ಕನಕಾಚಲಪತಿ ಜಾತ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಶಾಸಕ ಬಸವರಾಜ

ಲೋಕದರ್ಶನ ವರದಿ

ಕನಕಗಿರಿ 12: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದ ಮಹಾ ರಥೋತ್ಸವವು ಮಾ. 16ರಂದು ನಡೆಯಲಿದ್ದು, ಜಾತ್ರೆಗೆ ಬಂದ ಲಕ್ಷಾಂತರ ಭಕ್ತರಿಗೆ ತೊಂದರೆಯಾಗದಂತೆ ಸೂಕ್ತ ರೀತಿ ವ್ಯವಸ್ಥೆಯನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ದೇವಸ್ಥಾನದ ಒಳಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜಾತ್ರಾ ಮಹೋತ್ಸವವು ಮಾ.07 ರಿಂದ ಪ್ರಾರಂಭವಾಗಿ ಮಾ.20ಕ್ಕೆ ಜಾತ್ರೆ ಮುಕ್ತಯವಾಗಲಿದೆ. ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಅಧಿಕಾರಿಗಳು ಸಕಲ ಸಿದ್ದತೆಗಳು ಮಾಡಿಕೊಳ್ಳಬೇಕು. ಪಟ್ಟಣದ ನಿವಾಸಿಗಳಿಗೆ ಹಾಗೂ ಜಾತ್ರೆಗೆ ಬರುವ ಭಕ್ತರಿಗೆ ಶುದ್ದ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳಿಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಒಂದು ವೇಳೆ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಂತರ ದೇವಸ್ಥಾನ ಜಾತ್ರೆಗೆ ಸಂಬಂಧಪಟ್ಟಂತೆ ವಾಹನ ನಿಲುಗಡೆ ಸ್ಥಳ, ಸಚ್ಚಿದಾನಂದ ಅವದೂತರ ಮಠದಲ್ಲಿ ದಾಸೋಹದ ವ್ಯವಸ್ಥೆ, ಪುಷ್ಕರಣಿಯ ಹತ್ತಿರ ತಲೆ ಮಂಡಿ ಕೊಟ್ಟವರಿಗೆ ನೀರಿನ ವ್ಯವಸ್ಥೆ, ಬರುವ ಲಕ್ಷಂತಾರ ಭಕ್ತರಿಗೆ ಕುಡಿಯುವ ನೀರು, ಬಸ್ಸಿನ ಸೌಕರ್ಯ, ರಾಜಬೀದಿಯ ಸ್ವಚ್ಛತಾ ಕಾರ್ಯ, ಅಗ್ನಿ ಶಾಮಕ ವಾಹನ ವ್ಯವಸ್ಥೆ, ಸಮರ್ಪಕ ವಿದ್ಯುತ್ ಪೂರೈಕೆ, ಆರೋಗ್ಯ ಇಲಾಖೆಯಿಂದ ಸೂಕ್ತ ವ್ಯವಸ್ಥೆ, ದೇಗುಲದ ಗೋಪುರಗಳಿಗೆ ಸುಣ್ಣ-ಬಣ್ಣ ಸಿಂಪಡಿಸುವುದು ಹಾಗೂ ವಿದ್ಯುತ್ ಅಲಂಕಾರ ಮಾಡುವಂತೆ  ಅಧಿಕಾರಿಗಳಿಗೆ ತಿಳಿಸಿದರು. ನಾನಾ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಇಲಾಖೆವಾರು ಅಧಿಕಾರಿಗಳಿಗೆ ನಿಭಾಯಿಸುವಂತೆ ಸೂಚಿಸಿದರು. 

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಸಿ.ಎಸ್.ಚಂದ್ರಮೌಳಿ, ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿ ವಿಶ್ವನಾಥ, ತಹಶೀಲ್ದಾರ್ ರವಿ ಅಂಗಡಿ, ಗಂಗಾವತಿ ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ, ಸಿಪಿಐ ಸುರೇಶ ತಳವಾರ,  ಕನಕಗಿರಿ ತಾ.ಪಂ.ಇಒ ಅರುಣಕುಮಾರ, ಪ.ಪಂ.ಮುಖ್ಯಾಧಿಕಾರಿ ತಿರುಮಲಾದೇವಿ, ಪಿಎಸ್ಐ ಪ್ರಶಾಂತ, ಸಿಡಿಪಿಒ ಶ್ವೇತಾ, ಪ.ಪಂ.ಸರ್ವ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಿವಾಸಿಗಳು ಸೇರಿದಂತೆ ಇತರರು ಇದ್ದರು.