ಲೋಕದರ್ಶನ ವರದಿ
ತಾಂಬಾ 18: ರಾಜ್ಯಾದ್ಯಂತ ನಶಿಸಿಹೊಗುತ್ತಿರುವ ಜಾನಪದ ಕಲೆ ಸಾಹಿತ್ಯ ರಕ್ಷಣೆಯ ಜತೆಗೆ, ರಾಜ್ಯದಲ್ಲಿನ ಜಾನಪದ ಕಲಾಕಾರರನ್ನು ಗುರುತಿಸಿ ಅವರ ಕಲೆಯನ್ನು ಬೆಳಕಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಸಿಂದಗಿ ಶಾಸಕ ಎಮ್.ಸಿ.ಮನಗೊಳಿ ಹೇಳಿದರು.
ಬೆಂಗಳೂರಿನ ಕನರ್ಾಟಕ ಗಡಿ ಪ್ರದೇಶ ಅಭಿವೃಧಿ ಪ್ರಾಧಿಕಾರ ಜಿಲ್ಲಾ ಆಡಳಿತ ಮತ್ತು ಗ್ರಾಮದ ವೀರಭದ್ರೇಶ್ವರ ಭಜನಾ ಕಲಾ ತಂಡದವರ ಆಶ್ರಯದಲ್ಲಿ ನಡೆದ ಗಡಿನಾಡು ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಬ್ಬರಿಂದ ಒಬ್ಬರಿಗೆ ಬಾಯಿ ಮುಲಕ ಹರಡಿದ ಜಾನಪದ ಸಾಹಿತ್ಯವನ್ನು ನಾವು ಉಳಿಸಿ ಬೆಳೆಸಬೇಕು ಈ ನಿಟ್ಟಿನಲ್ಲಿ ತಾಂಬಾ ಗ್ರಾಮದ ಶ್ರೀ ವಿರಭದ್ರೇಶ್ವರ ಭಜನಾ ಕಲಾ ಸಂಘದ ನೇತೃತ್ವದಲ್ಲಿ ನಾಡಿನ ಉದ್ದಗಲಕ್ಕೂ ಜಾನಪದ ಕಲಾವಿಧರನ್ನು ಗುರುತಿಸುವ ಮೂಲಕ ತನ್ನದೆಯಾದ ಛಾಪು ಮೂಡಿಸಿದೆ. ತಾಂಬಾ ಗ್ರಾಮದಲ್ಲಿ ಪತ್ರಕರ್ತರಾದ ಲಕ್ಷ್ಮಣ ಹಿರೇಕುರಬರ ಅವರು ಈಕಲಾ ಸಂಘದ ಪ್ರತಿಯೋಂದು ಕಾರ್ಯಕ್ರಮಗಳನ್ನು ಸೇರಿದಂತೆ ಈ ಭಾಗದಲ್ಲಿ ನಡಿಯುವ ಪ್ರತಿಯೋಂದು ಸುದ್ದಿಗಳನ್ನು ಪ್ರಕಟಿಸಿ ತಾಂಬಾ ಗ್ರಾಮವನ್ನು ರಾಜ್ಯದಲ್ಲಿಯೆ ಗುರುತ್ತಿಸುವಂತಾಗಿದೆ ಎಂದರು.
ಮಲ್ಲಯ್ಯ ಸಾರಂಗಮಠ ಬಿಜೆಪಿ ಹಿರಿಯ ಮುಖಂಡ ಜಿ.ವೈ.ಗೊರನಾಳ, ತಾಪಂ ಸದಸ್ಯ ಪ್ರಕಾಶ ಮುಂಜಿ, ಗುರುಸಂಗಪ್ಪ ಬಾಗಲಕೋಟ, ಪಿಎಲ್ಡಿ ಬ್ಯಾಂಕ ನಿರ್ದೇಶಕ ರಾಯಗೊಂಡ ಪೂಜಾರಿ, ಈರಣ್ಣ ಪತ್ತಾರ, ರಾಚಪ್ಪಾ ಗಳೇದ. ದೇವಪ್ಪಾ ತದ್ದೆವಾಡಿ, ಆರ್.ಆರ್.ಕತ್ತಿ, ಕಾಶಿನಾಥ ಪತ್ತಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ 14 ಜನ ಜಾನಪದ ಹಿರಿಯ ಕಲಾವಿದರು ಹಾಗೂ ಕೃಷಿಪಂಡಿತರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ 18ಕಲಾ ಮೇಳಗಳು ತಮ್ಮ ಕಲೆಯನ್ನು ಪ್ರದಶರ್ಿಸಿದರು. ಶಿಕ್ಷಕ ಎಮ್.ಡಿ.ಬೈರಾಮಡಗಿ ಸ್ವಾಗತ್ತಿಸಿದರು, ಎ.ಎಸ್.ಸರಸಂಬಿ ನಿರೂಪಿಸಿದರು. ಪ್ರಕಾಶ ಪಾಟೀಲ ವಂದಿಸಿದರು.