ಜನಸಾಮಾನ್ಯರು ಶಿಬಿರಗಳ ಪ್ರಯೋಜನ ಪಡೆಯಿರಿ: ಡಾ. ರಾಜಶೇಖರ

ಲೋಕದರ್ಶನವರದಿ

ರಾಣೇಬೆನ್ನೂರು16: ಸಮಾಜದಲ್ಲಿ ಬಡವರು ಮತ್ತು ಶ್ರೀಮಂತರು ಜೀವಿಸುತ್ತಿದ್ದಾರೆ.  ಯಾವುದೇ ಕಾಯಿಲೆಗಳಿಗೆ ಬಡವ-ಬಲ್ಲಿದನೆನ್ನುವ ಭೇಧ-ಭಾವ ಇರುವುದಿಲ್ಲ ಪ್ರತಿಯೊಬ್ಬರೂ ಕಾಯಿಲೆ ಬಂದಾಗ ಸಾಮೂಹಿಕವಾಗಿ ನಡೆಸುವ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ನೇತ್ರ ಸಂಚಾರಿ ಘಟಕದ, ಆರೋಗ್ಯ ಶಿಕ್ಷಣಾಧಿಕಾರಿ ಡಾ|| ಜೆ.ಎಂ.ರಾಜಶೇಖರ ಹೇಳಿದರು. 

ಅವರು ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ಸ್ ಸಭಾಭವನದಲ್ಲಿ ಕಂಚಿಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಿವಮೊಗ್ಗ ಶಂಕರ್ ಕಣ್ಣಿನ ಆಸ್ಪತ್ರೆ, ಲಯನ್ಸ್ ಲಿಯೋ ಕ್ಲಬ್, ಸ್ವಾಕರವೇ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿವಾರಣಾ ಸಂಸ್ಥೆ ಆಯೋಜಿಸಿದ್ದ, ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 

ಜನಸಾಮಾನ್ಯರಿಗೆ, ಇಂದು ತಮ್ಮ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳಲು ಸಹ ಆಥರ್ಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.  ಸಾರ್ವಜನಿಕ ಸಂಘ-ಸಂಸ್ಥೆಗಳು ತಮ್ಮ ಸೇವಾ ಯೋಜನೆಯಲ್ಲಿ ಇಂತಹ ಕಾಯರ್ಾಗಾರಗಳನ್ನು ಆಯೋಜಿಸುತ್ತಿರುವುದರಿಂದ ಪ್ರತಿಯೊಬ್ಬರೂ ತಮ್ಮ ಕಣ್ಣುಗಳನ್ನು ಪುನ: ಪಡೆಯುವಂತಾಗಿದೆ ಎಂದರು.

    ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಲಯನ್ಸ್ ಅಧ್ಯಕ್ಷ ಬಸವರಾಜ ಬಡಿಗೇರ, ವಿನೋದ ಜಂಬಗಿ, ಕೊಟ್ಟೇಶ್ ಎಮ್ಮಿ, ಚನ್ನವೀರನಗೌಡ ಪಾಟೀಲ, ಭಾಗ್ಯ ಸಪ್ಪಾಳಿ, ಸಚಿನ್ ರಿತ್ತಿ, ಶಂಕರ್ ನಾಯ್ಕ, ರೇವನಗೌಡ ಗ್ಯಾನಗೌಡ್ರ, ಬಸವರಾಜ ಪಾಟೀಲ, ವಿಕ್ರಮ್ ಸಣ್ಣಮನಿ, ಅನೀಲ್ ಕಲಾಲ್, ಬಸವರಾಜ ಹುಲ್ಲತ್ತಿ, ಬಸವರಾಜ ಕೇಸರಿ, ಅನುರಾಧಾ ಕುಲಕಣರ್ಿ, ನಾಗರಾಜ ನಾಯ್ಕ, ಎಚ್.ಎಸ್.ರಾಘವೇಂದ್ರ ಸ್ವಾಮಿ ಸೇರಿದಂತೆ ಮತ್ತಿತರ ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು, ವೈದ್ಯರು ಪಾಲ್ಗೊಂಡಿದ್ದರು.  ಮುಂಜಾನೆಯಿಂದ ಮಧ್ಯಾಹ್ನದವರೆಗೂ ನಡೆದ ತಪಾಸಣಾ ಶಿಬಿರದಲ್ಲಿ ತಾಲೂಕಿನ, ಜಿಲ್ಲೆಯ 350ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡಿದ್ದರು.