ಕೊಪ್ಪಳ: ಡೆಂಗ್ಯೂ ಖಾಯಿಲೆ ನಿಯಂತ್ರಣಕ್ಕೆ ಸೂಕ್ತ ಮುಂಜಾಗೃತ ಕ್ರಮ ಅನುಸರಿಸುವಂತೆ ಕೊಪ್ಪಳ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವನಂದ ವ್ಹಿ.ಪಿ ರವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೂಕನಪಳ್ಳಿ ವ್ಯಾಪ್ತಿಯ ಬರುವ ಸರಕಾರಿ ಪ್ರಾಥಮಿಕ ಶಾಲೆ ದನಕನದೊಡ್ಡಿ ಇವರ ಸಂಯುಕ್ತ ಆಶ್ರಯದಲ್ಲಿ ದನಕನದೊಡ್ಡಿ ಗ್ರಾಮದಲ್ಲಿ ಜ್ವರ ಪ್ರಕರಣ ಹೆಚ್ಚಾದ ಪ್ರಯುಕ್ತ ಇತ್ತೀಚೆಗೆ (ಅ.01) ಹಮ್ಮಿಕೊಳ್ಳಲಾದ ''ಡೆಂಗ್ಯೂ ಖಾಯಿಲೆ ಜಾಗೃತಿ'' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡೆಂಗ್ಯೂ ಜ್ವರ ಸೋಂಕಿತ, ಸಾಂಕ್ರಾಮಿಕ ರೋಗವಾಗಿದ್ದು, ಈಡೀಸ್ ಇಜಿಪ್ಟೈ ಎಂಬ ಸೋಂಕಿತ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದರಲ್ಲಿ 03 ರೀತಿಯ ಡೆಂಗ್ಯೂ ಜ್ವರ, ಡೆಂಗ್ಯೂ ಶಾಕ್ಸಿಂಡ್ರೋಮ್, ಡೆಂಗ್ಯೂ ರಕ್ತಸ್ರಾವ ಎಂಬ ಖಾಯಿಲೆಗಳಿವೆ. ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಹೊಂದಿ ಬೆಳೆಯುತ್ತವೆ. ಆದ್ದರಿಂದ ಇದರ ನಿಯಂತ್ರಣಕ್ಕೆ ಸೂಕ್ತ ಮುಂಜಾಗೃತೆ ಕ್ರಮಗಳನ್ನು ಅನುಸರಿಸಬೇಕು. ಈ ರೋಗ ಹರಡದಂತೆ ಎಚ್ಚರಿಕೆ ವಹಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಹಾಗೂ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕೊಪ್ಪಳ ಕ್ಷೇತ್ರ ಆರೋಗ್ಯ ಶಿಕ್ಷಕಿ ಗಂಗಮ್ಮ ರವರು ಮಾತನಾಡಿ, ಡೆಂಗ್ಯೂ ಜ್ವರ ಹರಡದಂತೆ ಮುಂಜಾಗೃತೆಗಾಗಿ ನೀರಿನ ಶೇಖರಣಾ ತೊಟ್ಟೆಗಳಾದ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಕಲ್ಲಿನ ದೋಣಿ, ಇವುಗಳನ್ನು ಭದ್ರವಾಗಿ ಮುಚ್ಚಿ ಸೊಳ್ಳೆ ಉತ್ಪತ್ತಿಯಾಗದಂತೆ ಮನೆಯ ಮೇಲೆ ಸುತ್ತ-ಮುತ್ತ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳು, ಟೈರ್ಗಳು, ಒಡೆದ ತೆಂಗಿನ ಚಿಪ್ಪು ಇತ್ಯಾದಿಗಳನ್ನು ತಕ್ಷಣ ವಿಲೇವಾರಿ ಮಾಡಿ, ಏರ್ ಕೂಲರ್, ಹೂವಿನ ಕುಂಡ, ಬಕೆಟು ಇತ್ಯಾದಿಗಳನ್ನು ಪ್ರತಿವಾರ ಖಾಲಿ ಮಾಡಿ ಒಣಗಿಸಿ ಭರ್ತಿಮಾಡಿರಿ. ಹಗಲಿನಲ್ಲಿ ನಿದ್ದೆ ಮಾಡುವ ಮಕ್ಕಳು ಮತ್ತು ವಿಶ್ರಾಂತಿ ಪಡೆಯುವ ವಯೋವೃದ್ದರು, ಗಭರ್ಿಣಿಯರು ಸಹ ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆಯನ್ನು ತಪ್ಪದೇ ಬಳಸಬೇಕು. ಮನೆಯ ಹತ್ತಿರ ಸಾಯಂಕಾಲ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಒಟ್ಟಾರೆಯಾಗಿ ಸೊಳ್ಳೆಯಿಂದ ದೂರವಿದ್ದು, ರೋಗ ಹರಡದಂತೆ ಜಾಗೃತಿ ವಹಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯ ಲಕ್ಷಣ್ಣ ರವರು ವಹಿಸಿದ್ದರು. ಕೂಕನಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಸಿದ್ದನಗೌಡ ಪಾಟೀಲ್ ಅವರು ಜ್ವರ ಪೀಡಿತರಿಗೆ ''ಆರೋಗ್ಯ ತಪಾಸಣೆ ಶಿಬಿರ'' ಏರ್ಪಡಿಸಿ ಜ್ವರ ಪೀಡಿತರಿಗೆ ಚಿಕಿತ್ಸೆ ನೀಡಿದರು. ಗ್ರಾಮದಲ್ಲಿ ಆಶಾ ಮತ್ತು ಕಿ.ಆ.ಸ ಮನೆ ಮನೆಗೆ ಬೇಟಿ ನೀಡಿ ಲಾರ್ವಾ ಸಮೀಕ್ಷೆ ಮಾಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ಶಾಲೆಯಲ್ಲಿ ಮಕ್ಕಳಿಗೂ ಕೂಡ ಡೆಂಗ್ಯೂ ಖಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಮುಖ್ಯ ಗುರುಗಳು, ಕಿ.ಆ.ಸ ಪಾಮೀದಾ ಶಬ್ಬೀರ್, ಆಶಾ ಕಾರ್ಯಕತರ್ೆಯರು, ಸಹ ಶಿಕ್ಷಕರುಗಳಾದ ಅನಿಲ್, ಬಸವರಾಜ, ಆಂಜನೇಯ, ಸುನಿಲ್, ಸಿದ್ದಪ್ಪ, ತುಳಸಿಕಟ್ಟಿ, ವಿರೇಶ ಗ್ರಾಮದ ನಾಗರಿಕರು, ಹಿರಿಯ ಮುಖಂಡರು ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.