ಐಟಿ ಅಧಿಕಾರಿಗಳಿಂದ ಚೆನ್ನೈನಲ್ಲಿ ತಮಿಳು ನಾಯಕ ನಟ ವಿಜಯ್ ತೀವ್ರ ವಿಚಾರಣೆ

ಚೆನ್ನೈ, ಫೆ ೫ :     ತಮಿಳು ಚಿತ್ರ ನಿರ್ಮಾಣ ಸಂಸ್ಥೆಯೊಂದರ   ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು  ಬುಧವಾರ ತಮಿಳು  ಚಿತ್ರರಂಗದ   ನಾಯಕ  ನಟ  ವಿಜಯ್ ಅವರನ್ನು   ಪ್ರಶ್ನೆಗೊಳಪಡಿಸಿದ್ದರು.

ಚಿತ್ರವೊಂದರ  ಚಿತ್ರೀಕರಣ  ಸಮಯದಲ್ಲಿ ಸುಮಾರು  ಐದು ಗಂಟೆಗಳ ಕಾಲ   ವಿಜಯ್  ಅವರನ್ನು  ಪ್ರಶ್ನಿಸಿದ ನಂತರ ಐಟಿ ಅಧಿಕಾರಿಗಳು   ವಿಜಯ್   ಅವರ  ನಿವಾಸದಲ್ಲೂ   ವಿಚಾರಣೆ ಮುಂದುವರಿಸಿದ್ದಾರೆ ಎಂದು ಮೂಲಗಳು ಹೇಳಿವೆ

ಎಜಿಎಸ್ ಸಿನಿಮಾಸ್  ಸಂಸ್ಥೆ  ಕಚೇರಿ. ಆಸ್ತಿಗಳ ಜತೆಗೆ   ಸಿನಿಮಾ ಫೈನಾನ್ಷಿಯರ್ ಅನ್ಬು ಚೆಲಿಯನ್   ಅವರ  ಮಧುರೈ  ಕಚೇರಿಗಳ ಮೇಲೆ  ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ವಿಜಯ್  ನಾಯಕರಾಗಿ ನಟಿಸಿದ್ದ  ಬಿಜಿಲ್  ಸಿನಿಮಾವನ್ನು ಕಳೆದ ವರ್ಷ ಎಜಿಎಸ್ ಸಿನೆಮಾಸ್   ನಿರ್ಮಿಸಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ   ವಿಜಯ್  ಅವರ ಮರ್ಸೆಲ್  ಚಿತ್ರದಲ್ಲಿ   ಜಿಎಸ್ ಟಿ  ಹಾಗೂ  ನೋಟು ರದ್ದತಿ  ವಿರುದ್ದವಾಗಿ  ಸಂಭಾಷಣೆ ಇದ್ದ ಕಾರಣ,    ತಮಿಳುನಾಡಿನ ಬಿಜೆಪಿ ಘಟಕ   ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಜಿಎಸ್‌ಟಿ ಮತ್ತು ಡಿಜಿಟಲ್ ಇಂಡಿಯಾ ಅಭಿಯಾನದ ಬಗ್ಗೆ    ಕೆಟ್ಟ ಚಿತ್ರಣ ಮೂಡಿಸುವ  ಚಲನಚಿತ್ರದಲ್ಲಿನ ಕೆಲವು ಸಂಭಾಷಣೆಗಳನ್ನು ತೆಗೆದು ಹಾಕಬೇಕೆಂದು ಬಿಜೆಪಿ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.