ಸುಧಾಕರ ದೈವಜ್ಞ
ಶಿಗ್ಗಾವಿ೧೫ : ಒಬ್ಬ ವ್ಯಕ್ತಿ ಹೇಗೆ ಇದ್ದಾನೆ ಎಂಬುದು ತಿಳಿದುಕೊಳ್ಳಲು ನನ್ನ ಜೊತೆಗೆ ನೇರವಾಗಿ ಒಡನಾಟವನ್ನು ಬೆಳೆಸಿಕೊಳ್ಳಿರಿ ಅಂದಾಗ ಮಾತ್ರ ನನ್ನ ವ್ಯಕ್ತಿತ್ವದ ಬಗ್ಗೆ ನಿಮಗೆ ಗೊತ್ತಾಗುತ್ತದೆ ಎಂದು ನೇರವಾಗಿ ತಾಲೂಕ ದಂಡಾದಿಕಾರಿ ಚಂದ್ರಶೇಖರ ಗಾಳಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಲಯದ ಸಭಾಂಗಣದಲ್ಲಿ ವರದಿಗಾರರ ಜೊತೆಗೆ ಮಾತನಾಡಿದ ಅವರು ಶಿಗ್ಗಾವಿ ತಾಲೂಕ ಹಾವೇರಿ ಜಿಲ್ಲೆಯಲ್ಲಿ ಉತ್ತಮವಾಗಿದೆ ಅಲ್ಲದೇ ರಾಜ್ಯದಲ್ಲಿ ಹಾವೇರಿ ಜಿಲ್ಲೆ ಬಡತನ ಪ್ರಮಾಣದಲ್ಲಿ 27 ನೇ ಸ್ಥಾನವನ್ನು ಪಡೆದಿದೆ ಹಾಗೂ ಅನೇಕ ಸಮಸ್ಯೆಗಳು ತಾಲೂಕಿನಲ್ಲಿವೆ ಅವುಗಳನ್ನು ಹಂತ ಹಂತವಾಗಿ ಬಹೆಹರಿಸಲು ಮತ್ತು ಉತ್ತಮ ಸೇವೆಯನ್ನು ಒದಗಿಸಲು ನನಗೆ ಸುಸಂಧರ್ಭ ಒದಗಿಬಂದಿದೆ ಎಂದು ಮಾಮರ್ಿಕವಾಗಿ ಮಾತನಾಡಿದರು.
ತಾಲೂಕಿನಲ್ಲಿ ಆಧಾರ ಕಾರ್ಡ ವಿಷಯವನ್ನು ತೆಗೆದುಕೊಂಡಾಗ ನನಗೆ ಬಹಳ ಬೇಜಾರದ ಸಂಗತಿ ಅನುಭವಕ್ಕೆ ಬಂದಿತು ಏನೆಂದರೆ ನಾನು ಆಕಸ್ಮಾತ ಬೆಳಿಗ್ಗೆ ತಹಶೀಲ್ದಾರ ಕಾರ್ಯಲಯಕ್ಕೆ ಬಂದಾಗ ಅನೇಕ ಗ್ರಾಮೀಣ ಭಾಗದ ಜನರು ಬೆಳಿಗಿನ ಜಾವ 6 ಘಂಟೆಗೆ ಬಂದು ತಮ್ಮ ಸರದಿ ಸಾಲಿನಲ್ಲಿ ನಿಂತು ಆಧಾರ ಕಾರ್ಡ ಪಡೆಯಲು ದೊಡ್ಡ ಪ್ರಮಾಣದ ಜನಸಂದಣಿ ಆಗುತ್ತಿತ್ತು.
