ತಾಲೂಕಾ ಮಟ್ಟದ 2ನೇ ಬ್ಯಾಚ್ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ

Taluka Level 2nd Batch Kayak Bandhu Training Program

ತಾಲೂಕಾ ಮಟ್ಟದ  2ನೇ ಬ್ಯಾಚ್ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮ

ಮುಂಡಗೋಡ 24: ತಾಲೂಕಿನ 16 ಗ್ರಾಮ ಪಂಚಾಯತ್ ಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಯಕ ಬಂಧುಗಳನ್ನು ಸಜ್ಜುಗೊಳಿಸುವ ಸಲುವಾಗಿ 2ನೇ ಬ್ಯಾಚ್ ಕಾಯಕ ಬಂಧುಗಳ ತರಬೇತಿಯ ಉದ್ಘಾಟನೆಯು ದಿನಾಂಕ 20.01.2025ರಂದು ನಡೆದಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ಸೋಮನಿಂಗಪ್ಪ ಛಬ್ಬಿ ಸಹಾಯಕ ನಿರ್ದೇಶಕರು ಮನರೆಗಾ ತಾಲ್ಲೂಕ ಪಂಚಾಯತ ಮುಂಡಗೋಡ ರವರು ವಹಿಸಿ ಮಾತನಾಡಿದ ಅವರು "ಗ್ರಾಮ ಸ್ವರಾಜ ಅಭಿಯಾನದಡಿ ನಡೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ 300 ಕಾಯಕ ಬಂಧುಗಳ ಈ ತರಬೇತಿಯು ಗ್ರಾಮ ಮಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳು, ಸಮುದಾಯ ಆಸ್ತಿ ಸೃಜನೆ ಮತ್ತು ಪರಿಣಾಮಕಾರಿಯಾಗಿ ಕಾಮಗಾರಿಗಳ ಅನುಷ್ಟಾನ ಹಾಗೂ ನಿರ್ವಹಣೆ ನಡೆಯಲು ಮತ್ತು ಗ್ರಾಮೀಣಭಾಗದಲ್ಲಿನ ವಲಸೆ ತಡೆಯಲು ಈ ತರಬೇತಿಯು ಪ್ರಯೋಜನಕಾರಿಯಾಗಿದೆ. 

 ಕೂಲಿಕಾರರು ಮತ್ತು ಗ್ರಾಮ ಪಂಚಾಯತ ನಡುವೆ ಕಾಯಕ ಬಂಧುಗಳು ಕೊಂಡಿಯಂತೆ ಸಮನ್ವಯ ಕೆಲಸವನ್ನು ಸಕ್ರಿಯವಾಗಿ ಮಾಡಬೇಕೆಂದರು".   ಲೊಯೋಲ ವಿಕಾಸ ಕೇಂದ್ರ ಮುಂಡಗೋಡರವರ ಸಹಭಾಗಿತ್ವದಲ್ಲಿ ದಿ:16.01.2025 ರಿಂದ 12.02.2025 ರವರೆಗೆ ಜರುಗಲಿದ್ದು ಒಟ್ಟು 300 ಕಾಯಕ ಬಂಧುಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ. ಇದರಲ್ಲಿ 2 ನೇ ಬ್ಯಾಚ್ ತರಬೇತಿ ದಿ; 20.01.2025 ರಿಂದ 22.01.2025 ರವರೆಗೆ ನಡೆಯಿತು. ಕಾಯಕ ಬಂಧುಗಳಿಗೆ ತರಬೇತಿ ಮುಕ್ತಾಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಈ ದಿನ ಮುಂಡಗೋಡ ತಾಲೂಕು ಸಭಾಭವನದಲ್ಲಿ ಪಾ.ಅನಿಲ್ ಡಿಸೋಜ ಗ್ರಾಮ ಸ್ವರಾಜ್ ಸಮಿತಿ ಸದಸ್ಯರು ಹಾಗೂ ಲೊಯೋಲ ವಿಕಾಸ ಕೇಂದ್ರ ನಿರ್ದೇಶಕರು ಮುಂಡಗೋಡ ಅಧ್ಯಕ್ಷತೆಯಲ್ಲಿ ಜರುಗಿಸಲಾಯಿತು.    

ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಾ.ಅನಿಲ್ ಡಿ’ಸೊಜ ಸಿಎಸ್‌ಓ ಸದಸ್ಯರು ಹಾಗೂ ಎಲ್ ವಿ ಕೆ ನಿರ್ದೇಶಕರು ಮನರೇಗಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿ ಸ್ಥಳದ ನಿರ್ವಹಣೆಯನ್ನು ಸುಧಾರಿಸಲು ಮತ್ತು ಕಾರ್ಯಕ್ರಮದ ಅನುಷ್ಠಾನವನ್ನು ಸುಗಮಗೊಳಿಸಲು, ಅಜೀಂ ಪ್ರೇಮ್ ಜಿ ಪೌಂಡೆಶನ್ ಹಾಗೂ 50 ಸಮಾಜ ಸೇವಾ ಸಂಸ್ಥೆಗಳು ಜಂಟಿಯಾಗಿ ತಾಲೂಕು ಪಂಚಾಯತ್ ಮೂಲಕ ಕಾಯಕ ಬಂಧುಗಳ ತರಭೇತಿ ಕಾರ್ಯಕ್ರಮ ನಡೆಸುತ್ತಿದ್ದು ಹಳ್ಳಿಗಳಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ದೊರಕಿಸಿಕೊಡುವಲ್ಲಿ ಕಾಯಕ ಬಂಧುಗಳ ಪಾತ್ರ ಮಹತ್ವದ್ದಾಗಿದೆ ಎಂದರು.  

ಈ ತರಬೇತಿ ಸಂಧರ್ಭದಲ್ಲಿ ಶಿಬಿರಾರ್ಥಿಗಳಿಗೆ ಕ್ಷೇತ್ರ ಭೇಟಿಯಲ್ಲಿ ಹುನಗುಂದ ಗ್ರಾಮ ಪಂಚಾಯತ ಕಾಮಗಾರಿ ಅನುಷ್ಠಾನಗಳನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥರವರು ವಿವರಿಸಿದರು.   ಈ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾಗಿ ಲೋಕೆಶ ಗೌಡ ರವರು ನರೇಗಾ ಯೋಜನೆಯ ವ್ಯಾಪ್ತಿ ಗುರಿ, ಉದ್ದೇಶ ದ ಕುರಿತು ವಿವರಿಸಿದರು.  

