ತಾಳಿಕೋಟೆ: ಕೃಷಿಕನ ಬದುಕು ಅತ್ಯಂತ ಶ್ರೇಷ್ಠವಾದುದ್ದು: ಡಾ.ಬಸವರಾಜ ಅಸ್ಕಿ

ಲೋಕದರ್ಶನ ವರದಿ

ತಾಳಿಕೋಟೆ 29: ದೇಶದ ಸರ್ವಜನಾಂಗಕ್ಕೂ ನ್ಯಾಯಸಮ್ಮತವಾಗಿ ಆಹಾರವನ್ನು ಒದಗಿಸುವ ಕೃಷಿಕನ ಬಧುಕು ಬಹಳೇ ಶ್ರೇಷ್ಠವಾದುದ್ದಾಗಿದೆ ಅಂತಹ ರೈತನ ಬಧುಕು ಮತ್ತು ಕೃಷಿಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವಂತಹ ಕಾರ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಡುತ್ತಾ ಸಾಗಿರುವದು ಶ್ಲಾಘನೀಯವಾಗಿದೆ ಎಂದು ಪ್ರಗತಿಪರ ರೈತರಾದ ಪ್ರೋ. ಡಾ.ಬಸವರಾಜ ಅಸ್ಕಿ ಅವರು ನುಡಿದರು.

ಶನಿವಾರರಂದು ಕೊಣ್ಣೂರ ಗ್ರಾಮದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜ್ಯೋತಿ ಬಸವರಾಜ ಅಸ್ಕಿ ಅವರ ತೋಟದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಇವರ ವತಿಯಿಂದ ಆಯೋಜಿಸಲಾದ ಕೃಷಿ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಸ್ಥಾನವನ್ನು ಅಲಂಕರಿಸಿ ಅಭಿನಂದನಾ ಪತ್ರ ಹಾಗೂ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಜೈಜನಾವ ಜೈಕೀಸಾನ ಎಂಬ ಕ್ಷೇತ್ರಗಳು ನಮ್ಮ ದೇಶದಲ್ಲಿ ಪವಿತ್ರವಾದ ಕ್ಷೇತ್ರಗಳಾಗಿವೆ ಗಡಿಯಲ್ಲಿ ಕಾಯುವ ಸೈನ್ಯವೂ ಒಂದುಭಾಗವಾಗಿ ಕೆಲಸ ಮಾಡುತ್ತಿದ್ದರೆ ಇತ್ತ ರೈತನು ಒಂದು ಭಾಗವಾಗಿ ಕೆಲಸವನ್ನು ಮಾಡುತ್ತಿರುತ್ತಾನೆ ಈ ಅನುಭವ ಮಕ್ಕಳಲ್ಲಿ ಬರಲಿ ಎಂಬ ದೃಷ್ಠಿಕೋನದೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ನವರು ಈ ಕೃಷಿ ನಡಿಗೆ ಎಂಬ ಕಾರ್ಯಕ್ರಮದ ಮೂಲಕ ಕೃಷಿಕನ ಬದುಕು ಮತ್ತು ಅಲ್ಲಿ ಬೆಳೆಯುವ ಫಲವತ್ತತ್ತೆಯ ಬೆಳೆಗಳ ಬಗ್ಗೆ ಹಾಗೂ ದೇಶ ರಕ್ಷಣೆ ಏಷ್ಟು ಕಷ್ಟವಿದೆ ಅಷ್ಟೇ ರೈತನ ಬದುಕು ಅಷ್ಟೇ ಕಷ್ಠವಿದೆ ಎಂಬುದರ ಬಗ್ಗೆ ಮಕ್ಕಳಲ್ಲಿ ಜ್ಞಾನಾರ್ಜನೆ ಮೂಡಿಸುವಂತಹ ಕೆಲಸ ಮಾಡುತ್ತಿರವದು ಸಂತೋಷದಾಯಕವಾಗಿದೆ ಬರಲಿರುವ ಮೇ ತಿಂಗಳಲ್ಲಿ ನನ್ನ ವೈಯಕ್ತಿಕವಾಗಿ ಕೃಷಿ ಮತ್ತು ಮಾತೃ ಸ್ಮರಣೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲು ತಯಾರಿ ನಡೆಯುತ್ತಿದೆ ಆ ಕಾರ್ಯಕ್ರಮದಲ್ಲಿ ಯಲೆಮರೆ ಕಾಯಿಯಾಗಿ ಅನೇಕ ಜನ ಕೆಲಸ ಮಾಡುತ್ತಿದ್ದಾರೆ ಅಂತವರನ್ನು ಗುರುತಿಸಿ ಸಮಾಜದಲ್ಲಿ ಮೇಲಕ್ಕೇತ್ತುವಂತಹ ಕೆಲಸ ಮಾಡಲಾಗುವದು ಎಂದರು.

ಇದೇ ಸಮಯದಲ್ಲಿ ಪ್ರಗತಿಪರ ರೈತ ಡಾ.ಬಸವರಾಜ ಅಸ್ಕಿ ಅವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಅಭಿನಂದಾನ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಮೇಲೆ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಎಚ್.ಎಲ್.ಕರಡ್ಡಿ, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಂಗಮೇಶ ಹೊಲ್ದೂರ, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದಶರ್ಿ ಜಿ.ಎಚ್.ಚವ್ಹಾಣ, ಎಸ್.ಆರ್.ಸುಲ್ಪಿ, ಜ್ಯೋತಿ ನಾರಿ, ವಿದ್ಯಾವತಿ ಬದಿ, ಎಸ್.ಬಿ.ನದಾಫ, ಶಿಕ್ಷಕರುಗಳಾದ ಡಿ.ಬಿ.ಬಿರಾದಾರ ಎಂ.ಎಸ್.ಅಸ್ಕಿ, ಜಿ.ಜಿ.ಅಸ್ಕಿ, ವಿದ್ಯಾಧರ, ದ್ಯಾಮಣ್ಣ ಸೋಮನಾಳ, ಗ್ರಾಂಪಂ ಸದಸ್ಯ ಬಸ್ಸು ಕೂಡಗಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಬಸವರಾಜ ನಾಯ್ಕೋಡಿ, ಶಂಕರಗೌಡ ಅಸ್ಕಿ, ಸುಭಾಸ ಸಾತ್ಯಾಳ, ಚಂದ್ರಶೇಖರ ಐನಾಪೂರ, ಕೆ.ಎಸ್.ಅಸ್ಕಿ, ಚಿದಾನಂದ ಕೋಟಿ, ಚಿದಾನಂದ ಜಾಲಾಪೂರ, ವಿನಯ ಹುಲ್ಲೂರ, ಸಂತೋಷ ಹುಲ್ಲೂರ, ಶಂಕರ ಹೂಗಾರ, ಸಿದ್ದು ಕುಂಭಾರ, ಗುಂಡಪ್ಪ ಗಣಿ, ಮೊದಲಾದವರು ಉಪಸ್ಥಿತರಿದ್ದರು. ಜಿ.ಎಚ್.ಚವ್ಹಾಣ ಸ್ವಾಗತಿಸಿದರು. ವಿದ್ಯಾವತಿ ಬದಿ ನಿರೂಪಿಸಿದರು. ಎಸ್.ಆರ್.ಸುಲ್ಪಿ ವಂದಿಸಿದರು.