ತಾನಾಜಿ ಚಿತ್ರದಲ್ಲಿ ನಟಿಸಿದ್ದು ಖುಷಿ ತಂದಿದೆ: ಸೈಫ್

ಮುಂಬೈ, ಜ.27:           ತಾನಾಜಿ ಚಿತ್ರದಲ್ಲಿ ಮಾಡಿದ ಪಾತ್ರ ವೃತ್ತಿ ಜೀವನದ ಉತ್ತಮ ಪಾತ್ರ ಎಂದು ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ತಿಳಿಸಿದ್ದಾರೆ. 

ಓಮ್ ರಾವತ್ ನಿರ್ದೇಶನದ ತಾನಾಜಿ ಚಿತ್ರ 200 ಕೋಟಿ ಕ್ಲಬ್ ಸೇರಿಕೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ಸುಬೇದಾರ್ ತಾನಾಜಿ ಮಾಲುಸರೆ ಅವರ ಮೇಲೆ ಚಿತ್ರಿಕರಿಸಲಾಗಿದೆ. ಅಜಯ್ ದೇವಗನ್ ತಾನಾಜಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸೈಫ್ ಅಲಿ ಖಾನ್ ಉದಯ್ ಭಾನು ಪಾತ್ರಕ್ಕೆ ಜೀವ ತುಂಬಿದ್ದಾರೆ.  

ಈ ಬಗ್ಗೆ ಮಾತಾನಡಿರುವ ಸೈಫ್ “ಉದಯ್ ಭಾನು ಪಾತ್ರ ತಮ್ಮ ವೃತ್ತಿ ಜೀವನದ ಶ್ರೇಷ್ಠ ಪಾತ್ರ ಎಂದಿದ್ದಾರೆ. ಈ ರೀತಿಯ ಪ್ರೇರಣೆ ಹಾಗೂ ಮನೋರಂನಾ ಚಿತ್ರದ ಭಾಗವಾಗಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದಿದ್ದಾರೆ.  

ಈ ಪಾತ್ರವನ್ನು ನೀಡಿದಕ್ಕಾಗಿ ಸೈಫ್ ಅವರು ಅಜಯ್ ದೇವಗನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.