ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಕ್ರಮಕೈಗೊಳ್ಳಿ: ಡಾ. ಸೆಲ್ವಕುಮಾರ್

ಕೊಪ್ಪಳ: ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಕರ್ಾರದ ಕಾರ್ಯದರ್ಶಿ ಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಡಾ. ಎಸ್. ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  

  ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಶಿಕ್ಷಣ ಇಲಾಖೆ ಸವರ್ೇ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ 1017 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ಬಂದಿದ್ದು, ಇದರಲ್ಲಿ ಬರಿ 50 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದ್ದು, ಇದರಲ್ಲಿ ಉಳಿದೆಲ್ಲ ಮಕ್ಕಳ ಗುರುತಿಸಿ, ಅವರ ವಯಸ್ಸಿನ ಅನುಗುಣವಾಗಿ ಶಿಕ್ಷಣ ನೀಡಿ.  ಅಲ್ಲದೇ ವಿಕಲಚೇತನ ಮಕ್ಕಳಿಗೆ ಮನೆಯಲ್ಲಿಯೇ ಅಥವಾ ವಿಶೇಷ ವ್ಯವಸ್ಥೆಯನ್ನು ಕೈಗೊಂಡು ಜ್ಞಾನಾರ್ಜನೆ ಮಾಡುವಂತೆ ಕ್ರಮ ವಹಿಸಿ.  ಪಂಚಸೂತ್ರ ಅಡಿಯಲ್ಲಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೈಸಿಕಲ್, ಸಮವಸ್ತ್ರ, ಶೂ ಹಾಗೂ ಸಾಕ್ಸ್ಗಳನ್ನು ಒದಗಿಸಬೇಕು.  ಇವುಗಳ ಗುಣಮಟ್ಟದ ಬಗ್ಗೆ ಜಿಲ್ಲಾ ಪಂಚಾಯತ್ ಸಿ.ಇ.ಒ ಗೆ ವರದಿ ನೀಡಬೇಕು.  ಮಧ್ಯಾಹ್ನದ ಉಪಹಾರ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಣೆಯನ್ನು ಸಮರ್ಪಕವಗಿ ನಿಭಾಯಿಸಿ.  ಪಠ್ಯ-ಪುಸ್ತುಕಗಳನ್ನು ಎಲ್ಲಾ ವಿದ್ಯಾಥರ್ಿಗಳಿಗೆ ನೀಡಲಾಗಿದೆಯೇ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಶೋಭಾ ಬಾಗೇವಾಡಿ ಮಾತನಾಡಿ, ಇಲಾಖೆಯ 2018ರ ಬ್ಲಾಕ್ ಮಟ್ಟದ ಸವರ್ೇ ಪ್ರಕಾರ 1017 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.  ಇದರಲ್ಲಿ ಮಕ್ಕಳ ವಯಸ್ಸಿ ಆಧಾರದ ಮೇಲೆ ಅವರಿಗೆ ಶಾಲೆಗೆ ಕರೆತರಲಾಗುತ್ತಿದೆ.  ಇದರಲ್ಲಿ ವಿಕಲಚೇತನ ಮಕ್ಕಳು ಒಳಗೊಂಡಿದ್ದು, ಅವರಿಗೆ ಮನೆಗೆ ತೆರಳಿ ಶಿಕ್ಷಣ ಕಲಿಸಲಾಗುತ್ತಿದೆ.  ಶೂ ಹಾಗೂ ಸಾಕ್ಸ್ಗಳು ರಾಜ್ಯ ಕಚೇರಿಯಿಂದ ನೇರವಾಗಿ ಶಾಲೆಗೆ ನೀಡಲಾಗುತ್ತಿದ್ದು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಮೂಲಕ ಮಕ್ಕಳಿಗೆ ವಿತರಿಸಲಾಗುತ್ತಿದೆ.  ಎಲ್ಲಾ ಮಕ್ಕಳಿಗೆ ಪಠ್ಯ-ಪುಸ್ತಕಗಳನ್ನು ಒದಗಿಸಲಾಗಿದ್ದು, ಉಳಿದ ಪುಸ್ತಕಗಳನ್ನು ಅವಶ್ಯವಿರುವ ನೆರೆಯ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.  

