ತಾಂಬಾ 22: ಅಧಿಕಾರ ಶಾಶ್ವತ ಅಲ್ಲ ಇರುವ ದಿನಗಳು ಸಾರ್ವಜನಿಕರ ಬಡವರ ನೊಂದವರ ದ್ವನಿಯಾಗಿ ಕಾರ್ಯ ಮಾಡೋಣ, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ನಾನ್ನು ಜೀತದಾಳಿನಂತೆ ದುಡಿದು ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.
ಎಸ್.ಡಿ.ಪಿ. ಯೋಜನೆ ಅಡಿಯಲ್ಲಿ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಈ ರಸ್ತೆ ಸುಧಾರಣೆ ಮಾಡಬೇಕೆಂಬ ಸಂಕಲ್ಪದಂತೆ ಕಾಮಗಾರಿಗೆ ಅನುದಾನ ನೀಡಲಾಗಿದೆ. ನಾನು ಯಾವುದೇ ಧರ್ಮ ಹಾಗೂ ಜಾತಿಗೆ ಅಂಟಿಕೊಂಡು ಕೆಲಸ ಮಾಡದೆಯೇ ಎಲ್ಲ ಧರ್ಮ ಹಾಗೂ ಪ್ರತಿಯೊಂದು ಜಾತಿಯವರ ಕೆಲಸ ಕಾರ್ಯ ಮಾಡುತ್ತಿದ್ದೇನೆ. ಅದಕ್ಕೆ ಪ್ರತಿಯೊಂದು ಸಮಾಜದವರು ಯಾವುದೇ ಕೆಲಸ ಕಾರ್ಯಗಳಿದ್ದರೆ ನಿರ್ಭಿತಿಯಿಂದ ನನ್ನ ಬಳಿ ಬಂದು ಕೆಲಸ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಸಿದ್ದಯ್ಯ ವಸ್ತ್ರದ ಸ್ವಾಮಿಗಳು ಸಾನಿಧ್ಯವಹಿಸಿದರು, ತಾಪಂ ಸದಸ್ಯ ಪ್ರಕಾಶ ಮುಂಜಿ, ಆರ್.ಆರ್.ಕತ್ತಿ, ಎಲ್.ಡಿ.ಮಡಗೊಂಡ, ಅರವಿಂದ ಹಂಗರಗಿ, ಸುಭಾಸ ಅಳಗೊಂಡಗಿ, ಭಿರಪ್ಪ ವಗ್ಗಿ, ಮಾಶೀಮ ಮಂಗಲಗೇರಿ, ಸದಾಶಿವಾ ಗಡದ, ರಾಜು ಆಳೂರ, ರೀಯಾಜ್ ಮೂಮಿನ್, ಮಲಕಪ್ಪ ಹೋರ್ತ, ಸಿದ್ದು ಹತ್ತಳ್ಳಿ, ಗೋಪಾಲ್ ಅವರಾದಿ, ಅಡಿವಪ್ಪ ರೋಟಿ, ಸತೀಶ ನಾಟೀಕಾರ, ಬಂದು ನಾಗಾವಿ, ಸಿದ್ದಪ್ಪ ಕಿಣಗಿ, ಅಪ್ಪಾಸಾಹೇಬ ಅವಟಿ, ವಿಠ್ಠಲ ಮೂಲಿಮನಿ, ಶರಣಪ್ಪ ಗುಬ್ಯಡ, ದುಡಪ್ಪ ಜಕಾತ್ತಿ, ಚಂದು ಮಾಶ್ಯಾಳ, ಶಾಂತಪ್ಪ ಹಚನಾಳ, ಗುರಪ್ಪಾ ಜಂಬಗಿ, ದೌಲ್ ರಜಪೂತ್, ಸಿದ್ದನಗೌಡ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು ಕೆ.ಎನ್.ಪಾಟೀಲ ಸ್ವಾಗತಿಸಿದರು. ಎ.ಎಸ್.ಸರಸಂಬಿ ನಿರೂಪಿಸಿದರು. ಶಂಕರ ಪ್ಯಾಟಿ ವಂದಿಸಿದರು.