ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ: ಚಂದ್ರಗೀರಿ

ಲೋಕದರ್ಶನವರದಿ

ಶಿಗ್ಗಾವಿ23 : ಸಾಮಾಜಿಕ ಬದ್ಧತೆ, ಸಂಘಟನೆಯ ಏಳಿಗೆಯ ಜೊತೆಗೆ ಸಮಾಜ ಸುಧಾರಣೆಯ ಒಂದು ಭಾಗವಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವ ಪಟ್ಟಣದ ಶ್ರೀರಾಮ  ಫೈನಾನ್ಸ ಫ್ರೈ ಲಿನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬನ್ನೂರ ಶಾಲೆಯ ಮುಖ್ಯೋಪಾಧ್ಯಾಯ ಬಿ ಶ್ರೀನಿವಾಸ ಹೇಳಿದರು.

ಶುಕ್ರವಾರ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡ ಶ್ರೀರಾಮ ಟ್ರಾನ್ಪೋರ್ಟ ಫೈನಾನ್ಸ ಫ್ರೈ ಲಿ.ನ ಶಿಗ್ಗಾವಿ ಶಾಖೆಯಿಂದ ವತಿಯಿಂದ ಹಮ್ಮಿಕೊಂಡ ಮಕ್ಕಳಿಗಾಗಿ ಶೈಕ್ಷಣಿಕ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಹಲವಾರು ಇಲಾಖೆಗಳಿವೆ ಆದರೆ ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಒತ್ತು ಕೊಟ್ಟಿರುವ ಈ ಸಂಸ್ಥೆ ವಿದ್ಯಾರ್ಥಿಗಳ ಏಳಿಗೆ ದೇಶದ ಏಳಿಗೆ ಎಂದು ಭಾವಿಸಿದೆ, ಅವರ ಆ ಉದ್ದೇಶ ಎಲ್ಲ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿದೆ ಇಂತಹ ಸಮಾಜ ಕಳಕಳಿಯ ಜ್ಞಾನ ಬಹಳ ಅಪರೂಪ, ವಿದ್ಯಾರ್ಥಿಗಳು  ಇದರ ಸದುಪಯೋಗ ಪಡೆದು ತಮ್ಮ ಜೀವನದಲ್ಲಿ ಇಂತಹ ಕಳಕಳಿಯ ಜ್ಞಾನ ಅಳವಡಿಸಿಕೊಳ್ಳಲಿ ಎಂದರು.

ಬೆಳಗಾವಿಯ ಎಸ್ಟಿಎಫ್ಸಿಯ ವಲಯ ಮುಖ್ಯಸ್ಥ ಉದಯ ಚನ್ನವರ ಮಾತನಾಡಿ ವಿದ್ಯಾರ್ಥಿಗಳ ಜೀವನಲ್ಲಿ ಗುರು ಮತ್ತು ಗುರಿ ಇದ್ದಾಗ ಮಾತ್ರ ಎನನ್ನಾದರು ಸಾಧಿಸಬಹುದಾಗಿದೆ.

  ಬಡತನ ಮತ್ತು ಹಸಿವು ಶಾಪವಲ್ಲ ಅವುಗಳನ್ನು ವರವಾಗಿ ಮಾರ್ಪಡಿಸಿದಾಗ ಪ್ರತಿಭೆಗಳು ಹೊರಹೊಮ್ಮುತ್ತವೆ, ನಮ್ಮನ್ನು ನಾವು ಅರ್ಥಮಾಡಿಕೊಂಡು ಬದುಕಿದಾಗ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಏದುರಿಸುವ ಮನೋಭಾವ ಬರುತ್ತದೆ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುಳಾ ಚಂದ್ರಗೀರಿ ಮಾತನಾಡಿ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಅದಕ್ಕೆ ಪೂರಕವೆಂಬಂತೆ ವಿವಿಧ  ಸಂಸ್ಥೆಗಳು ಪ್ರೋತ್ಸಾಹ ಪೂರಕವಾಗಿ ಮುಂದು ಬರುತ್ತಿದ್ದು ಅದರಲ್ಲಿ ಶ್ರೀರಾಮ ಪೈನಾನ್ಸ ಸಹಿತ ಮುಂದೆ ಬಂದಿರುವದು ಶ್ಲಾಘನಿಯವಾಗಿದೆ ಎಂದರು.

ಸರಕಾರ  ನೌಕರರ ಸಂಘದ ಅಧ್ಯಕ್ಷ ಅರುಣ ಹುಡೆದಗೌಡ್ರ, ಪಿಎಸ್ಐ ಡಿ ಎನ್ ಸನ್ಮನಿ ಮಾತನಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಭಾಗವಹಿಸಿ ಆಶಿರ್ವಚಿಸಿದರು.ಇದೇ ಸಂದರ್ಭದಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮ ಫೈನಾನ್ಸನ ಹುಬ್ಬಳ್ಳಿಯ ಎಸ್ಟಿಎಫ್ಸಿಯ ಅಧಿಕಾರಿ ಸುರೇಶ ಚೌವಾಣ, ಮತ್ತು ಇನ್ನೂರ್ವ ಅಧಿಕಾರಿ ಶ್ರೀಧರ ಕುಲಕಣರ್ಿ, ಸುನಿಲ್ ಸದರಿ, ಪ್ರಶಾಂತ ಸಕ್ರನ್ಣವರ, ಎಸ್ ಎನ್ ಮುಗಳಿ, ಮಾಳಗಿ, ಶಿಗ್ಗಾವಿ ಶಾಖೆಯ ವ್ಯವಸ್ಥಾಪಕ ಹನಮಂತ ಹಡಪದ ಸೇರಿದಂತೆ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಇದ್ದರು.