ತಾಂಬಾ: 19ನೇ ದಿನಕ್ಕೆ ಕಾಲಿಟ್ಟ ಧರಣಿ

ಲೋಕದರ್ಶನ ವರದಿ

ತಾಂಬಾ 29: ಇಂಡಿ ಏತನೀರಾವರಿ(ಗುತ್ತಿಬಸವಣ್ಣ) ಕಾಲುವೆಗೆ ನೀರು ಹರಿಸಿ ತಾಂಬಾ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸಂಬಂಧಪಟ್ಟ ದೊಡ್ಡ ಹಳ್ಳದ ಬಾಂದ್ರಾಗಳಿಗೆ ನೀರು ಹರಿಸುವದು ಸೇರಿದಂತೆ ವಿವಿಧ ರೈತಪರ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಸರದಿ ಸತ್ಯಾಗ್ರಹ ಗುರುವಾರ 19ನೇ ದಿನಕ್ಕೆ ಕಾಲಿಟ್ಟಿದೆ.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ ರೈತರ ಕೇಲಸ ಮಾಡಲು ನಾವು ಸಿದ್ದ ತಮ್ಮ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಸರಕಾರ ಇಂದು ರಚನೆಯಾಗಿದೆ ರೈತರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳ ಬೇಟಿಮಾಡಿ ಈ ಭಾಗದಲ್ಲಿ ಸತತವಾಗಿ ನೀರು ಹರಿಸುವ ಕಾರ್ಯಮಾಡಲಾಗುವದು ನಮ್ಮ ಸಹೋದರರಾದ ಎಮ್.ಬಿ.ಪಾಟೀಲರು ಸಾಕಷ್ಟು ನೀರಾವರಿ ಇಲಾಖೆಯಲ್ಲಿ ಅನುಭವ ಉಳ್ಳವರಾಗಿದ್ದಾರೆ. ಹಾಗೂ ವಿಜಯಪುರ ಜಿಲ್ಲೆಯಲ್ಲಿ  ನೀರನ್ನು ಹರಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ನಮ್ಮ ಸಹೋದರರನ್ನು  ಕರೆದುಕೊಂಡು ನಿಮ್ಮಜೊತೆ ನಾನು ಬಂದು ನಿಮ್ಮ ಕೆಲಸ ಮಾಡಿಸಿಕೊಡಲಾಗುವದು ತಾವು ಧರಣಿಯ ಸ್ಧಳಕ್ಕೆ ನಮ್ಮ ಸಹೋದರರನ್ನು ಕರೆದುಕೊಂಡು ಬಂದು ಈ ಧರಣಿ ಸತ್ಯಾಗ್ರಹವನ್ನು ಕೊನೆಗೊಳಿಸಲಾಗುವದು, ವಿಜಯಪುರ ಹಾಗೂ ಬಾಗಲಕೋಟ ಎರಡು ಜಿಲ್ಲೆಗಳು ನನ್ನ ಕಣ್ಣುಗಳು ಇದ್ದ ಹಾಗೆ ನಾನು ನಿಮ್ಮ ಧ್ವನಿಯಾಗಿ ವಿಧಾನ ಸೌಧದಲ್ಲಿ ಧ್ವನಿ ಎತ್ತುತ್ತೇನೆ ಆದಷ್ಟು ಬೇಗನೆ ಈ ಭಾಗದಲ್ಲಿ ನೀರು ಹರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದರು.

 ರಾಂಪೂರದ ಗುತ್ತಿ ಬಸವಣ್ಣ ಏತ ನೀರಾವರಿ ಹೋರಾಟ ಸಮೀತಿಯ ಅಧ್ಯಕ್ಷರಾದ ಚಂದ್ರಶೇಖರ ದೇವರೆಡ್ಡಿ, ರೈತ ಮುಖಂಡ ರಾಯಗೂಂಡ ಪೂಜಾರಿ, ಶಂಕರ ಪ್ಯಾಟಿ ಮಾತನಾಡಿದರು

ಹೋರಾಟದಲ್ಲಿ ತಾಪಂ ಸದಸ್ಯ ಪ್ರಕಾಶ ಮುಂಜಿ, ಗ್ರಾಪಂ ಅದ್ಯಕ್ಷ ಗುರಸಂಗಪ್ಪಾ ಬಾಗಲಕೊಟ,ರೇವಪ್ಪಾ ಹೊತರ್ಿ, ಪರಸು ಬಿಸನಾಳ,ಬೀರಪ್ಪಾ ಮ್ಯಾಗೇರಿ, ಮಶಿಮ್ ವಾಲಿಕಾರ, ಸಿದ್ದಪ್ಪಾ ಕಿಣಗಿ, ತಮ್ಮಣ ಚಿಂಚೋಳಿ, ರಾಕೇಶ ಕಿಣಗಿ, ಗುರಪ್ಪಾ ಜಂಬಗಿ, ಮಾಹಾದೇವ ಮೂಲಿಮನಿ, ಸುಬಾಷ ಅಳಗೊಂಡಗಿ,ಕಾಶಿನಾಧ ಹೋರಪೆಟಿ, ಮಲಕಪ್ಪಾ ನಾವದಗಿ, ಸುರೇಶ ನಡಗಡ್ಡಿ, ಸಂಜಿವ ಗೋರನಾಳ, ಬೀರಪ್ಪಾ ವಗ್ಗಿ, ಹೋನ್ನಪ್ಪಾ ಕಳ್ಳಿ, ಚೆಂದು ಮಾಶಾಳ, ರಾವತಪ್ಪ ಹಿರೇಕುರಬರ, ಮಲಕಪ್ಪಾ ವಗ್ಗಿ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು.