ತಾಳಿಕೋಟಿ ಸಹಕಾರಿ ಬ್ಯಾಂಕ್ ನೂತನ ನಿರ್ದೇಶಕರಿಗೆ ಸನ್ಮಾನ
Talikoti Cooperative Bank felicitates the new director
ತಾಳಿಕೋಟಿ ಸಹಕಾರಿ ಬ್ಯಾಂಕ್ ನೂತನ ನಿರ್ದೇಶಕರಿಗೆ ಸನ್ಮಾನ
ತಾಳಿಕೋಟಿ 30 : ಪಟ್ಟಣದ ಪ್ರತಿಷ್ಠಿತ ತಾಳಿಕೋಟಿ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ 13 ಜನ ನೂತನ ನಿರ್ದೇಶಕರಿಗೆ ಪಟ್ಟಣದ ಸಜ್ಜನ ಗಾಣಿಗ ಸೇವಾ ಸಂಘದ ವತಿಯಿಂದ ಗುರುವಾರ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಮುರಿಗೆಪ್ಪ ಸರಶೆಟ್ಟಿ ಮಾತನಾಡಿ ನೀವು ಚುನಾವಣೆ ಸಂದರ್ಭದಲ್ಲಿ ನಮಗೆ ಕೊಟ್ಟ ಮಾತಿನಂತೆ ಮತನೀಡಿ ಆಶೀರ್ವಾದ ಮಾಡಿದ್ದೀರಿ ಈ ನಿಮ್ಮ ಸಹಕಾರಕ್ಕೆ ಋಣಿಯಾಗಿದ್ದೇವೆ, ನಿಮ್ಮ ವಿಶ್ವಾಸಕ್ಕೆ ಚುತಿ ಬಾರದ ಹಾಗೆ ಬ್ಯಾಂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ನಮಗೆ ಸಮಾಜದ ವತಿಯಿಂದ ಗೌರವಿಸಿದ್ದಕ್ಕೆ ಕೃತಜ್ಞರಾಗಿದ್ದೇವೆ ಎಂದರು. ಸಜ್ಜನ ಸಮಾಜದ ಮುಖಂಡ ನೂತನ ನಿರ್ದೇಶಕ ಕಾಶಿನಾಥ ಸಜ್ಜನ ಮಾತನಾಡಿ ತೀವ್ರ ಪೈಪೋಟಿ ಏರ್ಪಟಟಿದ್ದ ಈ ಚುನಾವಣೆಯಲ್ಲಿ ಸಮಾಜದ ಬಾಂಧವರು ನನ್ನ ಗೆಲುವಿಗಾಗಿ ಮಾತ್ರ ಅಲ್ಲ ಇಡೀ ನಮ್ಮ ಪೆನಲ್ ಸದಸ್ಯರ ಗೆಲುವಿಗಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೀರಿ ಈ ನಿಮ್ಮ ಋಣವನ್ನು ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು. ಬ್ಯಾಂಕಿನ ನೂತನ ನಿರ್ದೇಶಕರಾದ ದತ್ತಾತ್ರೇಯ ಹೆಬಸೂರ, ಈಶ್ವರ್ಪ ಬಿಳೇಭಾವಿ, ಚಿಂತಪ್ಪಗೌಡ ಯಾಳಗಿ, ಬಾಬು ಹಜೇರಿ,ಪ್ರಹ್ಲಾದ್ ಸಿಂಗ್ ಹಜೇರಿ, ಸುರೇಶ ಪಾಟೀಲ ಡಿ.ಕೆ. ಪಾಟೀಲ, ಸಂಜೀವಪ್ಪ ಬರದೇನಾಳ, ರಾಮಪ್ಪ ಕಟ್ಟಿಮನಿ, ಗಿರಿಜಾಬಾಯಿ ಕೊಡಗಾನೂರ, ಶೈಲಾ ವಿಶ್ವನಾಥ ಬಡದಾಳಿ, ಸಜ್ಜನ ಸಮಾಜದ ಅಧ್ಯಕ್ಷ ಪ್ರಕಾಶ ಸಜ್ಜನ,ಉಪಾಧ್ಯಕ್ಷ ತಿಪ್ಪಣ್ಣ ಸಜ್ಜನ,ಗಣ್ಯರಾದ ಗುರುಲಿಂಗಪ್ಪ ಸಜ್ಜನ,ಪರ್ಪ ಸಜ್ಜನ, ರಾಜು ಸಜ್ಜನ,ರಾಘು ಹಜೇರಿ,ರಾಜು ಕೊಡಗಾನೂರ, ಮುತ್ತು ಕಶಟ್ಟಿ, ಜಗದೀಶ ಬಿಳೆಭಾವಿ, ಮಲ್ಲು ಪಾಲ್ಕಿ ಸಮಾಜದ ಹಿರಿಯರು ಹಾಗೂ ಮಹಿಳೆಯರು ಇದ್ದರು. ಶ್ರೀಮತಿ ಜಯಶ್ರೀ ಸಜ್ಜನ ಪ್ರಾರ್ಥಿಸಿದರು,ಶಿಕ್ಷಕ ಎಸ್.ಪಿ.ಸಜ್ಜನ ಸ್ವಾಗತಿಸಿದರು. ಶಿಕ್ಷಕ ಕಾಶಿನಾಥ ಸಜ್ಜನ ನಿರೂಪಿಸಿ ವಂದಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 