ಈ ಸಂಧರ್ಭದಲ್ಲಿ ಯೋಜನಾಧಿಕಾರಿಗಳಾದ ಮಲ್ಲಿಕಾರ್ಜುನ ರವರು ಉಪಸ್ಥಿತರಿದ್ದರು. ಸಂಪನ್ಮೂಲವ್ಯಕ್ತಿಗಳಾಗಿ ಮಲ್ಲಮ್ಮ ನೀರಲಗಿ ಕಾಯಕ ಬಂದುಗಳು ಕಾರ್ಮಿಕರ ಸಂಘ ರಚನೆ, ಮಹಿಳಾ ಕಾಯಕ ಬಂಧುಗಳನ್ನು ಗುರುತಿಸುವಿಕೆ ಕಾಯಕ ಬಂದುಗಳ ಪಾತ್ರದ ಕುರಿತು ವಿವರಿಸಿದರು. ವಿನಾಯಕ ಆಚಾರ್ಯ ರವರು ಜಿಯೋಟ್ಯಾಗ, ಎನ್ ಎಮ್ ಎಮ್ ಎಸ್ ಆಪ್ ಬಗ್ಗೆ ವಿವರಿಸಿದರು. ಕಿರಣ ಹೀರೆಮಠ ತಾಲೂಕು ಪಂಚಾಯತ್ ಮುಂಡಗೋಡ ಇವರು ಗ್ರಾಮ ಸಭೆ, ವಾರ್ಡ ಸಭೆ, ಜನಮನರೆಗಾ ಆಪ್, ಶುಶಾಂತ ಹೆಗಡೆ ಲೆಬರ್ ಬಜೆಟ್, ಕ್ರೀಯಾಯೋಜನೆ ತಯಾರಿ, ಲಕ್ಷಣ ಮುಳೆ ಸಾಮಾಜಿಕ ಕಾರ್ಯಕರ್ತರು ರವರು ಸಾಮೂಹಿಕ ಆಸ್ತಿಗಳ ನಿರ್ವಹಣೆ ಮತ್ತು ರಕ್ಷಣೆ, ರಮೆಶ ಜಮಖಂಡಿ ತೋಟಗಾರಿಕೆ ಇಲಾಖೆಯಿಂದ ನರೆಗಾ ಯೋಜನೆಯಡಿ ತೋಟಗಾರಿಕೆ ಕಾಮಗಾರಿಗಳಾದ ಹಣ್ಣಿನ ಬೇಳೆಗಳು,ಸಾಂಬರು ಬೆಳೆಗಳು,ಹೂವಿನ ಬೆಳೆಗಳು, ಆಪ್ರದಾನ ಹಣ್ಣುಗಳು, ಪ್ಲಾಂಟೆಶನ್ ಕುರಿತು ವಿವರಿಸಿದರು.  

ಈಗಾಗಲೆ ತಾವು ಗ್ರಾಮದಲ್ಲಿ ಕಾರ್ಮಿಕರನ್ನು ಸಂಘಟಿಸಿ ಕೆಲಸ ಮಾಡುತ್ತಿರುವ ಬೀರು ಕಾತ್ರಟ್ ರವರು ಸಂಘಗಳನ್ನು ರಚಿಸಿ ಅವರ ಜವಾಬ್ದಾರಿಗಳನ್ನು ಮನವರಿಕೆ ಮಾಡಿದರು. ಪ್ರವೀಣ ಶೆದಿಯಣ್ಣನವರ ತರಬೇತಿ ಪೂರ್ವ,ತರಬೇತಿ ನಂತರ ಮೊಬೈಲ್ ಪರಿಕ್ಷೇ ಮಾಡಿದರು. ಇದೆ ಸಂದರ್ಭದಲ್ಲಿ 30 ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು,  

  ಈ ಕಾರ್ಯಕ್ರಮದಲ್ಲಿ ಕಾಯಕ ಬಂದುಗಳನ್ನು ಉದ್ದೇಶಿಸಿ ನಿಮಗೆಲ್ಲ ನಮ್ಮ ಸಿಬ್ಬಂದಿಯೂ ಸಹಾಯ ಮಾಡುತ್ತಾರೆ. ನೀವು ಕೆಲಸ ಮಾಡಲು ಸಂಘಟನೆಯೊಂದಿಗೆ ಮುಂದೆ ಬನ್ನಿರಿ ಎಂದು ವಿವರಿಸಿದರು. ರವಿ ಲಮಾಣಿ ಕಾರ್ಯಕ್ರಮದ ನೀರೂಪಣೆ ಮಾಡಿದರು, ಸುರೇಶ ಬಸಪ್ಪ ಕೋಣಿ ಸ್ವಾಗತಿಸಿದರು, ಶಕುಂತಲಾ, ಗೀತಾ, ಅಂಜೂ ಮುದ್ದಿನಕೊಪ್ಪ ಸ್ವಾಗತ ಗೀತೆ ಹೇಳಿದರು. ಶಿವರಾಜ್ ಲಮಾಣಿ ಯವರು ಧನ್ಯವಾದ ಕೋರಿದರು. ಆನಂದ ಲಮಾಣಿ, ಚಾನಕಿ ಕೋಣನಕೇರಿ ತರಬೇತಿಯ ಅನಿಸಿಕೆ ಹಂಚಿಕೊಂಡರು.