ಮತ ಹಾಕುತ್ತಾರೆಯೇ? ರೋಷನ್ ಬೇಗ್ ಅಣ್ಣಾ ಬೇಡ ಇದು ಬಿಟ್ಟುಬಿಡಿ.

    ಇಲ್ಲಿ ನಾನು ಕೇಳಿಕೊಳ್ಳುವುದು ರಿಜ್ವಾನ್ ಅರ್ಷದ್ ಅವರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ.ಕಳೆದ        ಚುನಾವಣೆಯಲ್ಷನ್ ಬೇಗ್ ವಿರೋಧ ಮಾಡಿದರೂ ಇಲ್ಲಿನ ಮಹಾಜನತೆ ಇವರಿಗೆ 15 ಸಾವಿರ ಮತ ಮುನ್ನಡೆ ಕೊಟ್ಟಿ ದ್ದೀರಿ.ಈ ಚುನಾವಣೆಯಲ್ಲೂ ಅದೇ ಬೆಂಬಲ ನೀಡಿ ಹೆಚ್ಚು ಅಂತರದಲ್ಲಿ ಆರಿಸಬೇಕು ಎಂದು ಅವರು ಮನವಿ ಮಾಡಿ ದರು.

  ಇದಲ್ಲೆ ಗಮನದಲ್ಲಿದರೂ ಬಿಜೆಪಿ ನಾಯಕರು ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ.ನಾನು ಅವರ ಬಗ್ಗೆ ಮಾತನಾಡುವುದಿಲ್ಲ .ಆದರೆ ಯಡಿಯೂರಪ್ಪ ಅವರ ರಾಜಕೀಯ ತಂತ್ರಗಾರಿಕೆಯನ್ನು ದೇಶ ಒಪ್ಪುವುದಿಲ್ಲ.ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆ ಎಂದು ಲೇವಡಿ ಮಾಡಿದರು.

  ಇತ್ತೀಚಗೆ ಮೊನ್ನೆ ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯಗಳಲ್ಲಿ ಚುನಾವಣೆ ನೋಡಿದ್ದೀರಿ.ಲೋಕಸಭೆ ಚುನಾವಣೆಯಲ್ಲಿ ಅಷ್ಟು ದೊಡ್ಡ ಬಹುಮತ ಬಂದರೂ ಒಂದು ರಾಜ್ಯದಲ್ಲಿ ಕೊಟ್ಟ ಮಾತಿಗೆ ಬಿಜೆಪಿ ಬದ್ಧವಾಗಿಲ್ಲ.ಶಿವಸೇನೆ ಮೈತ್ರಿ ವೇಳೆ ಅರ್ಧ ನೀವು ಅರ್ಧ ನಾವು ಅಂತಾ ಕೇಳಿದ್ದು,ಅದನ್ನು ಪಾಲಿಸಲು ಸಾಧ್ಯವಾಗಿಲ್ಲ.ನಂತರ ಎನ್ಸಿಪಿ ಕಾಂಗ್ರೆಸ್ ಶಿವಸೇನಾ ಸರ್ಕಾರ ರಚನೆ ಮಾಡುತ್ತೇವೆ ಅಂತಾ ಮುಂದೆ ಬಂದಾಗ ತಕ್ಷಣ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ವಾಮಮಾರ್ಗದಲ್ಲಿ ಸರ್ಕಾರ ಮಾಡಿ ಮರ್ಯಾದೆ ಕಳೆದುಕೊಂಡರು.ಇದರಿಂದ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಗೂ ಮತದಾರರಿಗೆ ಅವಮಾನವಾಗಿದ ಎಂದು ಅವರು ಬಿಜೆಪಿ ನಡೆಯನ್ನು ಖಂಡಿಸಿದರು.

  ಮೋದಿ ಅವರು ನೋಟ್ ಬ್ಯಾನ್ ಮಾಡಿ ಮಧ್ಯಮ ಹಾಗೂ ಬಡ ವರ್ಗದವರ ಮೇಲೆ ಬರೆ ಎಳೆದಿದ್ದಾರೆ. ಯಾವ ಅಂಗಡಿ ವರ್ತಕರು,ಕೈಗಾರಿಕೆಗಳು ನೆಮ್ಮದಿಯಾಗಿಲ್ಲ.ಆರ್ಥಿಕ ವ್ಯವಸ್ಥೆ ಹಾಳಾಗಿದೆ.ಯುವಕರಿಗೆ ಸರ್ಕಾರಿ ಉದ್ಯೋಗ ಇರಲಿ ಖಾಸಗಿ ಉದ್ಯೋಗವನ್ನು ಕೊಡಲು ಸಾಧ್ಯವಾಗುತ್ತಿಲ್ಲ ಎಂದರು. 

  ಇವತ್ತು ಶ್ರೀಮತಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು.ಎರಡು ಬಾರಿ ಅವರನ್ನು ದೇಶದ ಪ್ರಧಾನಿ ಮಾಡಲು ಎರಡು ಬಾರಿ ಮತ ನೀಡಿದರು.ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರಧಾನ ಮಂತ್ರಿಯಾಗುವಂತೆ ಸೋನಿಯಾಗೆ ಕರೆದು ನಿಮಗೆ ಎಲ್ಲಾ ಸಂಸದರ ಬೆಂಬಲ ಇದೆ.ಅಧಿಕಾರ ಮಾಡಿ ಅಂತಾ ಪತ್ರ ಬರೆದರು.ಆದರೆ ಅವರು ಈ ದೇಶ ಉದ್ಧಾರ ಆಗಬೇಕು,ಯುವಕರಿಗೆ ಉದ್ಯೋಗ ಸಿಗಬೇಕು.ಒಬ್ಬ ಆರ್ಥಿಕ ತಜ್ಞ ಪ್ರಧಾನಮಂತ್ರಿ ಆಗಬೇಕು ಅಂತಾ ಪ್ರಧಾನ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು.ಆ ಹೆಣ್ಣು ಮಗಳು ಯುವಕ ರಿಜ್ವಾನ್ ಗೆ ಹಸ್ತದ ಗುರುತನ್ನು ಕೊಟ್ಟಿ ಕಳುಹಿಸಿದ್ದಾಳೆ.ಈ ದೇಶಕ್ಕೋಸ್ಕರ ತ್ಯಾಗ ಮಾಡಿದ ಇಂದಿರಾಗಾಂಧಿ ಸೊಸೆ,ರಾಜೀವ್ ಗಾಂಧಿ ಅವರ ಧರ್ಮಪತ್ನಿ ಆ ತಾಯಿ ಸೋನಿಯಾ ಗಾಂಧಿ ಅವರು ಕೊಟ್ಟಿದ್ದಾರೆ ಎಂದು ಹಿಂದಿನ ಘಟನೆಗಳನ್ನು ಸ್ಮರಿಸಿದರು. 

  ಒಂದು ಕಡೆ ಮೋದಿ ಅಲೆ ಮತ್ತೊಂದೆಡೆ,ಶಾಸಕ ರೋಷನ್ ಬೇಗ್ ವಿರೋಧ ಮಾಡಿದರೂ ಶಿವಾಜಿನಗರ ಮತದಾರರು ರಿಜ್ವಾನ್ ಅರ್ಷಾದ್ ಗೆ ಈತನಿಗೆ ಹೆಚ್ಚು ಮತ ನೀಡಿದ್ದೀರಿ.ಈ ಚುನಾವಣೆಯಲ್ಲೂ ಅದೇ ಬೆಂಬಲ ನೀಡಿ ಹೆಚ್ಚು ಅಂತರದಲ್ಲಿ ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.