ಪ್ರತಿಭಾ ಪುರಸ್ಕಾರ ಸಮಾರಂಭ

ಬೆಳಗಾವಿ, 22: ಅಖಿಲ ಬ್ಯಾಹ್ಮಣ ಮಹಾ ಸಭಾ ವತಿಯಿಂದ 10ನೇ ತರಗಿಯಲ್ಲಿ 95% ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ನಗರದ ಬಾಲಿಕಾ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 17 ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರದ ಅಂಗವಾಗಿ ತಲಾ 1,000 ರೂಪಾಯಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜೇಂದ್ರ ಬೆಳಗಾವಕರ ಆಗಮಿಸಿದ್ದರು. ಎಸ್.ಎಂ. ಕುಲಕಣರ್ಿಯವರು ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್. ಮುತಾಲಿಕ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿನಯ ಕುಲಕಣರ್ಿ ಅತಿಥಿ ಪರಿಚಯ ಮಾಡಿಕೊಟ್ಟರು. ಸಂಗ್ರಾಮ ಕುಲಕಣರ್ಿ ಪಾಲಕರನ್ನುದ್ದೇಶಿಸಿ ಮಾತನಾಡಿದರು. 

ರಾಜೇಂದ್ರ ಬೆಳಗಾವಕರ ಅವರು ಮಾತನಾಡಿ "ಮೊದಲಿನ ಕಾಲದ ಕಲಿಕೆಗೂ ಹಾಗೂ ಈಗಿನ ಕಲಿಕೆಗೂ ತುಂಬಾ ವ್ಯತ್ಯಾಸವಿದೆ. ತಂತ್ರಜ್ಞಾನ, ಇಂಟರ್ನೆಟ್ನ ಸದುಪಯೋಗ ಪಡೆದುಕೊಂಡು, ಹೆಚ್ಚಿನ ಜ್ಞಾನ ಪಡೆಯುವಲ್ಲಿ ವಿದ್ಯಾಥರ್ಿಗಳು ಮುಂದಾಗಬೇಕು. ಸಮುದಾಯದ ಮುಖಂಡರು ಮತ್ತು ಹಿರಿಯರು ಸದಾ ತಮ್ಮೆಲ್ಲರ ಏಳ್ಗೆಗೆ ನೆರವಾಗುವರು" ಎಂದು ಹೇಳಿದರು.

ವೀಣಾ ಜೋಶಿ ಸ್ವಾಗತ ಗೀತೆ ಹಾಡಿದರು. ಅರವಿಂದ ಹುನಗುಂದ ಕಾರ್ಯಕ್ರಮ ನಿರೂಪಿಸಿದರು. ಶಿರಿಶ ಕಾನೇಟ್ಕರ್ ವಂದನಾರ್ಪಣೆ ಮಾಡಿದರು. 

ಕಾರ್ಯಕ್ರಮದಲ್ಲಿ ಹಲವಾರು ಜನರು ಮತ್ತು ಗಣ್ಯರು ಉಪಸ್ಥಿತರಿದ್ದು, ಯಶಸ್ವಿಗೊಳಿಸಿದರು. ಮಹಿಳಾ ವಿಭಾಗಿದಿಂದ ಪ್ರಿಯಾ ಪುರಾಣಿಕ ಮತ್ತು ಡಾ|| ವಿದ್ಯಾ ಅರಳಿಕಟ್ಟಿ ಭಾಗವಹಿಸಿದ್ದರು.