ಲೋಕದರ್ಶನ ವರದಿ
ಕಾಗವಾಡ 17: ಪಿಪಲ್ ಎಜ್ಯಕೇಶನ್ ಸೊಸೈಟಿ ಉಗಾರಖುರ್ದ ಶಿಕ್ಷಣ ಸಂಸ್ಥೆಯ ಪಿಇಎಸ್ ಇಂಡಪೆಂಡೆಂಟ ಪಿಯು ಕಾಲೇಜು ಹಾಗೂ ಬಿಬಿಎ, ಬಿಕಾಂ ಕಾಲೆಜು ಹಾಗೂ ಲಾಯನ್ಸ ಕ್ಲಬ್ ಉಗಾರ ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ದಿ.17 ರಂದು ಪಿಯು ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಶನೆ ಸ್ಪಧರ್ಾ ಕಾರ್ಯಾಗಾರದ ಪ್ರಶಸ್ತಿ ಪ್ರಧಾನ ಸಮಾರಂಭ ಯಶಸ್ವಿಯಾಗಿ ಜರುಗಿತು.
ಪ್ರಶಸ್ತಿ ವಿತರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಕುಡಚಿ ಪಟ್ಟಣದ ಉದ್ಯಮಿಗಳಾದ ಮುಸ್ತಕ ಬಾಗಶಿರಾಜ ಹಾಗೂ ಉಗಾರಖುರ್ದದ ಉದ್ಯಮಿಗಳಾದ ಜಯೇಂದ್ರ ಶೆಟ್ಟಿ ಉಗಾರ ಬುದ್ರುಕದ ಸಾಮಾಜಿಕ ಕಾರ್ಯಕರ್ತೆ ಕಾವಾಂಜಲಿ ಅವರು ಆಗಮಿಸಿದ್ದರು.
ಅವರು ವಿದ್ಯಾರ್ಥಿಗಳು ಪಡೆಯುವ ಪ್ರತಿಯೊಂದು ಕೋರ್ಸಗಳ ಮಹತ್ವವನ್ನು ಹೇಳಿದರು. ಸ್ಪರ್ಧಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸಾಮಥ್ರ್ಯಗುರುತಿಸುವ ಕಾರ್ಯವನ್ನು ತುಂಬು ಹೃದಯದಿಂದ ಪ್ರಶಂಸಿದರು. ಕಾಗವಾಡದ ಶಿವಾನಂದ ಪದವಿಪೂರ್ವ ಮಹಾವಿದ್ಯಾಲಯವು ಸಮಗ್ರ ವಿರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು. ಕಾಗವಾಡ, ರಾಯಬಾಗ ತಾಲೂಕಿನ ಮಹಾವಿದ್ಯಾಲಯಗಳ ಬಹುಸಂಖ್ಯಾತ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಸ್ಥೆಯ ಮಾರ್ಗದರ್ಶಕರಾದ ಜಿ.ಆರ್.ಕಿಲ್ಲೇದಾರ ಅವರು ಸೋಲು ಗೆಲವನ್ನು ಸಮನಾಗಿ ಸ್ವಕರಿಸಬೇಕು. ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಳಬೇಕು. ಸ್ಪರ್ಧಿಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿ ಶುಭಕೋರುತ್ತಾ ತಮ್ಮ ಅನಿಸಿಕೆಗಳನ್ನು ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ರಾಮಚಂದ್ರ ಕಿಲ್ಲೇದಾರ ಅವರು ಅಧ್ಯಕ್ಷೀಯ ಸಮಾರೋಪ ನೆರವೇರಿಸಿದರು. ಉಪನ್ಯಾಸಕಿ ವೈಶಾಲಿ ನಿಕ್ಕಮ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ದೈಹಿಕ ಉಪನ್ಯಾಸಕರಾದ ಅಮರ ಕೊರವಿ, ಮಲ್ಲಿಕಾರ್ಜುನ ಕವಲಗುಡ್ಡ ಭಾಗವಹಿಸದ್ದರು.ಪ್ರಜ್ವಲ ಸಮಾಜ ನಿರೂಪಣೆ ಮಾಡಿದರು.