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾತನಾಡಿ, ಪ್ರಸಕ್ತ ಸಾಲಿನ ಭಿತ್ತನೆಗೆ ಅವಶ್ಯವಿರುವ ಬೀಜ, ರಸಗೊಬ್ಬರಗಳನ್ನು ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕಿ ಶಬಾನ ಶೇಖ್, ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಭಿತ್ತನೆಗೆ ಸಂಬಂಧಿಸಿದ ಜೋಳ, ತೊಗರಿಬೇಳೆ, ಉಳ್ಳಿ, ಉಳಕಡ್ಲೇ ಸೇರಿದಂತೆ ಇತರೆ ಬೆಳಗಳ ಬೀಜಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಂದ ಇಲಾಖಾ ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ.  ಪಿ.ಎಂ. ಕಿಸಾನ್ ಯೋಜನೆಯಡಿ ಜಿಲ್ಲೆಯ 1 ಲಕ್ಷದ 50 ಸಾವಿರ ರೈತರು ನೋಂದಾಯಿಸಿ ಕೊಂಡಿದ್ದಾರೆ.  ಪಿ.ಎಂ. ಕಿಸಾನ್ ಕ್ರಾಫ್ ಇನ್ಸೂರೆನ್ಸ್ ಕಾರ್ಯಕ್ರಮವು ಪ್ರಗತಿಯಲ್ಲಿದೆ ಎಂದರು. 

ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾದ ನಷ್ಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾಧ್ಯಂತ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಪ್ರಶ್ನಿಸಿದರು.  ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಮಾತನಾಡಿ, ಜಿಲ್ಲೆಯ ಗಂಗಾವತಿ ಹಾಗೂ ಕೊಪ್ಪಳ ತಾಲ್ಲೂಕಿನಲ್ಲಿ ಅಷ್ಟೆ ಪ್ರವಾಹ ಉಂಟಾಗಿದ್ದು, ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಮತ್ತು ವಿರುಪಾಪೂರಗಡ್ಡಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಹಾನಿಗೊಳಗಾದ ಸಂತ್ರಸ್ಥರನ್ನು ಗುರುತಿಸಿ 150 ಕುಟುಂಬಗಳಿಗೆ ತಲಾ 10 ಸಾವಿರದಂತೆ ಹಾಗೂ ಮನೆಗಳ ದುರಸ್ಥಿಗೆ ಬಾಗಶಃ ಹಾನಿಯಡಿ 25 ಸಾವಿರ ಪರಿಹಾರ ಒದಗಿಸಲಾಗಿದೆ.  ವಿರುಪಾಪೂರಗಡ್ಡಿಯ ನಿರಾಶ್ರಿತರನ್ನು ಹಾಗೂ ಪ್ರವಾಸಿಗರನ್ನು ಎನ್.ಡಿ.ಆರ್.ಎಫ್ ರಕ್ಷಣಾ ಕಾರ್ಯದಿಂದ ರಕ್ಷಣೆ ನೀಡಲಾಗಿದ್ದು, ಇದ್ದಕ್ಕೆ ಸಂಬಂಧಿಸಿದಂತೆ ರಿಸಾಟರ್್ ಮಾಲೀಕರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.  ತುಂಗಭದ್ರಾ ಜಲಾಶಯ ಭತರ್ಿ ಆದ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಹೊರಹರಿವಿನಿಂದ ಮುನಿರಾಬಾದ್ನಲ್ಲಿರುವ ಗೆಟ್ನ ದುರಸ್ಥಿ, ಗಂಗಾವತಿ-ಕಂಪ್ಲಿ ರಸ್ತೆ ಸೇತುವೆ ದುರಸ್ಥಿ, ಜಲಾವೃತ್ತಗೊಂಡ ಪಂಪಾವನದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಅಲ್ಲದೇ ಸದ್ಯ ಮಳೆಯಿಂದಾಗಿ ಕುಷ್ಟಗಿ ತಾಲ್ಲೂಕಿನ ವಿವಿಧೆಡೆ 56 ಹೆಕ್ಟರ್ ಬೆಳೆ ಹಾನಿ ಉಂಟಾಗಿದ್ದು, ಇದಕ್ಕೆ ಪರಿಹಾರ ನೀಡಬೇಕಾಗಿದೆ ಎಂದು ತಿಳಿಸಿದರು.  

ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಈರಪ್ಪ ಆಶಾಪೂರ ಮತನಾಡಿ, ಜಿಲ್ಲೆಯಲ್ಲಿ ವಿವಿಧ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಇಲ್ಲ ಎಂಬ ಬಗ್ಗೆ ದೂರ ಬಂದ ಹಿನ್ನೆಲೆಯಲ್ಲಿ, ಈಗಾಗಲೇ 8 ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿಯನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ ಮಾತನಾಡಿ, ಪ್ರಸಕ್ತ ಸಲಿನಲ್ಲಿ ಜಿಲ್ಲೆಯಲ್ಲಿ 18 ಜನ ದೇವದಾಸಿ ಮಹಿಳೆಯರಿಗೆ ಕೃಷಿ ಭೂಮಿಯನ್ನು ಮಂಜೂರು ಮಾಡಲಾಗಿದೆ.  ಅಲೆಮಾರಿ/ ಅರೇಅಲೆಮಾರಿ ಜನಾಂಗದ 280 ಫಲಾನುಭವಿಗಳಿಗೆ ಕೃಷಿ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಭೂ ಮಾಲೀಕರಿಂದ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ.  ಗಂಗಾ ಕಲ್ಯಾಣ ಯೋಜನೆಯಡಿ ಕೆಲವೆಡೆ ಬೋರ್ವೆಲ್ಗಳಿಗೆ ವಿದ್ಯುದ್ದೀಕರಣ ನೀಡಬೇಕಾಗಿದೆ ಎಂದರು.  

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ್ ಎಸ್. ಯರಗಲ್ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆಡಿಯಲ್ಲಿ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಕಾಡರ್್ಗಳನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 1 ಲಕ್ಷದ 77 ಸಾವಿರ ಕಾಡರ್್ಗಳನ್ನು ನೀಡಲಾಗಿದೆ.  ಇನ್ನುಳಿದಂತೆ ಬಾಕಿ ಇರುವ ಫಲಾನುಭವಿಗಳಿಗೆ ಆರೋಗ್ಯ ಕಾಡರ್್ಗಳನ್ನು ಒದಗಿಸಲಾಗುವುದು.  ಈ ಕುರಿತು ಜಿಲ್ಲೆಯ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಸೂಚಿಸಿದರು.  

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರಿಶೀಲನಾ ವೇಳೆ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್ ಮಾತನಾಡಿ, ಮಾತೃಪೂರ್ಣ ಯೋಜನೆಯಡಿ ಗಭರ್ಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.  ರಾಜ್ಯ ಸಕರ್ಾರದ ಮಾತೃಶ್ರೀ ಯೋಜನೆಯಡಿ ಗಭರ್ಿಣಿ ಹಾಗೂ ಬಾಣಂತಿಯರಿಗೆ 6 ಸಾವಿರ ರೂ.ಗಳನ್ನು ನೀಡುವ ಕಾರ್ಯಕ್ರಮದಡಿ ಜಿಲ್ಲೆಯ 5279 ಫಲಾನುಭವಿಗಳು ಒಳಪಡುತ್ತಾರೆ.  ಕೇಂದ್ರ ಸಕರ್ಾರದ ಮಾತೃವಂದನಾ ಕಾರ್ಯಕ್ರಮದಡಿಯಲ್ಲಿಯೂ ಸಹ ಫಲಾನುಭವಿಗಳು ಅಜರ್ಿ ಸಲ್ಲಿಸಿದ್ದು, ಆಯ್ಕೆ ಪ್ರಕ್ರಿಯೇ ಪ್ರಗತಿಯಲ್ಲಿದೆ.  ಇದಲ್ಲದೇ ಅಂಗನವಾಡಿ ಕಾರ್ಯಕರ್ತೆ ಯರ ನೇಮಕಾತಿ ಶೀಘ್ರ ನಡೆಯಲಿದೆ ಎಂದರು.  

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದ ಮೂತರ್ಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ ಕ್ಷೀರಸಾಗರ, ಉಪವಿಭಾಧಿಕಾರಿ ಸಿ.ಡಿ ಗೀತಾ, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಿಸರಳ್ಳಿ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.