ಚೆನ್ನೈ, ಜ 19 : ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಇಂದು ಪಲ್ಸ್ ಪೋಲಿಯೊ ಅಭಿಯಾನವನ್ನು ಉದ್ಘಾಟಿಸಿ, ಕಳೆದ 16 ವರ್ಷಗಳಿಂದಲೂ ರಾಜ್ಯ ಪೋಲಿಯೊ ಮುಕ್ತವಾಗಿಯೇ ಉಳಿದಿದೆ ಎಂದು ಹೇಳಿದರು.
ಮುಖ್ಯಮಂತ್ರಿಯ ಗ್ರೀನ್ವೇಸ್ ರಸ್ತೆ ನಿವಾಸದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ಐದು ವರ್ಷದೊಳಗಿನ ಸುಮಾರು 70.50 ಲಕ್ಷ ಮಕ್ಕಳಿಹೆ ಲಸಿಕೆ ಹಾಕಲಾಗುತ್ತಿದೆ .
ಸರ್ಕಾರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 43,051 ಬೂತ್ಗಳನ್ನು ಸ್ಥಾಪಿಸಲಾಗುಗಿದೆ ಅಧಿಕೃತ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆಗಳು, ಐಸಿಡಿಎಸ್ ಕೇಂದ್ರಗಳು, ಶಾಲೆಗಳು ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ
ಪೋಲಿಯೊ ಹನಿಗಳನ್ನು ನಿರ್ವಹಣೆಗೆ 1,ಸಾವಿರ ಮೊಬೈಲ್ ತಂಡಗಳನ್ನು, ಅಲ್ಲದೆ, 3,000 ಕ್ಕೂ ಹೆಚ್ಚು ವಾಹನಗಳನ್ನು ಅಭಿಯಾನಕ್ಕಾಗಿ ನಿಯೋಜಿಸಲಾಗಿದೆ.
ಆರೋಗ್ಯ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ ಸುಮಾರು ಎರಡು ಲಕ್ಷ ಸಿಬ್ಬಂದಿ,
ಶಿಕ್ಷಣ ಮತ್ತು ಇತರ ಸರ್ಕಾರಿ ಇಲಾಖೆಯ ಸ್ವಯಂಸೇವಕರು ಅಭಿಯಾನದಲ್ಲಿ ಭಾಗವಹಿಸಿದ್ದಾರೆ.