ರಟ್ಟೀಹಳ್ಳಿಯಲ್ಲಿ ತಾಲೂಕಾ ಕಚೇರಿಗಳ ಕಾಯರ್ಾರಂಭ ಮಾಡಿ: ಡಿಸಿ ಸೂಚನೆ


ಹಾವೇರಿ25: ರಟ್ಟೀಹಳ್ಳಿ ತಾಲೂಕಾ ಘೋಷಣೆಯಾಗಿದೆ. ಆದರೆ ಈವರೆಗೆ ತಾಲೂಕಾ ಕಚೇರಿ ಆರಂಭಿಸದ ವಿವಿಧ ಇಲಾಖೆ ಅಧಿಕಾರಿಗಳು ಮೂರು ದಿನಗಳೊಳಗಾಗಿ ಕಚೇರಿ ಕಾಯರ್ಾರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಸೂಚನೆ ನೀಡಿದರು. 

ಮಂಗಳವಾರ ಸಂಜೆ ರಟ್ಟೀಹಳ್ಳಿ ತಾಲೂಕಾ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಕಚೇರಿಗಳನ್ನು ಆರಂಭಿಸುವ ಕುರಿತಂತೆ  ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ರಟ್ಟೀಹಳ್ಳಿ ನೂತನ ತಾಲೂಕಿಗೆ ಆಡಳಿತದ ಶಿಸ್ತು ತರಬೇಕು. ಯಾವುದೇ ತಾಂತ್ರಿಕ ನೆಪವೊಡ್ಡದೆ ಉತ್ತಮ ಸೇವೆ ಸಿಗುವ ನಿಟ್ಟಿನಲ್ಲಿ ತೀವ್ರ ತರವಾಗಿ ಕಾಯರ್ಾನುಷ್ಠಾನಗೊಳಿಸಿ ಕೆಲಸ ಆರಂಭಿಸಬೇಕು. ಅಧಿಕಾರಿಗಳ ನಿಯೋಜನೆ, ಸಿಬ್ಬಂದಿಗಳ ವಗರ್ಾವಣೆ, ಸಕರ್ಾರಿ ವೇಳೆಯಂತೆ ಸಾರ್ವಜನಿಕರಿಗೆ ತಾಲೂಕಾ ಕಚೇರಿಯಲ್ಲಿ ಸೇವೆ ಲಭ್ಯವಾಗಬೇಕು. ಕನಿಷ್ಠ ಸಿಬ್ಬಂದಿಗಳು ಕಚೇರಿಗೆ ಹೋಗುವ ಜನರಿಗೆ ಮಾಹಿತಿ ನೀಡುವಂತಾಗಬೇಕು. ಇಂದಿನಿಂದಲೇ ಈ ಕಾರ್ಯ ಆರಂಭಿಸುವಂತೆ ಸೂಚನೆ ನೀಡಿದರು.

ಈಗಾಗಲೇ ತಾಲೂಕಾ ತಹಶೀಲ್ದಾರ ಕಚೇರಿ ಆರಂಭಿಸಲಾಗಿದೆ. ಗ್ರೇಡ್-1 ಮತ್ತು ಗ್ರೇಡ್ -2 ತಹಶೀಲ್ದಾರಗಳನ್ನು ನೇಮಕ ಮಾಡಲಾಗಿದೆ. ತಾಲೂಕಾ ಪಂಚಾಯತಿ ಸೇರಿದಂತೆ 16 ಇಲಾಖೆಗಳ ತಾಲೂಕಾ ಮಟ್ಟದ ಕಚೇರಿಗಳು ಆರಂಭಗೊಳ್ಳಬೇಕು. ಈ ಪೈಕಿ ಕೆಲ ಇಲಾಖೆಗಳು ಈಗಾಗಲೇ ಕಟ್ಟಡಗಳನ್ನು ಗುರುತಿಸಿದ್ದಾರೆ. ಉಳಿದ ಇಲಾಖೆಗಳು ಮೂರುದಿನಗಳ ಒಳಗಾಗಿ ತಮ್ಮ ಕಚೇರಿ ಕಟ್ಟಡಗಳನ್ನ ಗುರುತಿಸಿಕೊಂಡು ಅಗತ್ಯ ಸೌಕರ್ಯಗಳೊಂದಿಗೆ ಕಾಯರ್ಾರಂಭಿಸಬೇಕೆಂದು ಸೂಚಿಸಿದರು.

