ಲೋಕದರ್ಶನ ವರದಿ
ತಾಂಬಾ 08: ಬೀಕರ ಬರಗಾಲದ ಬಿರು ಬಿಸಿಲಿಗೆ ಬತ್ತಿ ಹೋಗಿರುವ ತಾಂಬಾ ಗ್ರಾ. ಪಂ ವ್ಯಾಪ್ತಿಯಲ್ಲಿ ಬರುವ ಗೂಗಿಹಾಳ ಕೆರೆಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿದು ಬರುತ್ತಿರುವುದು ಈ ಭಾಗದ ಹತ್ತಾರು ಗ್ರಾಮದ ಜನತೆಯಲ್ಲಿ ಸಂತಸ ಮನೆ ಮಾಡಿದೆ.
ಈ ಬಾರಿಯ ಮಳೆಯ ಕೊರತೆಯಾದ ಕಾರಣ ಗೂಗಿಹಾಳ ಕೆರೆಯಲ್ಲಿ ನೀರಿಲ್ಲದೆ ಅಂತರ್ಜಲದ ಕೊರತೆಯಿಂದ ಅನೇಕ ಕೊಳವೆ ಬಾವಿಗಳಲ್ಲಿ ನೀರನ ಅಭಾವ ಹೆಚ್ಚಿತ್ತು ಮತ್ತು ಗ್ರಾಮದ ಜನತೆ ಸುಮಾರು ದಿನಗಳಿಂದ ನೀರಿಗಾಗಿ ನಿತ್ಯವು ಪರದಾಡುವಂತಾಗಿತ್ತು. ಇದರಿಂದ ಗ್ರಾಮದ ಜನತೆಯಲ್ಲಿ ಆತಂಕದ ಛಾಯ ಮೂಡಿತ್ತು.
ತಾಂಬಾ ಗ್ರಾಮದ ಒಳಗೊಂಡಂತೆ ಕೆಂಗನಾಳ, ಶಿವಪುರ, ಬಂಥನಾಳ, ಸುರಗಿಹಳ್ಳಿ, ಬೆನಕನಹಳ್ಳಿಅಥರ್ಗಾ ವಿವಿದ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ತಲೆದೂರಿತ್ತು, ಆಲಮಟ್ಟಿ ಜಲಾಶಯದಿಂದ ಗೂಗಿಹಾಳ ಕೆರೆಗೆ ನೀರು ಹರಿದು ಬರುತ್ತಿರುವುದು ಈ ಭಾಗದ ಬಹು ಹಳ್ಳೀಗಳಿಗೆ ಅನುಕೂಲವಾಗಿರುವುದ್ದಂತು ಸತ್ಯ, ಅಲ್ಲದೇ ಗೂಗಿಹಾಳ ನೀರಿನ ಶುಧ್ಧೀಕರಣ ಘಟಕ, ಬಹು ಹಳ್ಳಿಗಳ ಶುದ್ಧ ಕುಡಿಯುವ ನೀರನ ಘಟಕಕ್ಕೆ ಹಾಗೂ ತಾಂಬಾ ಗ್ರಾಮಕ್ಕೆ ನೀರನ್ನು ಒದಗಿಸಲು ಇದರಿಂದ ಅನುಕೂಲವಾಗುವುದ್ದಲ್ಲದೆ, ಪಶು ಪಕ್ಷಿಗಳಿಗೆ ಕುಡಿಯಲು ನೀರು ಅನುಕೂಲವಾಗಲಿದೆ.
ಆಲಮಟ್ಟಿ ಜಲಾಶಯದಿಂದ ಗೂಗಿಹಾಳ ಕೆರೆಗೆ ನೀರನ್ನು ಹರಿಸುವ ಮೂಲಕ ತಾಂಬಾ ಗ್ರಾಮದ ಜನತೆ ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ತಕ್ಕ ಮಟ್ಟಿಗೆಯಾದರೂ ತೋಟಗಾರಿಕೆ ಸಚಿವ ಎಮ್.ಸಿ. ಮನಗೂಳಿಯವರು ಅನುಕೂಲ ಮಾಡಿದ್ದರೆ. ಕೆರೆಗೆ ಈಗ ನೀರು ಹರಿದು ಬರುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕೆರೆಯ ನೀರನ ಸಂಗ್ರಹ ಘಟಕಕ್ಕೆ ಬರಲಿದ್ದು, ಅಲ್ಲಿ ಶುದ್ಧಿಕರಣಗೊಂಡು ಗ್ರಾಮದ ಜನತೆಗೆ ವಾರ್ಡರ್ಗಳ ಸರದಿಯಂತೆ ನೀರು ಬರಲಿದೆ, ಮನಗೂಳಿ ಅವರ ಈ ಕಾರ್ಯಕ್ಕೆ ಗ್ರಾಮದ ಜನತೆ ಆಭಿನಂನೆ ಸಲ್ಲಿಸಿದ್ದಾರೆ.
ಗೂಗಿಹಾಳ ಕೆರೆಯ ಇತಿಹಾಸದಲ್ಲಿ ಯಾವತ್ತು ಬೇಸಿಗೆ ಕಾಲದಲ್ಲಿ ಕೆರೆಗೆ ನೀರು ಬಂದಿಲ್ಲ. ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು ನೀರಿಗಾಗಿ ಪರದಾಡುವ ಸ್ಥಿತಿ ನಿಮರ್ಾಣವಾಗುತ್ತಿತ್ತು. ಇಗಲು ಹಾಗೇಯೆ ಆಗಿತ್ತು ಇದನ್ನುಅರ್ತಿಸಿಕೊಂಡು ತೋಟಗಾರಿಕೆ ಸಚಿವ ಎಮ್.ಸಿ. ಮನಗೂಳಿ ಅವರು ಸರ್ಕಾರದ ಮೊರೆ ಹೋಗಿ ಬೇಸಿಗೆ ಮುಗಿಯುವವರೆಗೂ ಆಲಮಟ್ಟಿ ಜಲಾಶಯದಿಂದ ಗೂಗಿಹಾಳ ಕೆರೆಗೆ ನೀರು ಹರಿದ ಬರಲಿದೆ. ಎಂಬ ನಮಗೆ ವಿಶ್ವಾಸ ಕೊಟ್ಟಿದ್ದಾರೆ ಎಂದು ಸಿದ್ದು ಹತ್ತಳ್ಳಿ ಪತ್ರಿಕೆಗೆ ತಿಳಿಸಿದರು