ಆರೋಪಿಗಳ ಗುರುತು ಪತ್ತೆಗಾಗಿ ಮೈಸೂರಿಗೆ ಶಾಸಕ ತನ್ವೀರ್ ಸೇಠ್

ಮೈ ಸೂರು, ಜ 9 ಶಾಸಕ ತನ್ವೀರ್ ಸೇಠ್ ಇಂದು ಮೈಸೂರಿಗೆ ವಾಪಸ್ಸಾಗಲಿದ್ದಾರೆ.ತನ್ವೀರ್ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗುರುತು ಪತ್ತೆ ಹಚ್ಚಲು ಶಾಸಕರು ಮೈಸೂರಿಗೆ ತೆರಳಲಿದ್ದಾರೆ.ಆರೋಪಿ ಫರ್ಹಾನ್ ಪಾಷಾ ಗುರುತು ಹಿಡಿಯಲು ತನ್ವೀರ್ ಆಗಮಿಸಿದ್ದು, ಇಂದು ಮೈಸೂರು ಜೈಲಿನಲ್ಲಿ ಆರೋಪಿ ಗುರುತು ಪತ್ತೆ ಹಚ್ಚಲಿದ್ದಾರೆ.ಶಾಸಕರ ಜತೆಗೆ 6 ಮಂದಿ ಪ್ರತ್ಯಕ್ಷದರ್ಶಿಗಳು ಹಾಗೂ ಇಬ್ಬರು ಪೊಲೀಸರು ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಕಳೆದ ನವೆಂಬರ್ 18ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ನಡೆದಿತ್ತು. ಫರ್ಹಾನ್ ಪಾಷಾ ಚಾಕುವಿನಿಂದ ಕತ್ತಿನ ಭಾಗಕ್ಕೆ ಇರಿದಿದ್ದನು. ಈ ವೇಳೆ ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ತಕ್ಷಣವೇ ಶಾಸಕರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ವಿದೇಶದಲ್ಲಿ ಚಿಕಿತ್ಸೆ ಮುಂದುವರೆಸಿದ್ದರು. ಚಿಕಿತ್ಸೆ ಮುಕ್ತಾಯಗೊಂಡ ನಂತರ ದುಬೈನಲ್ಲೇ ಶಾಸಕರು ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ವಿಶ್ರಾಂತಿ ಮುಗಿಸಿ ಅವರು ವಿದೇಶದಿಂದ ಭಾರತಕ್ಕೆ ಮರಳಿದ್ದಾರೆ.