ಲೋಕದರ್ಶನ ವರದಿ
ರಾಮದುರ್ಗ 04: ಪಟ್ಟಣದ ತಾಲೂಕಾ ಆಸ್ಪತ್ರೆಗೆ ಮಂಗಳವಾರ ಬೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ವೈಧ್ಯಾಧಿಕಾರಿಗಳ ಬೇಜಾವಾಬ್ದಾರಿಯುತ ಕಾರ್ಯವೈಖರಿ ಹಾಗೂ ಆಸ್ಪತ್ರೆಯ ಅವ್ಯಸ್ಥೆಗೆ ಬಗ್ಗೆ ಗರಂ ಆದ ಶಾಸಕರು ಸಭೆಯಿಂದ ನಿರ್ಗಮಿಸಿದ ಘಟನೆ ನಡೆಯಿತು.
ಪತ್ರಿ ತಿಂಗಳು ನಡೆಯುವ ಸಭೆ ಮಂಗಳವಾರ ಮದ್ಯಾಹ್ನ 1 ಗಂಟೆಗೆ ನಿಗಧಿಯಾಗಿತ್ತು. ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಮಾಹಿತಿ ನೀಡುವಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಭೆಯ ಪೂರ್ವದಲ್ಲಿಯೇ ಶಾಸಕರು ಸೂಚನೆ ನೀಡಿದ್ದರು.
ಸಭೆಗೆ ಹಾಜರಾದ ಶಾಸಕರು ತಾಲೂಕಾ ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ, ಸೇರಿದಂತೆ ಕೆಲ ವೈಧ್ಯರು ಸಭೆಗೆ ಗೈರಾಗಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಅವರು, ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಕೊಳ್ಳಬೇಕಾದ ಆಸ್ಪತ್ರೆಯ ವೈದ್ಯಾಧಿಕಾರಿಗಳೇ ಸಭೆಗೆ ಗೈರಾದರೆ ಸುಧಾರಣೆ ಹೇಗೆ ಸಾಧ್ಯ. ಅಲ್ಲದೆ ಸಭೆಗೆ ಸೂಕ್ತ ಮಾಹಿತಿ ನೀಡುವವರು ಯಾರು ಎಂದು ತಾಲೂಕಾ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಿಂದಾ ಹೊರ ನಡದಾಗ ಮಾರ್ಗ ಮದ್ಯದಲ್ಲಿ ಬಂದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಶಸ್ತ್ರ ಚಿಕಿತ್ಸೆ ಇದ್ದ ಕಾರಣ ಸಭೆಗೆ ಹಾಜರಾಗಲು ವಿಳಂಬವಾಯಿತು ಎಂದು ಶಾಸಕರಿಗೆ ತಿಳಿಸಿದರು. ಸಮಾಜದಲ್ಲಿ ವೈದ್ಯರ ಬಗ್ಗೆ ಅಪಾರವಾದ ಗೌರವ ಇದೆ. ಆ ಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನಮಾಡಲು ಶ್ರಮಿಸಬೇಕು. ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಶಾಸಕರು
ಸೂಚಿಸಿದರು.
ತಾಲೂಕ ವೈದ್ಯಾಧಿಕಾರಿ ಆರ್ ಎಸ್ ಬಂತಿ, ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈಧ್ಯರು ಹಾಗೂ
ಇತರರಿದ್ದರು.