ಹೊನ್ನಿಹಳ್ಳಿ ಸಾಂಸ್ಕೃತಿಕ ಬಹುತ್ವ ರೂಪಿಸುವ ಕಥೆಗಳು: ಹಿರೇಮಠ

ಧಾರವಾಡ 19: ಹೊನ್ನಿಹಳ್ಳಿ ಪುಸ್ತಕದ ಮೂರೂ ನೀಳ್ಗತೆಗಳು ಘಟನೆಗಳ ನಿರೂಪಣೆ ಅಷ್ಟೇ ಆಗದೇ, ಜೀವಂತಿಕೆ, ಮಣ್ಣಿನ ಬದುಕು ಹಾಗೂ ಸಾಂಸ್ಕೃತಿಕ ಬಹುತ್ವ ರೂಪಿಸುವ ಕಥೆಗಳು ಆಗಿವೆ ಎಂದು ಖ್ಯಾತ ಸಾಹಿತಿ ಮತ್ತು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಮಲ್ಲಿಕಾಜರ್ುನ ಹಿರೇಮಠ ಇಲ್ಲಿ ಹೇಳಿದರು. 

ಅನ್ವೇಷಣ ಕೂಟದ ಆಶ್ರಯದಲ್ಲಿ ಮನೋಜ ಪಾಟೀಲ ಅವರ ಹೊನ್ನಿಹಳ್ಳಿ ಪುಸ್ತಕದ ಸಮೀಕ್ಷೆ ಮಾಡಿ  ಮಾತನಾಡುತ್ತಿದ್ದರು. 

ಹೊನ್ನಿಹಳ್ಳಿ ಪುಸ್ತಕದ ಕಥೆಗಳು ನವ್ಯದಿಂದ ತೀರಾ ಭಿನ್ನವಾಗಿವೆ. ಗ್ರಾಮೀಣ ಜಗತ್ತಿನ ಬದುಕನ್ನು ಪಾತ್ರಗಳ ಮೂಲಕ ವಿಶ್ಲೇಷಿಸುತ್ತಾ ಹೋಗುವ ಕಥೆಗಾರರು ಮೂರು ಕಥೆಗಳಲ್ಲಿ ಹೊನ್ನಿಹಳ್ಳಿಯನ್ನೇ ಕಥಾ ನಾಯಕನನ್ನಾಗಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಖ್ಯಾತ ಸಾಹಿತಿಗಳೂ ಆಗಿರುವ ಪ್ರೊ. ರಾಘವೇಂದ್ರ ಪಾಟೀಲ ಮಾತನಾಡಿ, ಜೋಗದ ಜಲಪಾತದಷ್ಟೇ ಹೊನ್ನಿಹಳ್ಳಿಯ ಕಥೆಗಳು ಪ್ರಖರವಾಗಿವೆ. ಇಲ್ಲಿಯ ಮೂರೂ ಕಥೆಗಳನ್ನು ಒಟ್ಟಿಗೆ ಸೇರಿಸಿ ಏಕಕಾಲಕ್ಕೆ ಸಂಕೀರ್ಣತೆಯನ್ನು ತಂದಿದ್ದರೆ ಇದೊಂದು ಇನ್ನಿಷ್ಟು ಅದ್ಭುತ ಬರಹವಾಗಿ ರಾವಬಹುದ್ದೂರ ಅವರ ಗ್ರಾಮಾಯಣ ಮಹಾಕೃತಿಯ ಸರಿಸಮ ನಿಲ್ಲುತ್ತಿತ್ತು ಎಂದರು.  

ಧಾರವಾಡದ ಕಥೆಗಾರರು

ಉತ್ತರ ಕನರ್ಾಟಕದ ಪ್ರಾತಿನಿಧಿಕ ಲೇಖಕರ ಪರಂಪರೆಯನ್ನು ಮನೋಜ ಪಾಟೀಲ ಹೊನ್ನಿಹಳ್ಳಿ ಕಥಾ ಸಂಕಲನದ ಮೂಲಕ ಇಪ್ಪತ್ತೊಂದನೆಯ ಶತಮಾನದ ಮುಂದುವರಿಕೆಯಾಗಿದ್ದಾರೆ. ಉತ್ತಮ ಒಳ ಹೂರಣ ಹೊಂದಿರುವ ಅವರ ಈ ಕಥೆಗಳು ಗಮನಾರ್ಹವಾಗಿವೆ ಎಂದು ಖ್ಯಾತ ವಿಮರ್ಶಕ, ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯಪಟ್ಟರು. ಶತಮಾನದ ಹಿಂದಿನ ಧಾರವಾಡ ಕಥೆಗಾರರ ಪರಂಪರೆಯನ್ನು ಅವರು ಸುದೀರ್ಘವಾಗಿ ವಿವರಿಸಿದರು. 

