ಪಂಚಮಸಾಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಮೇಟಿ

ಲೋಕದರ್ಶನ ವರದಿ

ಕೊಪ್ಪಳ 16: ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಜೂನ್ 30ರಂದು ಹಮ್ಮಿಕೊಳ್ಳಲಾಗಿದೆ. ಎಸ್ಎಸ್ಎಲ್ಸಿ ಯಲ್ಲಿ ಶೇ 80%, ಪಿಯುಸಿ ಯಲ್ಲಿ ಶೇ 75% ಅಂಕ ಪಡೆದ ಮಕ್ಕಳಿಂದ ಆರ್ಜಿ  ಆಹ್ವಾನಿಸಲಿದ್ದು, ಎಸ್ಎಸ್ಎಲ್ ಅಥವಾ ಪಿಯುಸಿ ಅಂಕಪಟ್ಟಿ, ಆಧಾರ ಕಾರ್ಡ, 2 ಭಾವಚಿತ್ರಗಳ ನಿಗದಿತ ದಾಖಲೆಗಳೊಂದಿಗೆ ಜೂನ್ 25 ರ ಒಳಗಾಗಿ ತಹಶೀಲ ಕಛೇರಿ ಎದುರಿಗೆ ಇರುವ ವೀರರಾಣಿ ಕಿತ್ತೂರು ಚನ್ನಮ್ಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಕೊಪ್ಪಳದಲ್ಲಿ ಅರ್ಜಿ ಯನ್ನು ಸಲ್ಲಿಸಿ ಸಮಾಜ ಬಾಂಧವರು ಪ್ರತಿಭಾ ಪುರಸ್ಕಾರದ ಸೌಲಭ್ಯವನ್ನು  ಪಡೆದುಕೊಳ್ಳಬೇಕೆಂದು ತಾಲೂಕ ಅಧ್ಯಕ್ಷ ಕರಿಯಪ್ಪ ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಮೋ: 9900362673, 9845581409, 9845716166, 9448634067, 9741263492 ಸಂಪರ್ಕಿಸಲು ಕೋರಲಾಗಿದೆ.