ಗುಳೇದಗುಡ್ಡ04: ಥಾಮಸ್ ಅಲ್ವಾ ಎಡಿಸನ್ ವಿದ್ಯಾರ್ಥಿ ಆಗಿದ್ದಾಗ ಗುರುಗಳಿಂದ ತಿರಸ್ಕರಿಸಲ್ಪಟ್ಟರೂ ತಾಯಿಯ ಪ್ರೋತ್ಸಾಹದಿಂದ ಜಗತ್ತಿಗೆ ಆತ ಬೆಳಕು ನೀಡಿದ. ಹಾಗೆಯೇ ಎಲ್ಲ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಪ್ರೋತ್ಸಾಹಿಸುವಂತ ಸತ್ಕಾರ್ಯ ಆಗಬೇಕು. ಅಂತಹ ಪ್ರೋತ್ಸಾಹದಾಯಕ ಕೆಲಸ ಪಟ್ಟಣದ ಪಿಇ ಟ್ರಸ್ಟ್ ಸಂಸ್ಥೆಯವರು ಮತ್ತು ಕಾಲೇಜಿನ ಪ್ರಾಧ್ಯಾಪಕರು ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಹೇಳಿದರು.
ಅವರು ಮಂಗಳವಾರ ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾಥರ್ಿಗಳಿಗೆ ಹೇಳುತ್ತ, ಥಾಮಸ್ ಅಲ್ವಾ ಎಡಿಸನ್ ವಿದ್ಯಾಥರ್ಿ ಆಗಿದ್ದಾಗ ಅವರ ಅಧ್ಯಾಪಕಿ ಈ ಹುಡುಗನಲ್ಲಿ ಅಷ್ಟು ಜ್ಞಾನ ಶಕ್ತಿಯಿಲ್ಲ, ಅದಕ್ಕೆ ಶಾಲೆಯಿಂದ ತಗೆದು ಹಾಕಲು ಇಚ್ಛಿಸಿದಾಗ ಅವರ ತಾಯಿ ನನ್ನ ಮಗನಿಗೆ ಕಲಿಸುವಷ್ಟು ಶಕ್ತಿ ನಿಮ್ಮಲ್ಲಿಲ್ಲ. ಅವನನ್ನು ಜಗತ್ತಿಗೆ ಬೆಳಕು ಕೊಡುವಂತ ವ್ಯಕ್ತಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಶಾಲೆಯಿಂದ ಕರೆತಂದು ಮನೆಯಲ್ಲಿ ಮಗ ಎಡಿಸನ್ನಿಗೆ ಸಂಪೂರ್ಣ ಸ್ವಾತಂತ್ರ್ಯನೀಡಿ ಒಂದು ಪ್ರಯೋಗಾಲಯ ಮಾಡಿಕೊಟ್ಟು, ತನ್ನಷ್ಟಕ್ಕೆ ತಾನೇ ಕಲಿಯಲು ಬಿಟ್ಟರಂತೆ. ಮುಂದೆ ಆತ ಬಲ್ಬ ಕಂಡು ಹಿಡಿದು ಜಗತ್ತಿಗೇ ಬೆಳಕು ನೀಡಿದ. ಪ್ರತಿಯೊಂದು ಬೀಜದಲ್ಲಿ ಕೂಡ ಫಲಕೊಡುವಂತ ಶಕ್ತಿಯಿರುತ್ತದೆ ಎಂದು ಹೇಳಿ, ಮತ್ತೊಂದು ಉದಹರಣೆ ನೀಡುತ್ತ, ರಾಜಾಶ್ರಯದಲ್ಲಿದ್ದ ಒಬ್ಬ ವ್ಯಕ್ತಿ ರಾಜನಿಗೆ ಬಹಳಷ್ಟು ಹಣ್ಣುಗಳನ್ನು ತಂದು ಕೊಟ್ಟನಂತೆ. ಆ ಹಣ್ಣನ್ನು ತಿನ್ನುವಾಗ ಹತ್ತಿರದಲ್ಲಿದ್ದ ಕೃಷಿಕನಿಗೆ ಹಣ್ಣನ್ನು ಸೇವಿಸುವಂತೆ ರಾಜ ಕೇಳಿದಾಗ ಆಗ ಆ ರೈತ ನನಗೆ ಹಣ್ಣಬೇಡ ಅದರಲ್ಲಿರುವ ಬೀಜಬೇಕು ಅಂದನಂತೆ. ಆಗ ಆ ರಾಜ ಸ್ವಾದಿಷ್ಟವಾಗಿರುವ ಹಣ್ಣನ್ನು ಬಿಟ್ಟು ಬೀಜ ಕೇಳುತ್ತಿರುವೆಯಲ್ಲಾ ಎಂದಾಗ, ರೈತ ಅದೇ ಬೀಜದಿಂದ ನೀವು ಮೆಚ್ಚುವಂತ ಹಣ್ಣು ಬೆಳೆದು ತೋರಿಸುತ್ತೇನೆ ಎಂದನಂತೆ. ಅದೇ ರೈತ ಮುಂದೆ ಆ ಬೀಜಗಳನ್ನು ತೆಗೆದುಕೊಂಡು ಹೋಗಿ ಹಲವು ವರ್ಷಗಳ ನಂತರ ಆ ರಾಜನನ್ನು ಕರೆದು ತಾನು ಬೆಳೆದ ಹಣ್ಣಿನ ಗಿಡಗಳನ್ನು ತೋರಿಸಿ, ಅಂದು ನೀವೊಬ್ಬರೇ ಹಣ್ಣು ತಿನ್ನುವಂತಾಗಿತ್ತು. ಆದರೆ ಈಗ ನಾನು ಅದೇ ಹಣ್ಣಿನ ಬೀಜದಿಂದ ಬೆಳೆದು ಊರೆಲ್ಲಾ ಹಣ್ಣು ತಿನ್ನುವಂತೆ ಮಾಡಿದ್ದೇನೆ ಎಂದನಂತೆ. ಈ ಪ್ರಸಂಗಗಳನ್ನು ನೋಡಿದಾಗ ವಿದ್ಯಾಥರ್ಿಗಳಲ್ಲಿ ಪ್ರತಿಭೆ ಇರುತ್ತದೆ ಆ ಪ್ರತಿಭೆಯನ್ನು ಪ್ರೋತ್ಸಾಹಿಸುವಂತ ಕೆಲಸ ಆಗಬೇಕು ಎಂದರು.
ಇನ್ನೊರ್ವ ಅತಿಥಿಗಳಾದ ಬಾಗಲಕೋಟೆಯ ಲಕ್ಷ್ಮೀ ಗೌಡರ್ ಮಾತನಾಡಿದರು. ಗೌರವ ಕಾರ್ಯದಶರ್ಿ ರವೀಂದ್ರ ಪಟ್ಟಣಶೆಟ್ಟಿ ವೇದಿಕೆ ಮೇಲಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲ ಸಿದ್ದಲಿಂಗ ಬರಗುಂಡಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಪಟ್ಟಣಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಚೇರಮನ್ ಕಮಲಕಿಶೋರ ಭಂಡಾರಿ ಅಧ್ಯಕ್ಷತೆವಹಿಸಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಆರ್.ಚೌಕಿಮಠ ವಂದಿಸಿದರು. ಸಭೆಯಲ್ಲಿ ಡಾ. ವಿ.ಎನ್.ಡಾಣಕಶಿರೂರ,ಡಾ. ಸಣ್ಣವೀರಣ್ಣ ದೊಡಮನಿ, ಡಾ.ಮಂಜಪ್ಪ ಸೇರಿದಂತೆ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.