ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ  Talented SSLC, PUC students felicitated

ಲೋಕದರ್ಶನ ವರದಿ

ಕಂಪ್ಲಿ 14 : ಸಾಮಾಜಿಕ ಕಳಕಳಿಯೊಂದಿಗೆ ಯುವ ನಾಯಕ ಹೊಸಕೋಟೆ ಜಗದೀಶ ಅವರು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಹೇಳಿದರು. ಸ್ಥಳೀಯ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ವೀರಶೈವ ಭವನದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಜನ್ಮದಿನದ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ,ಹೊಸಕೋಟೆ ಜಗದೀಶ ಅವರು ಸದಾ ಸಮಾಜದ ಏಳಿಗೆಗೆ ಶ್ರಮಿಸುವ ಜೊತೆಗೆ ಸಾಮಾಜಿಕ ಕಳಕಳಿಯನ್ನು ನಿರಂತರವಾಗಿ ಹೊಂದಲಿ ಎಂದರು.

ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತ ಮಠದ ಪರಮಪೂಜ್ಯ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಸಂವಿಧಾನವನ್ನು ಕಟ್ಟಿಕೊಟ್ಟಂತಹ ಸಮಾಜ ವೀರಶೈವ ಸಮಾಜವಾಗಿದೆ. ಈ ಶಿಕ್ಷಣದಿಂದಾಗಿ ಸಾಕಷ್ಟು ಮಕ್ಕಳಿಗೆ ಒಳ್ಳೆಯ ಭವಿಷ್ಯದ ಕಡೆಗೆ ವಾಲುವಂತಾಗಿದೆ. ಸಮಾನತೆ ತಂದಂತಹ ಸಮಾಜವಾಗಿದೆ. ಶಿಕ್ಷಣ ಮತ್ತು ಸಮಾಜಕ್ಕಾಗಿ ಹೊಸಕೋಟೆ ಜಗದೀಶ ಶ್ರಮಿಸುತ್ತಿದ್ದಾರೆ ಎಂದರು. ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾ,ಡಿ ಶಿಕ್ಷಣದಲ್ಲಿ ಮಕ್ಕಳ ಭವಿಷ್ಯ ಅಡಗಿದೆ.

ಆ ದೃಷ್ಠಿಯಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಸಮಾಜ ಸಹಕಾರದಿಂದಾಗಿ ಇಂತಹ ದೊಡ್ಡ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು ಎಂದರು. ಕಲ್ಯಾಣಚೌಕಿ ಮಠದ ಬಸವರಾಜ ಶಾಸ್ತ್ರ, ದಿವಾನ್ ಖಾನಾ ಹಜರತ್ ಸೈಯದ್ ಶಾ ಅಬುಲ್ ಹಸನ್ ಖಾದ್ರಿ, ಪಾಸ್ಟರ್ ಪಾಲ್ ಪಂಪಾಪತಿ ಇವರು ದಿವ್ಯ ಸಾನಿಧ್ಯವಹಿಸಿದ್ದರು. ನಂತರ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90ಅ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಪೇಕ್ಸ್‌ ಬ್ಯಾಂಕ್ ಸದಸ್ಯ ಪಿ.ಮೂಕಯ್ಯಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಚಾನಾಳ್ ಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಎಸ್‌.ಎಂ.ನಾಗರಾಜ, ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಬಿ.ವಿ.ಗೌಡ, ಎಸ್‌.ಚಂದ್ರಶೇಖರಗೌಡ, ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಉಪಾಧ್ಯಕ್ಷ ಕರಿಬಸಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಮನೋಜ್‌ಗೌಡ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಎಸ್‌.ಎಸ್‌.ಎಂ.ಚನ್ನಯ್ಯಸ್ವಾಮಿ, ವಾಲಿ ಕೊಟ್ರ​‍್ಪ, ಮೆಟ್ರಿ ಹೊನ್ನಳ್ಳಿ ಶಿವಪುತ್ರ​‍್ಪ, ವಿ.ವಿದ್ಯಾಧರ, ಜಿ.ಲಿಂಗನಗೌಡ, ಹೊನ್ನಳ್ಳಿ ಗಂಗಾಧರಗೌಡ, ಬೇರಿ​‍್ಗ ಮಹೇಶಗೌಡ, ಅಳ್ಳಳ್ಳಿ ವಿರೇಶ, ಶಂಭುಲಿಂಗ, ಹಂಪಾರೆಡ್ಡಿ, ಕೋರಿಬಸವರಾಜ, ಸೇರಿದಂತೆ ವೀರಶೈವ ಸಮಾಜದವರು ಹಾಗೂ ವಿವಿಧ ಗಣ್ಯರು ಪಾಲ್ಗೊಂಡಿದ್ದರು.