ನೂತನ ಕಚೇರಿಗೆ ಅಗತ್ಯವಾದ ಅಧಿಕಾರಿಗಳನ್ನು ಇಂದಿನಿಂದಲೇ ನಿಯೋಜನೆ ಮೂಲಕ ನೇಮಕ ಮಾಡಬೇಕು. ಮ್ಯಾನೇಜರ್, ಗಣಕಯಂತ್ರ ಚಾಲಕರು, ಪ್ರಥಮ ದಜರ್ೆ, ದ್ವಿತೀಯ ದಜರ್ೆ ಹಾಗೂ ಕಚೇರಿ ಸಹಾಯಕ ಹುದ್ದೆಗಳನ್ನು ಕಾಯಂ ಆಗಿ ವಗರ್ಾಯಿಸಿ ನೇಮಕ ಮಾಡಿ ಎಂದು ಸೂಚಿಸಿದರು.

ಸಕರ್ಾರಿ ಕಟ್ಟಡಗಳನ್ನು ಗುರುತಿಸಿಕೊಳ್ಳಬೇಕು, ತಾಲೂಕಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಉಪ ನೋಂದಣಾಧಿಕಾರಿ ಕಚೇರಿ, ಆಹಾರ ಇಲಾಖೆಶಾಖೆ, ಚುನಾವಣಾ ಶಾಖೆ, ಅಂಕಿಅಂಶಗಳ ಶಾಖೆ, ಪಿ.ಆರ್.ಇ.ಡಿ., ಸಿ.ಡಿ.ಪಿ.ಓ ಕಚೇರಿ, ಅಂಚೆ ಕಚೇರಿ, ಬಿ.ಎಸ್.ಎನ್.ಎಲ್.ಕಚೇರಿ ಸೇರಿದಂತೆ ವಿವಿಧ ಇಲಾಖೆಗಳು ತಕ್ಷಣದಿಂದಲೇ ಅಧಿಕಾರಿಗಳನ್ನು ನಿಯೋಜನೆ ಮೇಲೆ ನೇಮಕಮಾಡಿ ಕಟ್ಟಡಕ್ಕೆ ತುತರ್ು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು.

ರಟ್ಟೀಹಳ್ಳಿ ತಾಲೂಕಿಗೆ 65 ಹಳ್ಳಿಗಳು ಸೇರ್ಪಡೆಗೊಂಡಿವೆ. ಈ ಎಲ್ಲ ಹಳ್ಳಿಗಳ  ಮಾಹಿತಿಯನ್ನು ಪ್ರತ್ಯೇಕವಾಗಿ ಕ್ರೋಢಿಕರಿಸಬೇಕು. ಫಲಾನುಭವಿಗಳ ಗುರುತಿಸುವಿಕೆ, ಅನುದಾನದ ಹಂಚಿಕೆ, ಅಜರ್ಿ ಆಹ್ವಾಮ, ಪ್ರವೇಶಾವಕಾಶ, ಭೂ ದಾಖಲೆ, ಗಣಕೀಕರಣದ ಮೂಲಕ ಸೆವಾ ಸೌಲಭ್ಯ  ಒದಗಿಸುವುದು. ಮಾಹಿತಿ ಸಂಗ್ರಹ ಎಲ್ಲವೂ ಪ್ರತ್ಯೇಕವಾಗಿ ನಿರ್ವಹಿಸಬೇಕು. ಈ ಎಲ್ಲ ದಾಖಲೆಗಳಲ್ಲಿ ರಟ್ಟೀಹಳ್ಳಿ ತಾಲೂಕೆಂದು ನಮೂದಿಸಬೇಕು. ಜಿಲ್ಲಾ ಮಟ್ಟದಲ್ಲಿ ಇಂದಿನಿಂದ ಇತರ ತಾಲೂಕಿನ ಪ್ರಗತಿ ಪರಿಶೀಲನೆಯಂತೆ ರಟ್ಟೀಹಳ್ಳಿ ತಾಲೂಕನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುವುದೆಂದು ತಿಳಿಸಿದರು.

