ಒಳ ಮೀಸಲಾತಿಗಾಗಿ ಶಾಸಕರ ಮನೆ ಮುಂದೆ ತಮಟೆ ಚಳುವಳಿ
ಬಳ್ಳಾರಿ 14: ಒಳಮೀಸಲಾತಿ ಜಾರಿಗಾಗಿ ಬೆಳಗಾಂ ಅಧಿವೇಶನದಲ್ಲಿ ಎಲ್ಲಾ ಶಾಸಕರು ಮತ್ತು ಸಚಿವರು. ಧ್ವನಿ ಎತ್ತಬೇಕೆಂದು ಶಾಸಕರ ಮನೆ ಮುಂದೆ ಇಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ತಮಟೆ ಚಳುವಳಿ ನಡೆಸಿದರು. ನಗರ ಶಾಸಕರಾದ ಭರತ್ ರೆಡ್ಡಿ ಮತ್ತು ಗ್ರಾಮೀಣ ಶಾಸಕ ನಾಗೇಂದ್ರ ಅವರ ಕಚೇರಿ ಮುಂದೆ ತಮಟೆ ಭಾರಿಸಿ ಮಾದಿಗ, ಸಮಗಾರ, ಮೋಚಗಾರ, ದೋಹರ, ದಕ್ಕಲಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಘೋಷಣೆ ಕೂಗಿದರು. ಕಳೆದ ಆಗಸ್ಟ್ 01 ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡುವುದಕ್ಕೆ ಆಯಾ ರಾಜ್ಯದ ಮುಖ್ಯಮಂತ್ರಿಗಳು ಒಳಮೀಸಲಾತಿ ಜಾರಿ ಮಾಡಬೇಕೆಂದು ತೀಪು ನೀಡಿದ್ದು, ಈಗಾಗಲೇ ಹರಿಯಾಣ ಬಿ.ಜೆ.ಪಿ ಸರ್ಕಾರ ತೀಪು ಬಂದ ಒಂದೇ ವಾರದಲ್ಲಿ ಮೀಸಲಾತಿಯನ್ನು ಜಾರಿ ಮಾಡಿದೆ. ಆದರೆ ಕರ್ನಾಟಕ ಸರ್ಕಾರ 4 ತಿಂಗಳಾದರು ಏನು ಮಾಡದೇ ನಿರ್ಲಕ್ಷಿಸುತ್ತಿದೆ. ಈಗಾಗಲೇ ಎ.ಜೆ.ಸದಾಶಿವ ಆಯೋಗ ವರದಿ ಸರ್ಕಾರಕ್ಕೆ ನೀಡಿದ್ದು, ಸುಮಾರು ವರ್ಷಗಳು ಕಳೆದರೂ ಕೂಡಾ ಒಳಮೀಸಲಾತಿ ಜಾರಿ ಮಾಡುವುದಕ್ಕೆ ಈಗಾಗಲೇ ಬಂದು ಹೋದ ಸರ್ಕಾರವೂ ಮತ್ತು ಈಗ ಹಾಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಅಂಗವಾಗಿ ಮತ್ತು ಇನ್ನೊಂದು ಆಯೋಗವನ್ನು ರಚನೆ ಮಾಡುತ್ತೇವೆಂದು, ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಹೇಳುತ್ತಾರೆ. ಈ ಕುಂಟು ನೆಪಗಳನ್ನು ಹೇಳುತ್ತಾ ಸರ್ಕಾರವು ಒಳಮೀಸಲಾತಿ ಜಾರಿ ಮಾಡುವುದಕ್ಕೆ ಮೋಸ ಮಾಡುತ್ತಿದೆ. ಆದಕಾರಣ ಈ ಚಳಿಗಾಲದ ಬೆಳಗಾಂ ಅಧಿವೇಶನದಲ್ಲಿ ಜಾರಿ ಮಾಡಬೇಕೆಂದು ಆಗ್ರಹಿಸಿದರು. ದಾನಪ್ಪಎ.ಕೆ.ಹುಲುಗಪ್ಪ, ದೇವಾ ಶ್ರೀರಾಂಪುರ ಕಾಲೋನಿ,ಎ.ಈಶ್ವರ್ಪ, ದುರುಗೇಶ, ನೆಟ್ಟಪ್ಪ, ಶಿವಶಂಕರ, ಈರ್ಪ, ರಾಮಣ್ಣ ಚಳ್ಳಗುರ್ಕಿ, ದಲಿತ ಮುಖಂಡರು ಇತರರು ಮೊದಲಾದವರು ಚಳುವಳಿಯಲ್ಲಿ ಭಾಗವಹಿಸಿದ್ದರು.