ಬೇಸಿಗೆಯಲ್ಲಿ ನೀರು ಪೂರೈಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಗದಗ 25:  ಗದಗ ಜಿಲ್ಲೆಯ  ನೆರೆ ಸಂದರ್ಭದಲ್ಲಿ ಸಂತ್ರಸ್ತಕ್ಕೊಳಗಾದ ಕುಟುಂಬಗಳ ಪುನರ್ವಸತಿ ಹಾಗೂ ಮೂಲಭೂತ ಸೌಕರ್ಯಗಳ ಪುನರ್ ನಿರ್ಮಾಣ ಕಾಮಗಾರಿ  ಪೂರ್ಣಗೊಳಿಸಲು  ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಡಾ. ರಾಜಕುಮಾರ್ ಖತ್ರಿ ಅವರು ಸೂಚಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ  ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ  ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ  ಬರ ಪರಿಸ್ಥಿತಿ ಸರ್ವೇ ಸಾಮಾನ್ಯವಾಗುತ್ತಿದ್ದು  ಜಿಲ್ಲೆಯಲ್ಲಿನ ಅಂತರ್ಜಲ ಸಂರಕ್ಷಣೆ ಮಳೆ ನೀರು ಸಂಗ್ರಹ ಹಾಗೂ ಪರಿಸ್ಥಿತಿಗನುಗುಣವಾದ ಬೆಳೆಗಳನ್ನು ಬೆಳೆಯುವಂತೆ  ಸಂಬಂಧಿತ ಇಲಾಖೆಗಳು  ಅಗತ್ಯದ ಕ್ರಮಗಳನ್ನು  ಕೈಕೊಳ್ಳಬೇಕು.    ಬರ ಪರಿಸ್ಥಿತಿ ಘೋಷಿಸಲು ನಿಯಮಗಳನ್ವಯ ಸಾಧ್ಯವಿಲ್ಲದಿದ್ದಾಗ  ಆದರೆ ಮಳೆ ಆಗದೇ ಕೊಳವೆ ಬಾವಿ ಬತ್ತಿದ ಪರಿಸ್ಥಿತಿಯಲ್ಲಿ  ಪ್ರಕೃತಿ ವಿಕೋಪ ಯೋಜನೆಯಡಿ ಅನುದಾನ ಬಳಕೆ ಸಾಧ್ಯವಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರದ ಮಟ್ಟದಲ್ಲಿ ಇಲಾಖೆಗಳ ಮುಖ್ಯಸ್ಥರೊಂದಿಗೆ ಚಚರ್ಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.     

ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಜಿಲ್ಲೆಯ ನೆರೆ ಸಂತ್ರಸ್ತರ ಪುನರ್ವಸತಿ, ಮೂಲಭೂತ ಸೌಕರ್ಯಗಳ ಪುನರ್ ನಿಮರ್ಾಣ,  ಬರುವ ಬೇಸಿಗೆಯಲ್ಲಿ  ಕುಡಿಯುವ ನೀರು, ಮೇವು, ಉದ್ಯೋಗ ಇವುಗಳ ಸರಿಯಾದ ಪೂರೈಕೆ ಕುರಿತು ಮಾಹಿತಿ ನೀಡಿ ಸಂಬಂಧಿತ ಇಲಾಖೆಗಳು ಈ ಕುರಿತಂತೆ ಕೈಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವರದಿ ನೀಡಲು ಸೂಚಿಸಿದರು.

ಜಿಲ್ಲೆಯಲ್ಲಿ 1.77 ಲಕ್ಷ ಮೆ.ಟನ್ ಮೇವು ಸಂಗ್ರಹವಿದ್ದು 21 ವಾರಗಳ ಕಾಲ ಸಾಕಾಗಲಿದೆ.  ಜಿಲ್ಲೆಯಲ್ಲಿನ 1.89 ಲಕ್ಷ ಜಾನುವಾರುಗಳಿಗೆ ಕಾಲು ಬೇನೆ ಲಸಿಕೆ ಹಾಕಲಾಗಿದೆ ಎಂದು  ಪಶು ಸಂಗೋಪನಾ ಇಲಾಖೆ  ಅಧಿಕಾರಿಗಳು ತಿಳಿಸಿದರು.   ಜಿಲ್ಲೆಯಲ್ಲಿ 1.02 ಲಕ್ಷ ಆಯುಷ್ಮಾನ್ ಆರೋಗ್ಯ ಕಾಡರ್ುದಾರರು ಇದ್ದು  ಈವರೆಗೆ 5820  ಫಲಾನುಭವಿಗಳ ಪೈಕಿ  4,732 ಫಲಾನುಭವಿಗಳಿಗೆ 1.53 ಕೋಟಿ  ರೂ. ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.    ಜಿಲ್ಲೆಯ ಹಿಂಗಾರು ಹಂಗಾಮಿನಲ್ಲಿ 2.69 ಲಕ್ಷ ಹೆಕ್ಟೇರ್  ಪೈಕಿ 2.50 ಲಕ್ಷ ಹೆಕ್ಟೇರ ನಲ್ಲಿ ಬಿತ್ತನೆಯಾಗಿದೆ.  ಕಡಲೆ ಹಾಗೂ ಶೇಂಗಾ ಬೆಳೆಗಳನ್ನು  ಬೆಂಬಲ ಬೆಲೆಯಲ್ಲಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.   ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಡಿ  2019 ರ  ಮುಂಗಾರು ಹಂಗಾಮಿನಲ್ಲಿ  72071 ಹಾಗೂ ಹಿಂಗಾರು ಹಂಗಾಮಿನಲ್ಲಿ 1.32 ಲಕ್ಷ ರೈತರು  ನೊಂದಾಯಿಸಿಕೊಂಡಿದ್ದಾರೆ.  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1,17,990  ರೈತ ಕುಟಂಬಗಳು ಕೇಂದ್ರ ಹಾಗೂ ರಾಜ್ಯ ಸಕರ್ಾರದ ಹಣಕಾಸು ಸೌಲಭ್ಯವನ್ನು ಪಡೆಯುತ್ತಿವೆ.   ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗಾಗಿ ಪೂರ್ವ ಮುಂಗಾರುಗಾಗಿ 330 ಗ್ರಾಮಗಳ ಪೈಕಿ 260 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿದರ್ೇಶಕ ರುದ್ರಪ್ಪ ತಿಳಿಸಿದರು. 

