ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ತಮ್ಮ ಚಾಣಕ್ಷ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮೂಲಕ ಮನ ಗೆದ್ದಿರುವ ಮಾಹಿಯನ್ನ ಅಭಿಮಾನಿಗಳು ರೋಲ್ ಮಾಡಲ್ಆಗಿ ಸ್ವೀಕರಿಸಿದ್ದಾರೆ.
ಧೋನಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ ಧೋನಿ ಎಲ್ಲಾದ್ರು ಬಂದ್ರೆ ಸಾಕು ಅಲ್ಲಿ ಸಾವಿರಾರು ಅಭಿಮಾನಿಗಳು ಸೇರಿರುತ್ತಾರೆ. ಧೋನಿಗೂ ಅಭಿಮಾನಿಗಳೆ ಮೇಲೆ ಅಪಾರ ಪ್ರೀತಿ.ಮೊನ್ನೆ ವಿಂಡೀಸ್ ವಿರುದ್ಧ ಐದನೇ ಪಂದ್ಯದಲ್ಲಿ ತನಗಾಗಿ ಕಾದಿದ್ದ ವಿಶೇಷ ಅಭಿಮಾನಿ ಬಳಿಗೆ ಆಟೋಗ್ರಾಫ್ ಕೊಟ್ಟು ಬಂದಿದ್ದರು. ಇದೀಗ ಕಾರಿನಲ್ಲಿ ಕುಳಿತಿ ಚಿಕ್ಕ ಹುಡುಗಿಯನ್ನ ಮಾತನಾಡಿಸಿ ಸರಳತೆಯನ್ನ ಮೆರೆದಿದ್ದಾರೆ.
ಮೊನ್ನೆ ಕಾರಿನ ಮುಂಭಾಗದಲ್ಲಿ ಬೆಲ್ಟ್ ಆಗಿ ಕುಳಿತಿದ್ದ ಧೋನಿ. ತನನ್ನು ನೋಡುತ್ತಿದ್ದ ಪುಟ ಬಾಲಕಿಯನ್ನ ಕರೆದು ಮಾತನಾಡಿಸಿದ್ದಾರೆ. ಧೋನಿಯನ್ನ ಮಾತನಾಡಿಸಿದ ಆ ಪುಟ್ಟ ಹುಡುಗಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೆ ಧೋನಿ ಆ ಪುಟ್ಟ ಬಾಲಕಿಯ ಕೈಕುಲುಕಿ ಧನ್ಯವಾದ ತಿಳಿಸಿದ್ದಾರೆ. ಧೋನಿ ಪುಟ್ಟ ಬಾಲಕಿಗೆ ತೋರಿದ ಪ್ರೀತಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.