ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತನ್ನಿ: ಸಿನ್ನೂರ

Taluk cluster level Kalika Habba festival program

ತಾಳಿಕೋಟಿ 13: ಕಲಿಕೆಯಲ್ಲಿ ಹಿಂದುಳಿದಿರುವ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಎಫ್ ಎಲ್ ಏನ್ ( ಬುನಾದಿ ಅಕ್ಷರ ಮತ್ತು ಸಂಖ್ಯಾ ಜ್ಞಾನ) ಕಾರ್ಯಕ್ರಮ ನಡೆಸಲಾಗುತ್ತಿದೆ ಇದರ ಯಶಸ್ವಿಗೆ ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಡೈಟ್ ಉಪನ್ಯಾಸಕ ನಾಗೇಂದ್ರ ಸಿನ್ನೂರ ಹೇಳಿದರು.  

ಪಟ್ಟಣದ ಆಶ್ರಯ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಜಿಪಂ ವಿಜಯಪುರ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಾಧಿಕಾರಿಗಳ ಕಾರ್ಯಾಲಯ ಮುದ್ದೆಬಿಹಾಳ, ಸಮೂಹ ಸಂಪನ್ಮೂಲ ಕೇಂದ್ರ ತಾಳಿಕೋಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ತಾಳಿಕೋಟಿ ತಾಲೂಕ ಕ್ಲಸ್ಟರ್ ಮಟ್ಟದ ಎಫ್ ಎಲ್ ಏನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ ಮಾತನಾಡಿ ಕಲಿಕಾ ಹಬ್ಬ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಅವರ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರ ಇಂಥಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಇದರ ಯಶಸ್ವಿಗೆ ಶಿಕ್ಷಕರು ಪ್ರಯತ್ನಿಸಬೇಕು ಎಂದರು. ಈ ಕಲಿಕಾ ಹಬ್ಬದಲ್ಲಿ ಶಿಕ್ಷಕರು ಹಾಗ ಹಾಗೂ ಮಕ್ಕಳು ಸೇರಿ ಕಾಗದನಲ್ಲಿ ಸಿದ್ಧಪಡಿಸಿದ ಬ್ಯಾಚ್, ಹೂಗಳು ಎಲ್ಲರ ಗಮನ ಸೆಳೆದವು.  

ಇದೇ ಸಂದರ್ಭದಲ್ಲಿ ಶಿಕ್ಷಕರಾದ ಯು.ಜಿ.ಮಕಾನದಾರ,ಜಿ.ವಿ. ಬಿರಾದಾರ, ಅನುಷಾ ಜಗತಾಪ, ಜಿಟಿ ಬಿರಾದಾರ, ಎಂ.ಎಸ್‌.ಉಮರ್ಜಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿ.ಆರಿ​‍್ಸ. ರಾಜು ಬಿಜಾಪುರ ಪ್ರಸ್ತಾವಿಕವಾಗಿ ಮಾತನಾಡಿ ಕಲಿಕಾ ಹಬ್ಬದ ಧ್ಯೇಯೋ ಶಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಳಿಕೋಟಿ ಕ್ಲಸ್ಟರ್ ನ 150 ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಮಕ್ಕಳಿಗೆ ಮಧ್ಯಾಹ್ನದ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ರತನಸಿಂಗ್ ಕೊಕಟನೂರ,ಕರವೇ ಸದಸ್ಯರಾದ ಅಬೂಬಕರ ಲಾಹೋರಿ,ಅಲ್ತಾಫ ವಿಜಾಪುರ, ಪತ್ರಕರ್ತ ವಿಜಯ ಕಲಾಲ್, ಸಿ.ಆರಿ​‍್ಸ.ಜಾವೇದ ಎಕೀನ, ಮು.ಗು.ಗಳಾದ ಡಾ.ಅನಿತಾ ಸಜ್ಜನ, ಆರ್ ಬಿ ಆಲೂರ, ಎಂ.ಬಿ.ನಾಗೂರ, ಯು.ಜಿ.ಮಕಾನದಾರ,ಡಿ.ಜೆ. ಬಾಗೇವಾಡಿ, ಎನ್‌.ಎಸ್‌. ಮಂಟಗಿ, ಬಿಎ ನಾಯ್ಕೋಡಿ, ಬಿ.ಆರಿ​‍್ಸ ಕೆ.ಎಸ್‌. ಸಜ್ಜನ, ಜಿಟಿ ಬಿರಾದಾರ ಸಶಿ,ಎಂ.ಎಸ್‌.ಉಮರ್ಜಿ, ಇಪಿಎಫ್ ಸಂಚಾಲಕ ಎಸ್‌. ಎಸ್‌.ಹಾದಿಮನಿ, ಎಪಿಎಫ್ ಚೇತನ್ ಹಿರೇಮಠ, ಅನುಷಾ ಜಗತಾಪ, ಶಿಕ್ಷಕರಾದ ರಾಘವೇಂದ್ರ ಕುಲಕರ್ಣಿ, ಎಂ.ಬಿ.ಮೈಲೇಶ್ವರ, ನೀಲಮ್ಮ ಮೈಲೇಶ್ವರ ಇದ್ದರು.