ತಾಂಬಾ: ಲಿಂಗತಾರತಮ್ಯ ಮಾಡದೆ ಶಿಕ್ಷಣ ನೀಡಿ: ಬಂಡಗಾರ

ಲೋಕದರ್ಶನ ವರದಿ

ತಾಂಬಾ 17: ಲಿಂಗ ತಾರತಮ್ಯ ಮಾಡದೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹೆಣ್ಣು ಮಗುವಿಗು ಎಲ್ಲಾವಿಷಯದಲ್ಲಿಯು ಸಮಾನ ಅವಕಾಶ ಕಲ್ಪಿಸಬೇಕು ಗಂಡು ಹೆಣ್ಣು ಎಂಬ ಕೆಟ್ಟ ವಿಚಾರ ಪಾಲಕರು ಬಿಡಬೇಕು ಎಂದು ಇಂಡಿ ಕ್ಷೇತ್ರಸಮನ್ವಯಾಧಿಕಾರಿಗಳಾದ ಸಿ.ಎಮ್.ಬಂಡಗಾರ ಹೇಳಿದರು.

ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 8ನೇ ವರ್ಗದ ವಿದ್ಯಾರ್ಥಿನಿಯರ  ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ  ಮಾತನಾಡಿದ ಅವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವದು ಅತ್ಯವಶಕ ಮಕ್ಕಳ ಗುಣಾತ್ಮಕ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಮಕ್ಕಳಲ್ಲಿ ಸೃಜನ್ಮಾಕ ಸಾಮರ್ಥ ಹೆಚ್ಚಿಸುವದು ಸ್ಪಷ್ಟ ಓದು ಶುದ್ಧ ಬರಹ ಅಭಿವ್ಯಕ್ತಿ ಸಾಮರ್ಥಗಳ ವಿಕಾಸಕ್ಕೆ ಸ್ಪಧರ್ಾ ಮನೋಭಾವನೆ ಮೂಡಿಸುವಲ್ಲಿ ಖಾಸಗಿ ಶಾಲೆಗಳಿಗೆ ಪೈಪೊಟೆ ನೀಡುತ್ತಿರುವ ಈ ಶಾಲೆಯ ನೇತೃತ್ವ ವಹಿಸಿದ ಮುಖ್ಯಗುರುಮಾತೆ ಜಿ.ಎ.ಕುಟಕನಕೇರಿ ಹಾಗೂ ಎಮ್.ಎಮ್.ವಾಲಿಕಾರ ಕಾರ್ಯ ಶ್ಲಾಘನೀಯ ಎಂದರು.

ದೈಹಿಕ ಶಿಕ್ಷಣಾಧಿಕಾರಿ ಎ.ಬಿ.ಕೌಲಗಿ ಮಾತನಾಡಿ ಪಾಲಕರು ಮಕ್ಕಳಿಗೆ ಒಳ್ಳೆಯ ವಿಚಾರಗಳು ತಿಳಸಿ ಕೆಟ್ಟ ವಿಚಾರಗಳಿಂದ ದೂರ ಇಡಬೇಕು ಮಕ್ಕಳಿಗೆ ಒಂದು ಗುರು ಇರಬೇಕು ನಾನು ಜೀವನದಲ್ಲಿ ಇಂತಹದೆ ಒಂದು ಉದ್ಯೋಗ ಪಡೆಯುತ್ತೆನೆ ಎಂದು ಛಲ ತೊಟ್ಟರೆ ಮಾತ್ರ ನೀವು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾದ್ಯ ಎಂದರು ಎಸ್ಡಿಎಮ್ಸಿ ಅಧ್ಯಕ್ಷ ವಿ ಎ ಮೂಲಿಮನಿ ಅಧ್ಯಕ್ಷತೆ ವಹಿಸಿದರು ಸಿ.ಎಮ್.ಬಂಡಗಾರ ಎಸ್.ಡಿ.ಎಮ್.ಸಿ ಸದಸ್ಯರಾದ ಪ್ರೇಮಲತಾ ತಂಗಾ ಸಿದ್ದು ಹತ್ತಳ್ಳಿ ಭೀರಪ್ಪಾ ವಗ್ಗಿ ಸಿಧಗೊಂಡ ಹಿರೇಕುರಬರ ಶ್ರೀಶೈಲ ಕಲ್ಲೂರ,ಕೆಎಸ್ಪಿಎಸ್ಟಿಎ ಅಧ್ಯಕ್ಷ ವೈ.ಟಿ.ಪಾಟೀಲ, ಪ್ರಾಶಾಸಿಸನಿರ್ದೇಶಕ ಎಮ್.ಡಿ.ಭೈರಾಮಡಗಿ ಪತ್ರಕರ್ತ ಲಕ್ಷ್ಮಣ ಹಿರೇಕುರಬರ, ಅಶೋಕ ಗಂಗನಳ್ಳಿ ಮುಖ್ಯ ಗುರುಮಾತೆ ಜಿ ಎ ಕುಟಕನಕೇರಿ, ಲಕ್ಷ್ಮೀ ಕನ್ನೂರ ಮತ್ತಿತರರು ಉಪಸ್ಥಿತರಿದ್ದರು 

ಎಮ್ ಎಮ್ ವಾಲಿಕಾರ ಸ್ವಾಗತಿಸಿದರು ಎ ಎಸ್ ಸರಸಂಬಿ ನಿರೂಪಿಸಿ ವಂದಿಸಿದರು ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.