ಚೆನ್ನೈ, ಆಗಸ್ಟ್ 24 ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಅವರ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದರೆ. ದೇಶದಲ್ಲಿ ಜಿಎಸ್ಟಿ ಪದ್ದತಿ ಜಾರಿಗೆ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು. ಜೇಟ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ನಾಯಕರಾಗಿ ನಂತರ ಸುಪ್ರೀಂ ಕೋರ್ಟ್ನ್ಲ್ಲಿ ಹಿರಿಯ ವಕೀಲರಾಗಿಯೂ ತಮ್ಮದೆ ಆದ ಛಾವು ಮೂಡಿಸಿದ್ದರು ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.