ಲೋಕದರ್ಶನ ವರದಿ
ತಾಂಬಾ: ಇಂಡಿ ಏತನೀರಾವರಿ(ಗುತ್ತಿಬಸವಣ್ಣ) ಕಾಲುವೆಗೆ ನೀರು ಹರಿಸಿ ತಾಂಬಾ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸಂಬಂದ ಪಟ್ಟ ದೋಡ್ಡ ಹಳ್ಳದ ಬಾಂದ್ರಾಗಳಿಗೆ ನೀರು ಹರಿಸಿ ರೈತರಿಗೆ ಅನೂವು ಮಾಡಿಕುಡುವದು ಸೇರಿದಂತೆ ವಿವಿಧ ರೈತಪರ ಬೇಡಿಕೆಗಳ ಇಡೆರಿಕೆಗೆ ವತ್ತಾಯಿಸಿ ನಡೆದ ಸರದಿ ಉಪವಾಸ ಸತ್ಯಾಗ್ರಹ 2ನೆಯ ದಿನದ ಧರಣಿಯಲ್ಲಿ ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷರಾದ ಪ್ರವೀಣ ತಂಗಾ ಉಪಾಧ್ಯಕ್ಷ ಪ್ರಕಾಶ ಪಾಟೀಲ ನೇತೃತ್ವದ ತಂಡ ಹೊರಾಟದಲ್ಲಿ ಪಾಲ್ಗೋಂಡು ಬೆಂಬಲ ವ್ಯಕ್ತಪಡೆಸಿತು.
ತಾಂಬಾ, ಬೆನಕನಹಳ್ಳಿ, ಅಧಗರ್ಾ, ತಡವಲಗಾ, ಗೋರನಾಳ, ಬನಿಹಟ್ಟಿ, ತೆನ್ನಿಹಳ್ಳಿ, ಬಂಥನಾಳ, ಸುರಗಿಹಳ್ಳಿ, ವಾಡೆ ಗ್ರಾಮದ ನೂರಾರು ಜನ ರೈತರ ಸಮೇತ ಪಾಲ್ಗೋಂಡಿದರು. ಮುಂಜಾನೆ 8ರಿಂದ ಸಂಜೆ6ರವರೆಗೆ ಧರಣಿ ಸತ್ಯಗ್ರಹ ನಡೆಸಲಾಗುತ್ತಿದೆ.
ತಾಪಂ ಸದಸ್ಯ ಪ್ರಕಾಶ ಮುಂಜಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ, ರಾಯಗೊಂಡ ಪೂಜಾರಿ ಮಾತನಾಡಿ ರೈತರಿಗೆ ಜಿವನಾಡಿಯಾದ ಗುತ್ತಿ ಬಸವಣ್ಣ ಏತ ನೀರಾವರಿ ಕಾಲೂವೆಗೆ ನೀರು ಹರಿಸುವದು ಅವಶ್ಯವಾಗಿರುತ್ತದೆ ಈ ಭಾಗದ ಜನತೆ ಸದಾ ಭರಗಾಲದ ಭವಣೆಗೆ ತುತ್ತಾಗಿರುವದರಿಂದ ಈ ಕಾಲೂವೆಗೆ ಶೀಘ್ರ ನೀರು ಹರಿಸಿ ರೈತರ ಪ್ರಾಣ ಉಳಿಸಬೇಕು ಮಂಡುತನದ ಕಾರ್ಯ ಅಧಿಕಾರಿಗಳು ಬಿಟ್ಟು ರೈತರ ನೇರವಿಗೆ ಬರಬೇಕು ಎಂದು ಆಗ್ರಹಿಸಿದರು.
ಹೋರಾಟದಲ್ಲಿ ಗುರಸಂಗಪ್ಪಾ ಬಾಗಲಕೋಟ, ಸಂಜಿವ ಗೋರನಾಳ, ಸಿದ್ದು ಬೂದಿಹಾಳ, ಸಿದ್ದು ಮುಂಜಿ, ಸುರೇಶ ನಡಗಡ್ಡಿ, ಪರಸುರಾಮ ಬೀಸನಾಳ, ಸಂತೋಷ ಸರಸಂಬಿ, ಅಮೋಗಿ ಹಿರೇಕುರಬರ, ಪ್ರವಿಣ ಹದರಿ, ದೇವಪ್ಪಾ ಚಟ್ಟರಕಿ, ಪಂಚ್ಚು ವಿರಕ್ತಮಠ, ಶಂಕರ ದೇವುರ, ಪ್ರಕಾಶ ಪತ್ತಾರ, ಸಿದ್ದಾರಾಯ ತಡವಲಗಾ, ನಿಂಗೇಶ ಜೋರಾಪೂರ, ಹಣಮಂತ ಕಾಳೆ, ಭಿಮಣ್ಣ ಉಕ್ಕಲ್ಲಿ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಪಾಲ್ಗೋಂಡಿದ್ದರು.