ಸಮಾಜ ಕಲ್ಯಾಣ ಇಲಾಖೆಯ  ಮೆಟ್ರಿಕ್ ನಂತರ್ ವಿದ್ಯಾರ್ಥಿ ವೇತನವನ್ನು ನೀಡುವಲ್ಲಿ ವಿಳಂಬವಾಗುತ್ತಿದ್ದು  ಪರೀಕ್ಷಾ ಸಮಯದಲ್ಲಿ ಅದನ್ನು ನೀಡುವುದು ಸಮಂಜಸವಾಗುವುದಿಲ್ಲ.   ನಿಗದಿತ ಅವಧಿಯಲ್ಲಿ ವಿದ್ಯಾರ್ಥಿ ವೇತನ ವಿದ್ಯಾಥರ್ಿಗಳಿಗೆ ತಲುಪುವಂತೆ ಅಗತ್ಯದ ಕ್ರಮ ಕೈಕೊಳ್ಳಲು ಜಿಲ್ಲಾ ಉಸ್ತುವಾರಿ  ಕಾರ್ಯದರ್ಶಿಗಳು ಸೂಚಿಸಿದರು.  ಜಿಲ್ಲೆಯಲ್ಲಿ 13,536  ವಿದ್ಯಾಥರ್ಿಗಳು ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬರೆಯುವುದಕ್ಕೆ  ಅರ್ಹತೆ ಪಡೆದಿದ್ದು ಪರೀಕ್ಷೆಯ ಉತ್ತಮ ಫಲಿತಾಂಶಕ್ಕಾಗಿ  ಎಲ್ಲ ರೀತಿಯ  ಕ್ರಮ ಕೈಗೊಳ್ಳಲಾಗಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಬಾರಾಟಕ್ಕೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  1,166 ಅಂಗನವಾಡಿಗಳಿಗೆ  ಹೊಸದಾಗಿ 32 ಅಂಗನವಾಡಿ ಕಾರ್ಯಕತರ್ೆಯರನ್ನು ನೇಮಕಮಾಡಿಕೊಳ್ಳಲಾಗಿದೆ.  ಇಲಾಖೆಯ ಯೋಜನೆಗಳ ಜಾರಿಗೆ ಅಗತ್ಯದ ಅನುದಾನವನ್ನು  ಬಿಡುಗಡೆ ಮಾಡಿಸಲು ಉಪನಿದರ್ೇಶಕಿ ಡಾ.ಎಚ್.ಎಚ್. ಕುಕನೂರ ತಿಳಿಸಿದರು.  

ನರೇಗಾ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯು 78  ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು  ಆ ಪೈಕಿ 6.67 ಕೋಟಿ ರೂ ವೆಚ್ಚದಲ್ಲಿ 66 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು 12 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.   ಜಿಲ್ಲೆಯಲ್ಲಿನ ನಗರ ಪ್ರದೇಶಗಳ ಘನ ತ್ಯಾಜ್ಯ ವಿಲೇವರಿಗೆ ಸಂಬಂಧಿಸಿದಂತೆ  ವಾಹನಗಳ ಹಾಗೂ ಸಲಕರಣೆಗಳ  ಖರೀದಿಸಲಾಗಿದ್ದು  ವ್ಯವಸ್ಥಿತವಾಗಿ  ಘನತ್ಯಾಜ್ಯ ನಿರ್ವಹಣೆಗೆ ಮಾರ್ಚ 15ರಿಂದ  ಕ್ರಮ ವಹಿಸಲಾಗುವುದು ಎಂದು  ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ಎಸ್.ಎನ್. ತಿಳಿಸಿದರು. ಜಿಲ್ಲಾ   ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಅಪರ ಜಿಲ್ಲಾಧಿಕಾರಿ  ಸತೀಶಕುಮಾರ್ ಎಂ. ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ,  ವಿವಿಧ ಇಲಾಖೆಗಳ ಅಧಿಕಾರಿಗಳು   ಸಭೆಯಲ್ಲಿ ಪಾಲ್ಗೊಂಡಿದ್ದರು.