ಪತ್ರಕರ್ತರೂ ಆಗಿದ್ದ ಕೆರೂರು ವಾಸುದೇವ ಆಚಾರ್ಯರ ಮಲ್ಲೇಶಿಯ ನಲ್ಲೆಯರು, ತೊಳೆದ ಮುತ್ತು ಕಥೆಗಳು, ತೇಂಗ್ಸೆ, ಗೋವಿಂದರಾಯರ ಛಪ್ಪರಬಂದ್ ಕಥೆ, ಶಿವೇಶ್ವರ ದೊಡಮನಿ ಅವರ ರಾಜಮಾ ಕಥೆ, ಶ್ಯಾಮಲಾ ಬೆಳಗಾಂವಕರ ಅವರ ಲಕ್ಷ್ಮಿ ಬಂದಳು ಎಂಬ ಕಥೆಯನ್ನು ಅವರು ನೆನಪಿಸಿ, ವಿಶ್ಲೇಷಿಸಿದರು. ಕೆರೂರ ವಾಸುದೇವಾಚಾರ್ಯರು ಪತ್ರಕರ್ತರಾಗಿದ್ದರು ಹಾಗೆಯೇ ಮನೋಜ ಪಾಟೀಲರು ಅವರಂತೆ ಪತ್ರಕರ್ತ ಹಾಗೂ ಕಥೆಗಾರರಾಗಿದ್ದು ಒಂದು ವಿಶೇಷ ಎಂದು ಡಾ. ಬಿದರಕುಂದಿ ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಪ್ರೊ. ಹರ್ಷ ಡಂಬಳ ಮಾತನಾಡಿ, ಸೂಕ್ಷ್ಮ ಅವಲೋಕನ ಶಕ್ತಿಯಿಂದ ಹೊನ್ನಿಹಳ್ಳಿ ಕಥೆಗಳು ಕೂಡಿವೆ ಎಂದರು. ಇಲ್ಲಿನ ಮೂರು ಕಥೆಗಳಲ್ಲಿ ಮಾತೃತ್ವದ ಭಾವ ತುಂಬಿ ನಿಂತಿದೆ. ಸಿದ್ಧಹಸ್ತದ ಬರವಣಿಗೆ  ಇಲ್ಲಿದೆ. ಅನುಭವದ ಮೂಲಕ ಸಣ್ಣ ಸಣ್ಣ ಘಟನೆಗಳ ಕೊಂಡಿಯನ್ನು ಕಥೆಯಲ್ಲಿ ಹೊಂದಿಸುವ ಕಲೆ ಮನೋಜ ಪಾಟೀಲವರಿಗೆ ಸಿದ್ಧಿಸಿದೆ ಎಂದು ಹೇಳಿದರು.

ಪ್ರಾರಂಭಕ್ಕೆ ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ಸಂಚಾಲಕ ವೆಂಕಟೇಶ ದೇಸಾಯಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕೃತಿಕಾರ ಮನೋಜ ಪಾಟೀಲ ಮಾತನಾಡಿದರು. ಹ.ವೆಂ. ಕಾಖಂಡಕಿ ಆಭಾರ ಮನ್ನಿಸಿದರು. ಸಭೆಯಲ್ಲಿ ಆರ್.ಬಿ. ಚಿಲುಮಿ, ಪ್ರೊ. ದುಷ್ಯಂತ ನಾಡಗೌಡ, ಡಾ. ಗೋವಿಂದರಾಜ ತಳಕೋಡ, ಶ್ರೀನಿವಾಸ ವಾಡಪ್ಪಿ, ಜಯತೀರ್ಥ ಜಹಗೀರದಾರ, ಮಂದಾಕಿನಿ ಪುರೋಹಿತ, ಸರೋಜಾ ಕುಲಕಣರ್ಿ, ಎಸ್.ಎಂ. ಪಾಟೀಲ, ಎಸ್.ಬಿ. ದ್ವಾರಪಾಲಕ, ಎಂ.ವ್ಹಿ. ಒಡ್ಡೀನ, ಎಸ್.ಆರ್. ಭಟ್ಕಳ, ಪ್ರಿನ್ಸಿಪಾಲ ಎಚ್.ಎಂ. ಪಾಟೀಲ, ವಿನೂತಾ ಹಂಚಿನಮನಿ, ಎಸ್. ಗುರುನಾಥ, ಎ.ಜಿ. ಸಬರದ ಇತರರು ಉಪಸ್ಥಿತರಿದ್ದರು.