ತಾಲೂಕುಡಳಿತ ಶಿವಶರಣೆ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ತಾಲೂಕುಡಳಿತ ಶಿವಶರಣೆ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ   Taluk Administration celebrates Shiva Sharane and Mahasadvi Hemareddy Mallamma Jayanti

ಲೋಕದರ್ಶನ ವರದಿ

 ಕಂಪ್ಲಿ 10:  ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಹೇಮ ವೇಮ ರೆಡ್ಡಿ ಜನ ಸಂಘ ಕಂಪ್ಲಿ-ಫಿರ್ಕಾ ಸಹಯೋಗದಲ್ಲಿ ಶಿವಭಕ್ತೆ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಭಾನುವಾರ ಆಚರಿಸಲಾಯಿತು.ನಂತರ ಹೇಮ ವೇಮ ರೆಡ್ಡಿ ಜನ ಸಂಘ ಕಂಪ್ಲಿ-ಫಿರ್ಕಾ ಯುವ ಮುಖಂಡ ಟಿ.ವಿ.ಸುದರ್ಶನ್ ರೆಡ್ಡಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನ ಕೊಡುಗೆ ನಾಡಿಗೆ ಅತ್ಯುತ್ತಮವಾಗಿದೆ. ಅವರ ಆದರ್ಶ ಗುಣಗಳನ್ನು ಪರಿಪಾಲಿಸುವುದರ ಜೊತೆಗೆ ಪ್ರತಿಯೊಂದು ಕೊಡುಗೆಗಳು ಮನುಷ್ಯನ ಬದುಕಿಗೆ ದಾರೀದೀಪವಾಗಿವೆ ಎಂದರು. ತದನಂತರ ಶಿರಸ್ತೇದಾರ ಪಂಪಾಪತಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕಾಗಿ ಮತ್ತು ನಿಸ್ವಾರ್ಥದಿಂದ ಬದುಕಿದವಳು. ಮಾನವ ಕುಲದ ಜೀವಲೋಕದ ಮಹಾತಾಯಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಧೀಮಂತ ಮಹಿಳೆಯಾಗಿದ್ದಳು. ಎಂದರು.ಮುಖಂಡ ಮೆಟ್ರಿ ಹೊನ್ನಳ್ಳಿ ಗಂಗಾಧರ್ ಗೌಡ ಮಾತನಾಡಿ, ಕಾಯಕದೊಂದಿಗೆ ಒಳ್ಳೆಯ ಜೀವನದ ಕಡೆಗೆ ಸಾಗಬೇಕಾಗಿದೆ.

ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾಂಗಣವನ್ನು ಸ್ವಚ್ಚಗೊಳಿಸದೇ, ಜಯಂತಿಯನ್ನು ತಾಲೂಕು ಆಡಳಿತವು ಬೇಕಾಬಿಟ್ಟಿಯಲ್ಲಿ ಆಚರಣೆ ಮಾಡುವ ಮೂಲಕ ಅಪಮಾನ ಮಾಡಿದೆ. ಇಲ್ಲಿ ಸ್ವಚ್ಛತೆ ಮಾಯವಾಗಿದ್ದು, ಇದರ ನಡುವೆ ಅಧಿಕಾರಿಗಳ ನಿರ್ಲಕ್ಷ್ಯ ಭಾವದಿಂದ ಜಯಂತಿ ಆಚರಣೆ ಮಾಡುವಂತಾಗಿದೆ. ಭಾನುವಾರ ಬಂತೆಂದರೆ ಸಾಕು ಯಾವುದೇ ಜಯಂತಿ ಇದ್ದರೆ ಬೇಕಾಬಿಟ್ಟಿಯಲ್ಲಿ ಮಾಡಿ ಮುಗಿಸುವುದು ಇಲ್ಲಿನ ಅಧಿಕಾರಿಗಳ ಪ್ರವೃತಿಯನ್ನುವಂತೆ ಕಾಣುತ್ತಿದೆ. ಇಲ್ಲಿನ ಜಯಂತಿಯಲ್ಲಿ ಮುಖ್ಯವಾಗಿ ತಹಶೀಲ್ದಾರರು ಭಾಗವಹಿಸಬೇಕಾಗಿತ್ತು. ಸರ್ಕಾರವೇ ಜಯಂತಿಯನ್ನು ಆಚರಿಸುತ್ತಿದೆ. ಆದರೆ, ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ನೋಡಿದರೆ, ಜಯಂತಿಗಳಿಗೆ ಅಪಮಾನ ಮಾಡುವುದು ಗೋಚರಿಸುತ್ತದೆ. ಮುಂದಿನ ದಿನದಲ್ಲಿ ಯಾವುದೇ ಜಯಂತಿಯಾಗಲಿ ಸ್ವಚ್ಚತೆ, ಸುಂಧರ ಮತ್ತು ಅಚ್ಚುಕಟ್ಟಾಗಿ ಜಯಂತಿ ಮಾಡಿದರೆ ಮಾತ್ರ ಜಯಂತ್ಯೋತ್ಸವಗಳಿಗೆ ಅರ್ಥ ಬರುತ್ತದೆ ಎಂದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ, ರೆಡ್ಡಿ ಜನ ಸಂಘದ ಮುಖಂಡರಾದ ರಾಜಶೇಖರರೆಡ್ಡಿ, ಕೆ.ಪವನ್ ಕುಮಾರರೆಡ್ಡಿ, ಡಾ.ಶ್ರೀನಿವಾಸರೆಡ್ಡಿ, ಹೊನ್ನಳ್ಳಿ ಶಿವಪುತ್ರ​‍್ಪ, ಸುರೇಶರೆಡ್ಡಿ, ಕಾಮರೆಡ್ಡಿ, ಲಕ್ಷ್ಮಣ್ ರೆಡ್ಡಿ, ಜಗದೀಶ್ ರೆಡ್ಡಿ, ಆನಂದ್ ರೆಡ್ಡಿ, ವೆಂಕಟರೆಡ್ಡಿ, ರಮೇಶ್ ರೆಡ್ಡಿ, ಮಾಧವ ರೆಡ್ಡಿ, ಹರೀಶ್ ರೆಡ್ಡಿ, ತಿಪ್ಪಾರೆಡ್ಡಿ, ಎನ್ ಜಗದೀಶ್ ರೆಡ್ಡಿ, ಕೆ.ಭಾಸ್ಕರ್ ರೆಡ್ಡಿ, ವೆಂಕಟಕೃಷ್ಣ ರೆಡ್ಡಿ ಸೇರಿದಂತೆ ಅನೇಕರಿದ್ದರು.