ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿ ನಾಪತ್ತೆ

ಲೋಕದಶನ ವರದಿ

ಮುಧೋಳ 21:  ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಳೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿಗಳ ಕಾಯರ್ಾಲಯಕ್ಕೆ ಬೀಗ ಜಡಿದಿದ್ದು ಅಲ್ಲಿನ ಅಧಿಕಾರಿಯೇ ನಾಪತ್ತೆಯಾಗಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ

ಲಕ್ಷ್ಮಣ ಮಾಲಗಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಸಂಚರಿಸಿ ಹೊಟೇಲ್ಗಳು, ಖಾಸಗಿ ಹಾಲಿನ ಡೈರಿಗಳು,ರೆಸ್ಟೋರೆಂಟ್ ಗಳಲ್ಲಿನ ಕಲಬೆರೆಕೆ ಆಹಾರ ಪದಾರ್ಥಗಳನ್ನು ತಪಾಸಿಸಿ ಕಂಡು ಹಿಡಿದು ದಂಡ ಹಾಗೂ ಕೇಸ ದಾಖಲಿಸಬೇಕಾದ ಅಧಿಕಾರಿಯೇ ಹೀಗೆ ತಿಂಗಳುಗಟ್ಟಲೆ ನಾಪತ್ತೆಯಾದರೆ ಹೇಗೆ ಎಂದು ಸಂಬಂಧಿಸಿದ ಮೇಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.ಡೆಪ್ಯುಟೇಶನ್ ಮೇಲೆ ವಿಜಯಪುರ ದಿಂದ ಮುಧೋಳಕ್ಕೆ ವಾರಕ್ಕೆ ಮೂರು ದಿನಗಳ ಕಾಲ ಕಚೇರಿಗೆ ಬಂದು ಕೆಲಸ ಮಾಡಬೇಕಾಗಿದ್ದ ಅಧಿಕಾರಿ ನಿಡೋಣಿ ಬರದೆ ಇರುವುದು ಏಕೆ ಎಂಬ ಮಾಲಗಿಯವರ ಪ್ರಶ್ನೆಗೆ ಉತ್ತರ ದೊರಕಬೇಕಾಗಿದೆ. ಕಚೇರಿಯ ಬಾಗಿಲು ಮೇಲೆ ಬರೆದ ಮೋಬೈಲ್ ಸಂಖ್ಯೆ 8495915014 ಗೆ ಕಾಲ್ ಮಾಡಿದರೂ ಅದು ಅಸ್ತಿತ್ವದಲ್ಲಿ ಇಲ್ಲ ಎಂಬ ಉತ್ತರ ಬರುತ್ತದೆ. ಹೀಗಾದರೆ ಯಾರಿಗೆ ದೂರು ನೀಡಬೇಕು ಎಂಬುದು ಕಗ್ಗಂಟಾಗಿದೆ. ಆದಕಾರಣ ಮೇಲಾಧಿಕಾರಿಗಳು ಈ ಕಡೆ ಶೀಘ್ರ ಗಮನಹರಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕಲಬೆರಕೆ ಆಹಾರಕ್ಕೆ ಕಡಿವಾಣ ಹಾಕುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ನಿಡೋಣಿಯವರಿಗೆ ಸೂಚಿಸಬೇಕೆಂದು ಸಾರ್ವಜನಿಕರ ಪರವಾಗಿ ಮಾಲಗಿ ಒತ್ತಾಯಿಸಿದ್ದಾರೆ.