ಅಲ್ಪಸಂಖ್ಯಾತರ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಲಾಭ ದೊರೆಕಿಸಿ

ವಿಜಯಪುರ 04: ಅಲ್ಪಸಂಖ್ಯಾತರ ಅರ್ಹ ಫಲಾನುಭವಿಗಳಿಗಾಗಿ ಇರುವಂತಹ ಯೋಜನೆಗಳ ಲಾಭವನ್ನು ಸಕಾಲಕ್ಕೆ ದೊರಕಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸಂಬಂಧಿಸಿದ ಸೂಚನೆ ನೀಡಿದರು

        ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಕುರಿತು ಪರಿಶೀಲನಾ ಸಮಿತಿ ಸಭೆ ನಡೆಸಿದ ಅವರು ಪ್ರಧಾನಮಂತ್ರಿ ಆವಾಸ ಯೊಜನೆಯಡಿ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಆದಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವ್ಯಾಪ್ತಿಯಲ್ಲಿ ಬೌತಿಕ ಗುರಿಗೆ ತಕ್ಕಂತೆ ಆಥರ್ಿಕ ಪ್ರಗತಿ ಸಾಧಿಸಬೇಕು. 

     ಅಂಗನವಾಡಿ ಕಾರ್ಯಕತರ್ೆಯರಿಗೆ ಸಕಾಲಕ್ಕೆ ವೇತನ ಪಾವತಿಸುವ ಕಾರ್ಯ ಮಾಡಬೇಕು. ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿದ್ಯಾಥರ್ಿಗಳಿಗೆ ಇರುವ ಶಿಶ್ಯವೇತನ ಸಕಾಲಕ್ಕೆ ತಲುಪುಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು

ಶಿಕ್ಷಣ ಜೀವನಜೀವನ ರೂಪಿಸಲು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಂತೆ ವ್ಯಕ್ತಿತ್ವ ರೂಪಿಸುವಲ್ಲಿ ಭದ್ರ ಬುನಾದಿಯಾಗಿದ್ದು ಅಲ್ಪಸಂಖ್ಯಾತರ ವಿಶೇಷವಾಗಿ ಉದರ್ು ಶಾಲಾ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಇನ್ನಷ್ಠು ಸುಧಾರಿಸಬೇಕು. ಶೈಕ್ಷಣಿಕ ಸುಧರಣೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನಿರವಾಗುವಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಮೂಲಕ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.

        ಜಿಲ್ಲೆಯಲ್ಲಿ ಆಧಾರಲಿಂಕ್ ಮತ್ತು ಇತರ ಕಾರಣಗಳಿಂದ 1346 ಮಕ್ಕಳಿಗೆ ಶಿಶ್ಯವೇತನ ತಲುಪಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಪ್ರತಿ ಮಗುವನ್ನು ತಮ್ಮ ಮಗುವಿನಂತೆ ಭಾವಿಸಿ ಸೌಲಭ್ಯ ಕಲ್ಪಿಸಬೇಕು. ಆಯಾ ಶಾಲಾ ವಿದ್ಯಾಥರ್ಿಗಳ ಮುಖ್ಯೊಪಾಧ್ಯಯರನ್ನು ಹೊಣೆಗಾರರನ್ನಾಗಿ ಮಾಡುವುದರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ತಾಲೂಕಾ ವ್ಯಾಪ್ತಿಯಲ್ಲಿ 6 ರಿಂದ 10ನೇ ತರಗತಿ ಹಾಗೂ ಪಿಯುಸಿ ಕಾಲೇಜ್ ವಿದ್ಯಾಥರ್ಿಗಳಿಗೆ ಶಿಶ್ಯ ವೇತನ ದೊರೆಯುವಂತೆ ನೋಡಿಕೊಳ್ಳಬೇಕು ಯಾವುದೆ ಪರಿಸ್ಥಿತಿಯಲ್ಲಿ ಅನುದಾನ ಲ್ಯಾಪ್ಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಸೂಚನೆ ನೀಡಿದರು.

          ಜಿಲ್ಲೆಯಲ್ಲಿ ಉದರ್ು ಶಿಕ್ಷಣ ವ್ಯವಸ್ಥೆ ಇನ್ನು ಪರಿಣಾಮಕಾರಿಯಾಗಿ ಸುಧಾರಿಸಬೇಕು. ಪ್ರತಿಭಾವಂತ ವಿದ್ಯಾಥರ್ಿಗಳನ್ನು ಗುರುತಿಸುವ ಕಾರ್ಯ ನಡೆಸಬೇಕು. ಅಲ್ಪಸಂಖ್ಯಾತರಿಗಾಗಿ ಇರುವಂತಹ ಯೋಜನೆಗಳ ಕುರಿತ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳಿಂದ ಸಿದ್ದಪಡಿಸಿದ ವಿಶೇಷ ಲೇಖನಗಳನ್ನು ಒಳಗೊಂಡ ಕಿರು ಮಾಹಿತಿ ಪುಸ್ತಕವನ್ನು ಹೊರತರಬೇಕು. 

      ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಸಂಪಾದಕತ್ವದಲ್ಲಿ ವಿವಿಧ ಸಲಹಾ ಸಮಿತಿ ರಚಿಸಿಕೊಂಡು ಲೇಖನಗಳ ಪರಿಶೀಲನೆ ಆಧಾರದ ಮೇಲೆ ಕೈಪಿಡಿಯಲ್ಲಿ ಲೇಖನ ಪ್ರಕಟಿಸಿ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ನೆರವಾಗಲು ಅವರು ಸೂಚನೆ ನೀಡಿದರು.

         ಸಭೆಯಲ್ಲಿ ವಿವಿಧ ವಸತಿನಿಲಯದ ವಿದ್ಯಾಥರ್ಿಗಳಿಗೆ ಕಲ್ಪಸಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಕೇಂದ್ರ ಸಕರ್ಾರದಿಂದ ಮಂಜೂರಾಗಿರುವ ಅನುದಾನದ ಸಮರ್ಪಕ ಬಳಕೆ ಮಾಡುವಂತೆ ತಿಳಿಸಿದ ಅವರು ಮುಸ್ಲಿಂ ಸಮೂದಾಯ ಹೆಚ್ಚಿರುವ ಸ್ಥಳದಲ್ಲಿರುವ ಶಾಲಾ ಆವರಣದಲ್ಲಿ 2 ಇಂಗ್ಲೀಷ ಮಾದ್ಯಮ ಶಾಲೆ ತೆರೆಯಲು ತಲಾ 10 ಗುಂಟೆ ಎರಡು ಸ್ಥಳಗಳನ್ನು ಗುರುತಿಸುಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

         ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕಟ್ಟಡ ಕಾಮರ್ಿಕರ ನೊಂದಣಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಶೈಕ್ಷಣಿಕ ಗುಣಮಟ್ಟ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಅನುಪಮ ಅಗರವಾಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.