ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕು : ಬಸವರಾಜ ಶಿವಣ್ಣನವರ
ಬ್ಯಾಡಗಿ 09: ವಿಶೇಷ ಚೇತನರು, ಅಂಗವಿಕಲರು ಮುಖ್ಯವಾಹಿನಿಗೆ ಬರಲು ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿ ಸೌಲಭ್ಯ ಒದಗಿಸುತ್ತಿದ್ದು, ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಡೆಸಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ಪಟ್ಟಣದ ಕನಕದಾಸ ಕಲಾಭವನದಲ್ಲಿ ವಿಶೇಷ ಚೇತನರಿಗೆ ಬ್ಯಾಟ್ರಿ ಚಾಲಿತ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದರು. ಗಾಡಿ ನಡೆಸುವಾಗ ತಮ್ಮ ಕುಟುಂಬದ ಸದಸ್ಯರ ನೆನಪಿಟ್ಟುಕೊಂಡು ವಾಹನ ಚಲಾಯಿಸಬೇಕು.ಅಂಗವಿಕಲರ ಸ್ವಾವಲಂಬಿ ಬದುಕಿಗೆ ಹಾಗೂ ಸುಧಾರಣೆಗೆ ತ್ರಿಚಕ್ರ ವಾಹನಗಳು ಸಹಕಾರಿಯಾಗಲಿವೆ.
ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದು ತಮ್ಮ ಕುಟುಂಬದ ಏಳ್ಗೇಗೆಗಾಗಿ ಹೆಗಲು ಕೊಡಬೇಕೆಂದರು.ಅಂಗವಿಕಲರು ಎಂದರೇ ಅಸಮರ್ಥರು ಎನ್ನುವ ತಪ್ಪು ಭ್ರಮೆ ಬೇಡ. ಅವರಲ್ಲಿಯೂ ವಿಶೇಷ ಸಾಮರ್ಥ್ಯ ಇರುತ್ತದೆ. ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕೆಂದರು. ವೇದಿಕೆಯಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಪಟ್ಟಣದ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ, ಆಶ್ರಯ ಸಮಿತಿಯ ನಿರ್ದೇಶಕರಾದ ದುರ್ಗೇಶ ಗೋಣೆಮ್ಮನವರ, ಲಕ್ಷ್ಮಿ ಬಂಬಲಾಪುರ, ಗೀರೀಶ ಇಂಡಿಮಠ, ಅಬ್ದುಲ್ ಮಜೀದ್ ಮುಲ್ಲಾ, ಸುಮಂಗಲಾ ರಾರಾವಿ, ಜೈ ಭೀಮ್ ರಾರಾವಿ, ಅಂಗವಿಕಲ ಇಲಾಖೆಯ ನಾಗರಾಜ್, ರಾಜೆಸಾಬ ಕಳ್ಯಾಳ, ಸೇರಿದಂತೆ ಇತರರಿದ್ದರು.