ಲೋಕದರ್ಶನ ವರದಿ
ತಾಲೂಕಾ ಅಧಿಕಾರಿ ವೆಂಕಟೇಶ ಕುಲಕರ್ಣಿ ಹಲವು ವಸತಿ ನಿಲಯಕ್ಕೆ ಭೇಟಿ
ಸಂಬರಗಿ, 22: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಗಡಿ ಭಾಗದ ಗ್ರಾಮಗಳಲ್ಲಿ ಇರುವ ವಸತಿ ನಿಲಯಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಥಣಿ ತಾಲೂಕಾ ಅಧಿಕಾರಿ ವೆಂಕಟೇಶ ಕುಲಕರ್ಣಿ ಇವರು ಗಡಿ ಭಾಗದ ಹಲವು ವಸತಿ ನಿಲಯಕ್ಕೆ ಭೇಟಿ ನೀಡಿ, ಪರೀಶೀಲನೆ ಮಾಡಿ ಮೇ. 15ರಂದು 2025ರ ವಸತಿ ನಿಲಯದ ಪ್ರವೇಶಗಳು ಪ್ರಾರಂಭವಾಗುತ್ತವೆ ಎಂದ ಹೇಳಿದರು.
ಅವರು ಗಡಿ ಭಾಗದಲ್ಲಿ ಇರುವ ಶಿವನೂರ, ಖಿಳೇಗಾಂವ, ಅನಂತಪೂರ, ಮದಬಾವಿ ಇನ್ನೀತರ ವಸತಿ ನಿಲಯಕ್ಕೆ ಭೇಟಿ ನೀಡಿ ಮದಭಾವಿ ಗ್ರಾಮದಲ್ಲಿ ಮಾಹಿತಿ ನೀಡಿದರು. ಒಟ್ಟು 18 ವಸತಿ ನಿಲಯ ಇದ್ದು, ಅದರಲ್ಲಿ ವಿದ್ಯಾರ್ಥಿಗಳಿಗಾಗಿ 14, ವಿದ್ಯಾರ್ಥಿನಿಗಳಿಗೆ 4, ಅದರಲ್ಲಿ ಮೇಟ್ರಿಕ್ ನಂತರ 2, ಅಥಣಿ ನಗರದಲ್ಲಿ ವಿದ್ಯಾರ್ಥಿನಿಗಳಿಗೆ 2, ಗ್ರಾಮೀಣ ಭಾಗಗಳಲ್ಲಿ 2 ವಸತಿ ನಿಲಯಗಳು ಇದ್ದಾವೆ. ಪ್ರವೇಶ ಪಡೆದುಕೊಳ್ಳುವ ವಿದ್ಯಾರ್ಥಿಗಳು ತಮ್ಮ ಭಾಗದಲ್ಲಿ ಇರುವ ವಸತಿ ನಿಲಯ, ಇಲ್ಲದಿದ್ದರೆ ತಾಲೂಕಾ ಹಿಂದುಳಿದ ಕಲ್ಯಾಣ ಇಲಾಖೆಯ ಕಾರ್ಯಲಯಕ್ಕೆ ರಜೆಯ ದಿನ ಹೊರತು ಪಡಿಸಿ ಸಂಪರ್ಕ ಮಾಡಬೇಕೆಂದು ವಿನಂತಿಸಿಕೊಂಡರು.