ಲೋಕದರ್ಶನ ವರದಿ
ಶಿರಹಟ್ಟಿ 12: ಪಟ್ಟಣದ ಸಾಮರ್ಥ ಸೌಧದಲ್ಲಿ ಇತ್ತೀಚೆಗೆ ನಡೆದ ತಾಲೂಕ ಪಂಚಾಯತಿ ಮಾಸಿಕ ಪ್ರಗತಿ ಪರಶೀಲನಾ ಸಭೆಗೆ ಬಹುತೇಕ ಅಧಿಕಾರಿಗಳು ಗೈರ ಹಾಜರಾಗಿದ್ದರು. ಮುಂಚಿತವಾಗಿ ತಿಳಿಸಿದ್ದರೂ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ತಾಪಂ ಇಒ ನಿಂಗಪ್ಪ ಓಲೇಕಾರ ಆದೇಶಿಸಿದರು.
ದುಡಿಯುವವರಿಗೆ ವೇತನ ನೀಡಿ: ತಾಲೂಕ ವೈದ್ಯಾಧಿಕಾರಿ ಡಾ. |ಸುಭಾಸ ದೈಗೊಂಡ ಆರೋಗ್ಯ ಇಲಾಖೆ ಮಾಸಿಕ ಪ್ರಗತಿ ಹೆಳುತ್ತಿದ್ದಂತೆ, ಇಓ ಅವರು ಮಧ್ಯ ಪ್ರವೇಶಿಸಿ ಕಳೆದ ಎರಡು ದಿನಗಳ ಹಿಂದೆ ನಿಮ್ಮ ಆಸ್ಪತ್ರೆಯಲ್ಲಿ ಡಿ ದಜರ್ೆ ನೌಕರರರಾಗಿ ದುಡಿಯುವವರಿಗೆ ಏಜೇನ್ಸಿ ಅವರು ವೇತನ ಬಾಕಿ ಉಳಿಸಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು ಆ ಕುರಿತು ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ವೈದ್ಯರು ಇಗಾಗಲೆ ಅದು ಇತ್ಯರ್ಥವಾಗಿದೆ ಮತ್ತು ಅವರಿಗೆ ವೇತನ ನೀಡಲಾಗಿದೆ ಎಂದು ಉತ್ತರಿಸಿದರು.
ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ:
ಸರಕಾರ ಶುದ್ಧ ನೀರಿಗಾಗಿ ಸೂಮಾರು 12 ಲಕ್ಷದ ವರೆಗೆ ಖಚರ್ು ಮಾಡುತ್ತಿದೆ. ಆದರೆ ತಾಲೂಕಿನ ಬಹುತೇಕ ನೀರಿನ ಘಟಕಗಳು ಪ್ರಾರಂಭವಾದ ಎರಡೆ ದಿನಗಳಲ್ಲಿ ಸ್ಥಗಿತಗೊಂಡಿವೆ ಎಂಬುವದಾಗಿ ತಿಳಿದು ಬಂದಿದೆ. ಇದರ ಬಗ್ಗೆ ನಿಮಗೆ ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು ಎಂದು ಇಓ ಅವರು ನೀರು ಸರಬರಾಜು ಜೆಇ ಸಂತೋಷ ಲಮಾಣಿ ಅವರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಅವರು ತಾಲೂಕಿನಲ್ಲಿ ಒಟ್ಟು 109 ಘಟಕಗಳಿವೆ. ಅವುಗಳಲ್ಲಿ 45 ಸ್ಥಗಿತಗೊಂಡಿದ್ದವು ಅದರಲ್ಲಿ 25ಕ್ಕಿಂತ ಹೆಚ್ಚು ಘಟಕಗಳನ್ನು ರಿಪೇರಿ ಮಾಡಲಾಗಿದೆ, ಉಳಿದವುಗಳನ್ನು ಶೀಘ್ರ ರಿಪೇರಿ ಮಾಡಲಾಗುವದು ಎಂದು ಹೇಳಿದರು.
ಉಗ್ರಾಣದಲ್ಲಿ ಇಲಿ ಮತ್ತು ಹೆಗ್ಗಣಗಳು ಓಡಾತ್ತಿವೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಗ್ರಾಣದಲ್ಲಿ ಇಲಿ ಮತ್ತು ಹೆಗ್ಗಣಗಳು ಓಡಾತ್ತಿವೆ, ಹೀಗಾದರೆ ಇಲಾಖೆಯಿಂದ ಮಕ್ಕಳಿಗೆ ಪೌಷ್ಠಿಕ ಆಹಾರ ಹೇಗೆ ಸರಬರಾಜು ಮಾಡುತ್ತಾರೆ ಎಂದು ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಕೇಳಿದರು. ಇಗಾಗಲೆ ಉಗ್ರಾಣದಲ್ಲಿನ ಆಹಾರ ಸಾಮಗ್ರಿಗಳನ್ನು ಬೆರೆಡೆಗೆ ಸ್ಥಳಾಂತರಿಸಿದೆ ಮತ್ತು ಉಗ್ರಾಣದ ದುರಸ್ತಿ ಕಾರ್ಯವು ಪ್ರಾರಂಭವಾಗಿದೆ ಎಂದು ಸಿಡಿಪಿಒ ಅವರು ಉತ್ತರಿಸಿದರು. ತಾಲೂಕಿನ ಒಟ್ಟು 231 ಅಂಗನವಾಡಿಗಳಲ್ಲಿ 229 ಅಂಗನವಾಡಿಗಳಿಗೆ ಗಾಸ್ ಸಿಲೆಂಡರ್ ಅಳವಡಿಸಲಾಗಿದೆ. ಮತ್ತು ಕಾಯ್ದಿರಿಸಲು ಪ್ರತಿ ಅಂಗನವಾಡಿಗೆ ಒಂದು ಹೆಚ್ಚಿನ ಸಿಲೆಂಡರ್ ಅವಶ್ಯಕತೆಯಿದೆ ಎಂದು ಹೇಳಿದರು.