ಲೋಕದರ್ಶನ ವರದಿ
ಕೊಪ್ಪಳ 26: ಸಮ್ಮೇಳನಗಳಿಂದ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಪ್ರತಿಭೆಗಳಿಗೆ ಒಂದು ಸೂಕ್ತ ವೇದಿಕೆ ಸಿಗದೇ ಹೋದರೆ ಅವು ಅಲ್ಲಿಯೇ ಕಮರಿಹೋಗುತ್ತವೆ. ಇಂತಹ ಸಮ್ಮೇಳನಗಳು ಪ್ರತಿಭೆಗಳು ಅರಳಲು ರಹದಾರಿ, ಹೆದ್ದಾರಿಗಳಾಗಿರುವುದರಿಂದ ಅದೆಷ್ಟೋ ಪ್ರತಿಭೆಗಳು ಅನಾವರಣಗೊಂಡು ನಾಡಿಗೆ ಪರಿಚಯವಾಗಲು ಅನುಕೂಲವಾಗುತ್ತವೆ. ಸಾಹಿತ್ಯ ಸಮ್ಮೇಳನಗಳು ಕೇಳುಗರಲ್ಲಿ ಸಾಂಸ್ಕೃತಿಕ ರಸದೌತಣ ಒದಗಿಸುತ್ತವೆ. ಕೊಪ್ಪಳದ ಮಣ್ಣಿನ ಗುಣ ಬಹಳ ಮಹತ್ವವಾದದು ಇಲ್ಲಿಯ ಮಣ್ಣಿನ ಗುಣ ಪ್ರತಿಭೆಗಳು ಪ್ರಜ್ವಲಿಸುವದಕ್ಕೆ ಸೂಕ್ತವಾಗಿದೆ. ಈ ಜಿಲ್ಲೆಯ ಬಹುದೊಡ್ಡ ಸಾಹಿತಿಯಾದ ಡಾ.ಸಿದ್ಧಯ್ಯ ಪುರಾಣಿಕರು ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳದ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿರುವುದು ಹೆಮ್ಮೆಯ ಸಂಗತಿ ಎಂದು ಕೊಪ್ಪಳದ ಹಿರಿಯ ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ ಹೇಳಿದರು.
ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡ ಸಿರಿಗನ್ನಡ ವೇದಿಕೆಯ ಪ್ರಥಮ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತರಾದ ಸಿದ್ಧನಗೌಡ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸಾಹಿತ್ಯವು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ. ಸಾಹಿತ್ಯ ಎಂದರೆ ಕೇವಲ ಪಾಂಡಿತ್ಯ ಪ್ರದರ್ಶನವಲ್ಲ. ಸಾಹಿತ್ಯ ಸಮ್ಮೇಳನಗಳು ಜನರ ಆಶಯಗಳಿಗೆ ಸ್ಪಂದಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಬೇಕು, ಗ್ರಾಮೀಣ ಜನರ ಬದುಕು ಹಸನಗೊಳಿಸಬೇಕು. ಯುವಕರು ದುಶ್ಚಟಗಳಿಗೆ ದಾಸರಾಗದೇ ಸಾಹಿತ್ಯ ರಚನೆಯತ್ತ ಒಲವು ಬೆಳೆಸಿಕೊಳ್ಳಬೇಕು. ಸಾಹಿತ್ಯ ರಚನೆ ಮತ್ತು ಸಾಹಿತ್ಯ ಸಮ್ಮೇಳನಗಳು ಒಂದಕ್ಕೊಂದು ಪೂರಕವಾಗಿರಬೇಕು ಎಂದರು.
ಪತ್ರಕತರ್ೆಯಾದ ಸಾವಿತ್ರಿ ಮುಜುಮದಾರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಮಹೇಶಬಾಬು ಸುವರ್ೆ ಅವರು ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿ ಡಾ.ಸಿದ್ಧಯ್ಯ ಪುರಾಣಿಕರ ಹೆಸರಿನಲ್ಲಿ ಪ್ರಶಸ್ತಿ ನೀಡುವುದರ ಮೂಲಕ ಅವರ ಹೆಸರನ್ನು ಸಾಹಿತ್ಯ ಕ್ಷೇತ್ರದಲ್ಲಿ ಜೀವಂತವಾಗಿಟ್ಟಿರುವುದು ಹೆಮ್ಮೆಯ ಸಂಗತಿ ಎಂದರು.
ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕೊಪ್ಪಳ ಎಲ್ಲಾ ಹೋರಾಟಕ್ಕೆ ಮುಂಚೂಣಿಯಾಗಿರುತ್ತದೆ. ಕೊಪ್ಪಳವು ಸಾಹಿತ್ಯ, ಸಂಗೀತ, ಕಲೆ, ಕ್ರೀಡೆ, ರಂಗಭೂಮಿ, ಚಲನಚಿತ್ರ ಹೀಗೆ ಎಲ್ಲಾ ರಂಗಗಳಲ್ಲೂ ಮುಂದಿದೆ. ಪಾಲಕರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಅವರ ಆಸಕ್ತಿಗಳಿಗನುಗುಣವಾಗಿ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಸಾದಿಕ್ ಅಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಿರಿಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮಹೇಶಬಾಬು ಸುವರ್ೆ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಜಿ.ಎಸ್.ಗೋನಾಳ, ಉಪನ್ಯಾಸಕರಾದ ಶರಣಪ್ಪ ಚ.ಬಿಳಿಎಲಿ, ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಬಿ.ಅಳವಂಡಿ, ಹಿರಿಯ ಸಾಹಿತಿಗಳಾದ ಡಾ.ಮಹಾಂತೇಶ ಮಲ್ಲನಗೌಡರ, ಪತ್ರಕರ್ತರಾದ ವಾಯ್.ಬಿ.ಜೂಡಿ, ಸಿದ್ದಪ್ಪ ಹಂಚಿನಾಳ, ಎನ್.ಎಂ.ದೊಡ್ಡಮನಿ, ಶಿವಕುಮಾರ ಹಿರೇಮಠ, ಫಕೀರಪ್ಪ ಗೋಟೂರು ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಗವಿಸಿದ್ಧಪ್ಪ ಕೊನಸಾಗರ ಪ್ರಾಥರ್ಿಸಿದರು. ಮಂಜನಾಥ ಚಿತ್ರಗಾರ ಸ್ವಾಗತಿಸಿದರು. ಗವಿಸಿದ್ಧಪ್ಪ ಬಾರಕೇರ ನಿರೂಪಿಸಿದರು. ಉಮೇಶ ಸುವರ್ೆ ವಂದಿಸಿದರು.