ಆ ಸಂದರ್ಭದಲ್ಲಿ ಆ ವ್ಯಕ್ತಿಗಳನ್ನು ಮಾತನಾಡಿಸಿದಾಗ ತಮ್ಮ ಮನದಾಳದ ಮಾತುಗಳನ್ನು ಅಲಿಸಿದಾಗ ಅನೇಕ ಸಮಸ್ಯೆಗಳು ಉಲ್ಬಣವಾಗಿದ್ದವು ಅದನ್ನು ಮನಗೊಂಡು ತಹಶೀಲ್ದಾರ ಕಾರ್ಯಲಯದಲ್ಲಿ ಕಾರ್ಯ ನಿರ್ವಹಿಸುವ ಗಣಕಯಂತ್ರದ ವ್ಯವಸ್ಥಾಪಕರನ್ನು ಕರೆದು ಸಭೆಯನ್ನು ಮಾಡಿ ಅದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ರೂಪಿಸಿ ಇಂದು ವ್ಯವಸ್ಥಿತವಾಗಿ ಆಧಾರ ಕಾರ್ಡ ವಿಷಯವಾಗಿ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರಗೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ತಹಶೀಲ್ದಾರ ಕಾರ್ಯಲಯದ ಆದಾರಗೆ ಸಂಬಂಧಿಸಿದ ಗಣಕಯಂತ್ರಗಳು ಕಳೆದ ವಾರ ದುರಸ್ಥಿಯಲ್ಲಿದ್ದಾಗ ನಮ್ಮ ಸಿಬ್ಬಂದಿಗಳು ಅಂಚೆ ಕಚೇರಿಯಲ್ಲಿರುವ ಆಧಾರ ಕಾರ್ಡ ಕೇಂದ್ರದಲ್ಲಿ ಸೇವೆಯನ್ನು ಸಲ್ಲಿಸಿದರು ಅವರಿಗೂ ಸಹಿತ ಆಧಾರ ಕಾರ್ಡ ಬಗ್ಗೆ ತೊಂದರೆಯಿದ್ದಲ್ಲಿ ಕೂಡಲೇ ನನ್ನನ್ನು ಸಂರ್ಪಕಿಸಿರಿ ಹಾಗೂ ಹೆಚ್ಚು ಹೆಚ್ಚು ಆಧಾರ ಕಾರ್ಡ ಒದಗಿಸಬೇಕೆಂದು ತಿಳಿಸಿದ್ದೇನೆ ಎಂದರು.
ಅದೆ ತರನಾಗಿ ಪಟ್ಟಣದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕನಲ್ಲಿರುವ ಆದಾರ ಕಾರ್ಡಗೆ ಸಂಬಂದಿಸಿದ ಸಮಸ್ಯೆಗಳ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರ ಜೊತೆಗೆ ಮಾತನಾಡಿ ಪ್ರತಿ ದಿನಕ್ಕೆ 10-15 ಬದಲಾಗಿ 40-50 ಆದಾರ ಕಾರ್ಡ ಮಾಡಬೇಕು ಅದರ ಜೊತೆಗೆ ಏನಾದರೂ ಸಮಸ್ಯೆಗಳಿದ್ದರೆ ನನ್ನ ಹತ್ತಿರ ನೇರವಾಗಿ ಮಾತನಾಡಲು ತಿಳಿಸಿದ್ದಾರೆ.
ತಾಲೂಕಿನಲ್ಲಿ ಏನೇ ಸಮಸ್ಯೆಯಿದ್ದರೂ ಸಹಿತ ನನ್ನ ಗಮನಕ್ಕೆ ತನ್ನಿರಿ ಹಾಗೂ ನೇರವಾಗಿ ನನ್ನ ಜೊತೆಗೆ ಸಂಪರ್ಕವನ್ನು ಇಟ್ಟುಕೊಳ್ಳಿರಿ ಹಾಗೂ ಯಾವುದೇ ವ್ಯಕ್ತಿ ಪದೆ ಪದೆ ಸಮಸ್ಯೆಯ ಕುರಿತು ಅಲೆದಾಡುತ್ತಾ ಇದ್ದರೆ ನನಗೆ ಶೋಬೆ ತರುವುದಿಲ್ಲ ಅವಾಗ ನನಗೆ ಬೇಸರ ಉಂಟಾಗುತ್ತದೆ ಮತ್ತು ಎಲ್ಲರ ಸಹಾಯ ಸಹಕಾರ ಮುಖ್ಯ ನಾನೋಬ್ಬನೇ ಏನು ಮಾಡಲು ಆಗುವುದಿಲ್ಲ ತಾಲೂಕಿನ ಎಲ್ಲ ಚುನಾಯಿತ ಜನಪ್ರತಿನಿದಿಗಳು ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ತಾಲೂಕಿನ ಸಮಸ್ತ ಸಾರ್ವಜನಿಕರು ನನಗೆ ಸಹಕಾರವನ್ನು ನೀಡಿರಿ ನಾನು ನಿಮಗೆ ತಾಲೂಕ ಆಡಳಿತ ಪರವಾಗಿ ತಾಲೂಕಿನಲ್ಲಿ ಉತ್ತಮ ಸೇವೆಯನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹಸನಮುಖರಾಗಿ ಹೇಳಿದರು.