ತೆರಿಗೆ ಸಲಹೆಗಾರ ಕಾರ್ಯಕ್ರಮ

 

ಲೋಕದರ್ಶನ ವರದಿ

ಬೆಳಗಾವಿ : ದೊಡ್ಡ ದೊಡ್ಡ ವ್ಯಕ್ತಿಗಳ ಆಸಕ್ತಿಯನ್ನು ಗಮನಿಸಿ ಅವರಂತೆ ನಮ್ಮ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮಿಂದ ನಿರೀಕ್ಷಿತವಾದ ಸೇವೆಯನ್ನು ವ್ಯಾಪಾರಸ್ತರಿಗಾಗಲಿ ಹಾಗೂ ಸಕರ್ಾರಕ್ಕಾಗಲಿ ಕೊಡುವಂತ ಸಾಧ್ಯತೆಯಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ  ಜಂಟಿ ಆಯುಕ್ತ ಕೆ, ಬಸವರಾಜ ಅವರು ಹೇಳಿದರು. 

ಶನಿವಾರದಂದು ನಗರದ ಪ್ರತಿಷ್ಠಿತ ಕೆಎಲ್ಇ ಸೆಂಚುರಿ ಸಭಾಂಗಣದಲ್ಲಿ ಒಂದು ದಿನದ ತೆರಿಗೆ ಸಲಹಾಗಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಪದಾಧಿಕಾರಿಗಳ ಸತತ ಪ್ರಯತ್ನದಿಂದ ತೆರಿಗೆ ಸಲಹಾಗಾರರಿಗೂ ಕೂಡ ಜಿಸ್ಟಿನಲ್ಲಿ ಒಂದು ಗೌರವಯತ ಜವಾಬ್ದಾರಿ ಸಿಗುವಂತಾಯಿತು ಎಂದು ಹೇಳುತ್ತ  ಕನರ್ಾಟಕ ಸಕರ್ಾರವು ಈ ಜಿಎಸ್ಟಿ  ವಿಚಾರವನ್ನು ಮಂಡಿಸಿದಾಗ ಬೇರೆ ರಾಜ್ಯದ ಬೆಂಬಲ ಸಿಗುತ್ತಿರಲಿಲ್ಲ ಆ ಸಂದರ್ಭದಲ್ಲಿ ಬೇಸರವಾಗದೆ ತಮ್ಮ ಸತತ ಪ್ರಯತ್ನ ಮಾಡುವದರ ಮೂಲಕ ಯಶಸ್ಸನ್ನು ಕಂಡುಕೊಂಡಿದ್ದೇವೆ. ಹಾಗಾಗಿ ಆ ಗೌರವಯುತವಾದ ಜವಾಬ್ದಾರಿಯನ್ನು ಉಳಿಸಿಕೊಂಡು ಹೊಗುವದು ತೆರಿಗೆ ಸಲಹಾಗಾರನ ಕರ್ತವ್ಯ ಎಂದು ಹೇಳಿದರು. 

ರಿತೇಶ ಖಾಂಡೆಯವರು ಈ ಒಂದು ಕಾರ್ಯಕ್ರಮದ ವಿಷಯ ಪರಿಚಯಿಸಿ ಎಲ್ಲ ಗಣ್ಯರನ್ನು ಸ್ವಾಗತ ಮಾಡಿಕೊಂಡರು ಈ ಒಂದು ಕಾರ್ಯಕ್ರಮಕ್ಕೆ ಪ್ರಮುಖ ವ್ಯಕ್ತಿಗಳಾಗಿ ಸಹಾಯಕ ನಿದರ್ೇಶಕ ಮತ್ತು ಸಿಬಿಇಸಿ ತರಬೇತಿದಾರರು (ಎನ್,ಎ,ಸಿ,ಐ,ಎನ್)ಬೆಂಗಳುರು ಎಮ್,ಜಿ ಕೊದಂಡರಾಮ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಬೆಳಗಾವಿಯ ಮೆಗಣ್ಣವರ, ರಾಜ್ಯ ಜಿಎಸ್ಟಿ ಕಮೀಟಿಯ ಮುಖ್ಯಸ್ಥರು ಮತ್ತು ಕನರ್ಾಟಕ ಜಿಎಸ್ಟಿ ಸಲಹಾ ಸಮಿತಿಯ ಸದಸ್ಯರಾದ ಬಿಟಿ ಮನೋಹರ, ಕನರ್ಾಟಕ ರಾಜ್ಯ ತೆರಿಗೆ ತರಬೇತುದಾರ ಸಂಘದ ಅಧ್ಯಕ್ಷರಾದ ಎಸ್ಎಸ್ ಪಾಟೀಲ, ಹಾಗೂ ಕನರ್ಾಟಕ ರಾಜ್ಯ ಉಪಾಧ್ಯಕ್ಷರು ಮತ್ತು ಆಲ್ ಇಂಡಿಯಾ ಫೆಡರೇಶನ ಆಪ್ ಟ್ಯಾಕ್ಸ್ ತರಬೇತುದಾರರು (ದಕ್ಷಿಣ ವಲಯ) ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕೊನೆಯದಾಗಿ  ಹಿರಿಯ ನಿವೃತ ಅಧಿಕಾರಿಗಳಾದ ಕೊದಂಡರಾಮ ಅವರನ್ನು ಕನರ್ಾಟಕದ ಜಿಎಸ್ಟಿ ಜನಕ ಎಂದು ಹೇಳುತ್ತ ಶ್ರೀಧರ ಪಾರ್ಥಸಾರತಿಯವರು ಕಾರ್ಯಕ್ರಮಕ್ಕೆ ವಂದನೆಗಳನ್ನು ಹೇಳಿದರು.