ತಾಲೂಕಾ ಆಡಳಿತ ಭರವಸೆ, ಸಿ.ಎಂ. ಮುಂದೆ ಅಣುಕು ಶವಯಾತ್ರೆ ವಾಪಸ್ : ಪಿ.ಎಸ್‌.ಐ. ಪರಶುರಾಮ ಲಮಾಣಿ

Taluka Administration Hope, C.M. Next, nuclear funeral will be back: P.S.I. Parasurama Lamani

 ತಾಲೂಕಾ ಆಡಳಿತ ಭರವಸೆ, ಸಿ.ಎಂ. ಮುಂದೆ ಅಣುಕು ಶವಯಾತ್ರೆ ವಾಪಸ್ : ಪಿ.ಎಸ್‌.ಐ. ಪರಶುರಾಮ ಲಮಾಣಿ   

ರಾಣೇಬೆನ್ನೂರು 4: ರಾಣೇಬೆನ್ನೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಉದ್ಭವಿಸಿರುವ ಸ್ಮಶಾನ ಭೂಮಿಯ ಸಂಬಂಧವಾಗಿ ಇಂದು ಜಿಲ್ಲೆಯ ಹಾನಗಲ್ ತಾಲೂಕಿಗೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ಎದುರು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಅಣುಕು ಶವಯಾತ್ರೆ’ಯ ಕಾರ್ಯಕ್ರಮವನ್ನು ವಾಪಸ್ ಪಡೆಯುವಂತೆ ತಾಲೂಕಾಡಳಿತದ ಪರವಾಗಿ ಹಲಗೇರಿ ಪಿ.ಎಸ್‌.ಐ. ಪರಶುರಾಮ ಲಮಾಣಿಯವರು ಖುದ್ದಾಗಿ ಕೃಷ್ಣಾಪುರ ಗ್ರಾಮಕ್ಕೆ ತಮ್ಮ ಸಿಬ್ಬಂದಿಯೊಡನೆ ಠಿಕಾಣಿ ಹೂಡಿ ಗ್ರಾಮಸ್ಥರು ಮತ್ತು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲರ ಮನವೊಲಿಸುವ ಪ್ರಯತ್ನ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಇನ್ನು ಕೆಲವೇ ದಿನಗಳಲ್ಲಿ ತಾಲೂಕಾ ಆಡಳಿತ ಮತ್ತು ಜಿಲ್ಲಾ ಆಡಳಿತದ ಒಮ್ಮತದ ನಿರ್ಣಯ ತೆಗೆದುಕೊಂಡು ಕೃಷ್ಣಾಪುರ ಗ್ರಾಮದ ಸ್ಮಶಾನ ಭೂಮಿಯ ಸಮಸ್ಯೆ ಬಗೆಹರಿಸಲಾಗುವುದು ಆದ್ದರಿಂದ ಇಂದಿನ ಅಣಕು ಶವಯಾತ್ರೆ ಪ್ರದರ್ಶನವನ್ನು ವಾಪಸ್ ಪಡೆಯಬೇಕೆಂದರು. ಆಗ ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಮಾತನಾಡಿ ತಾಲೂಕಾ ಆಡಳಿತದ ಭರವಸೆಯ ಮೇರೆಗೆ ಇಂದು ನಾವು ಈ ಪ್ರತಿಭಟನೆಯನ್ನು ವಾಪಸ್ ಪಡೆಯುತ್ತೇವೆ. ತುರ್ತಾಗಿ ಜಿಲ್ಲಾಡಳಿತ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಅಷ್ಟರೊಳಗಾಗಿ ಕೃಷ್ಣಾಪುರ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಶವವನ್ನು ಜಿಲ್ಲಾಡಳಿತದ ಮುಂದೆ ತೆಗೆದುಕೊಂಡು ಹೋಗಿ ಅಲ್ಲೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸ್ಮಶಾನ ಭೂಮಿ ಸಮಸ್ಯೆಯನ್ನು ಇಟ್ಟುಕೊಂಡು ಹಾನಗಲ್ಲಿನ ಮುಖ್ಯಮಂತ್ರಿಗಳ ಕಾರ್ಯಕ್ರಮದ ಎದುರು ಅಣಕು ಶವಯಾತ್ರೆಗೆ ಸುಮಾರು ಮಹಿಳೆಯರು ಸೇರಿದಂತೆ 200 ಜನರು ಸೇರಿ ಹೊರಟಿದ್ದ ಬಹುದೊಡ್ಡ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಗ್ರಾಮಸ್ಥರ ಮನವೊಲಿಸಲು ಪಿ.ಎಸ್‌.ಐ. ಪರಶುರಾಮ ಲಮಾಣಿಯವರು ಯಶಸ್ವಿಯಾದರು. ಈ ಸಂದರ್ಭದಲ್ಲಿ ಗ್ರಾಮದ ವೀರಪಾಕ್ಷಿಗೌಡ ಗೌಡ್ರ, ರುದ್ರ​‍್ಪ ತಳವಾರ, ಹನುಮಂತಪ್ಪ ಬಣಕಾರ, ದುರ್ಗಪ್ಪ ಬಣಕಾರ, ನಾಗನಗೌಡ ಪಾಟೀಲ, ಬಸಯ್ಯ ಹರಳಹಳ್ಳಿಮಠ, ಕಾಶಪ್ಪ ಬಣಕಾರ, ಶಕುಂತಲವ್ವಾ ಅಕ್ಕೇರ, ಪಾರ್ವತೆಮ್ಮ ಗೌಡ್ರ, ರತ್ನವ್ವ ತಳವಾರ, ಜಯವ್ವ ಬಣಕಾರ, ರಮೇಶ ಕದರಮಂಡಲಗಿ, ಕರಬಸಪ್ಪ ತಳವಾರ, ತಿರಕಪ್ಪ ಕದರಮಂಡಲಗಿ, ರಂಗಮ್ಮ ತಳವಾರ, ತೀರ್ಥವ್ವ ಗೌಡ್ರ, ಬಸವ್ವ ತಳವಾರ, ಮುಖಂಡರಾದ ಹರಿಹರಗೌಡ ಪಾಟೀಲ, ಮಲ್ಲಪ್ಪ ಲಿಂಗದಹಳ್ಳಿ, ರಾಮಪ್ಪ ಬಣಕಾರ, ಜಮಾಲಸಾಬ ಸೇತಸನದಿ, ಈರ​‍್ಪ ಕಮ್ಮಾರ ಮುಂತಾದವರು ಆಗಮಿಸಿದ್ದರು.