ತಾಲೂಕು ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ: ಸಮ್ಮೇಳನ ಯಶಸ್ಸಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಕರೆ

Taluk Sahitya Sammelana logo released

ಕೊಪ್ಪಳ 17: ಇದೇ ಮಾರ್ಚ್‌ 23 ರಂದು ಹಲಗೇರಿ ಗ್ರಾಮದಲ್ಲಿ ಆಯೋಜಿಸಿರುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಹಾಗೂ ಸಮ್ಮೇಳನಾಧ್ಯಕ್ಷೆ ಮಾಲಾ ಬಡಿಗೇರ ಅವರಿಗೆ ಸನ್ಮಾನ ಜರುಗಿತು.ನಗರದ ಪ್ರವಾಸಿ ಮಂದಿರದಲ್ಲಿ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಲಾಂಛನ ಬಿಡುಗಡೆ ಮಾಡಿ, ಸಮ್ಮೇಳನಾಧ್ಯಕ್ಷೆ ಮಾಲಾ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಿದರು. 

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಭಾಷೆ, ನೆಲ-ಜಲದ ಬಗ್ಗೆ ಜಾಗೃತಿ ಮೂಡಿಸಲು ಸಾಹಿತ್ಯ ಸಮ್ಮೇಳನಗಳು ಅವಶ್ಯ.ಹಲಗೇರಿ ಗ್ರಾಮದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ,ನಾಡಹಬ್ಬವಾಗಿ ಆಚರಿಸಲು  ತಾಲ್ಲೂಕಿನ ಎಲ್ಲಾ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡುವುದಾಗಿ ಹೇಳಿದರು.ಸಮ್ಮೇಳನ ಸರ್ವಾಧ್ಯಕ್ಷೆ ಮಾಲಾ ಬಡಿಗೇರ ಮಾತನಾಡಿ, ಮಹಿಳೆಗೆ ಸಮ್ಮೇಳನ ಅಧ್ಯಕ್ಷತೆ ನೀಡಿರುವುದು ಸಂತಸ ತಂದಿದೆ.ಮಹಿಳೆಯರ ಆಶೋತ್ತರಗಳಿಗೆ ಧ್ವನಿಯಾಗುತ್ತೇನೆ ಎಂದರು. 

ಸಾಹಿತಿ,ಸ್ವಾತಂತ್ರ್ಯ ಹೋರಾಟಗಾರ ಡಾ.ಪಂಚಾಕ್ಷರಿ ಹಿರೇಮಠ ಅವರ ನಿಧನಕ್ಕೆ ಇದೇ ಸಂದರ್ಭದಲ್ಲಿ ಮೌನ ಆಚರಿಸಿ,ಸಂತಾಪ ವ್ಯಕ್ತಪಡಿಸಲಾಯಿತು. 

ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಬಿ.ಗೊಂಡಬಾಳ , ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶರಣಪ್ಪ ಬಾಚಲಾಪುರ,ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡ್ರ,ಸಂಶೋಧಕ ಡಾ.ಸಿದ್ಧಲಿಂಗಪ್ಪ ಕೋಟ್ನೇಕಲ್,ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ,ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ, ಹುಸೇನ್ ಪಾಷಾ,ಹನುಮಂತ ಹಳ್ಳಿಕೇರಿ,ಡಾ.ಶ್ರೀನಿವಾಸ ಹ್ಯಾಟಿ,ಕಸಾಪ ಪದಾಧಿಕಾರಿಗಳಾದ ಸಂತೋಷ ದೇಶಪಾಂಡೆ , ರಮೇಶ ತುಪ್ಪದ,ಮಲ್ಲಿಕಾರ್ಜುನ ಹ್ಯಾಟಿ, ಮಾರುತೇಶ ಅಂಗಡಿ,ಬಸವರಾಜ ಕರುಗಲ್,ನಾಗರಾಜನಾಯಕ ಡಿ.ಡೊಳ್ಳಿನ, ಶರಣು ಡೊಳ್ಳಿನ ,ಸೋಮನಗೌಡ ವಗರನಾಳ,ಮತ್ತಿತರರು ಇದ್ದರು.ಲಾಂಛನ: ಹಲಗೇರಿ ಗ್ರಾಮ ದೇವತೆ ಶಾಂಭವಿ ದೇವಿಯನ್ನು ಕೇಂದ್ರವಾಗಿಟ್ಟುಕೊಂಡು,ಸಾಮ್ರಾಟ ಅಶೋಕನ ಶಿಲಾಶಾಸನ,ಕೊಪ್ಪಳ ಕೋಟೆ,ಜೈನ ಬಸದಿ,ತೊಗಲು ಗೊಂಬೆ,ಕಿನ್ನಾಳ ಕಲೆ ,ಹುಲಿಗೆಮ್ಮ ದೇವಿ,ಜೀವನಾಡಿ ತುಂಗಭದ್ರಾ ಜಲಾಶಯ,ಗವಿಮಠ,ಸಾಮರಸ್ಯ ತಾಣ ಮರ್ದಾನ ಅಲಿ ದರ್ಗಾದ ಭಾವಚಿತ್ರಗಳ ಮೇಲ್ಭಾಗದಲ್ಲಿ ಕನ್ನಡ ತಾಯಿ ಭುವನೇಶ್ವರಿ ಹಾಗೂ ನಾಡಧ್ವಜಗಳನ್ನು ಒಳಗೊಂಡಂತೆ ರಮೇಶ್ ತುಪ್ಪದ ಹಾಗೂ ಶರಣು ಡೊಳ್ಳಿನ ವಿನ್ಯಾಸಗೊಳಿಸಿದ್ದಾರೆ.