ರಟ್ಟೀಹಳ್ಳಿಗೆ ಸೇರ್ಪಡೆಗೊಂಡಿರುವ ವಿವಿಧ ತಾಲೂಕಿನ ಹಳ್ಳಿಗಳ ಭೂ ದಾಖಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಆದ್ಯತೆಯ ಮೇಲೆ ಕಾಳಜಿಯಿಂದ ವಗರ್ಾಯಿಸಬೇಕು. ರೆವಿನ್ಯೂ ಸ್ಕೆಚ್, ಈ ಸ್ವತ್ತುಗಳನ್ನು ರಟ್ಟೀಹಳ್ಳಿ ತಾಲೂಕಿನ ಲಾಗಿನ್ನಿಂದ ಮಾಡಬೇಕು. ಈ ಕುರಿತಂತೆ ಪ್ರತ್ಯೇಕ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗೊಂದಲ ಹಾಗೂ ರೈತರಿಗೆ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲು ಭೂ ದಾಖಲೆ ಇಲಾಖೆ ಉಪನಿದರ್ೆಶಕರಿಗೆ ಸೂಚಿಸಿದರು.

ಪ್ರಸ್ತಾವನೆ: ರಟ್ಟೀಹಳ್ಳಿ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದಜರ್ೆಗೇರಿಸಲು ತಕ್ಷಣವೇ ಸಕರ್ಾರಕ್ಕೆ ಪ್ರಸ್ತಾನೆ ಸಲ್ಲಿಸಬೇಕು. ಪಟ್ಟಣ ಗಡಿ ವ್ಯಾಪ್ತಿಯನ್ನು ಗುರುತಿಸಿಕೊಳ್ಳಬೇಕು. ಮುಖ್ಯಾಧಿಕಾರಿಗಳ ನೇಮಕ ಕಚೇರಿ ಕಟ್ಟಡ ಗುರುತಿಸುವಿಕೆ, ಅಗತ್ಯ ಸಿಬ್ಬಂದಿಗಳ ನೇಮಕ ಕುರಿತಂತೆ ತ್ವರಿತವಾಗಿ ಕ್ರಮವಹಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೆಶಕರಿಗೆ ಸೂಚನೆ ನೀಡಿದರು.

ಉಪ ಖಜಾನೆ: ತಕ್ಷಣದಿಂದಲೇ ಕಚೇರಿ ಆರಂಭಿಸಿ ರಟ್ಟೀಹಳ್ಳಿ ತಾಲೂಕಿನ ವ್ಯಾಪ್ತಿಯ ಅಧಿಕಾರಿಗಳಿಗೆ ಈ ಖಜಾನೆ ಮೂಲಕವೇ ವೇತನ ಪಾವತಿಗೆ ಕ್ರಮವಹಿಸಬೇಕು. ಭದ್ರತಾ ಕೊಠಡಿ ಸೇರಿದಂತೆ ಗತ್ಯ ಮೂಲ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ನೇಮಕಾತಿಯಲ್ಲಿ ಕ್ರಮವಹಿಸುವಂತೆ ಸೂಚಿಸಿದರು. 

ಮಿನಿ ವಿಧಾನಸೌಧ ಪ್ರಸ್ತಾವನೆ:  ನೂತನ ಮಿನಿ ವಿಧಾನಸೌಧ ಕಟ್ಟಡವನ್ನು ಯು.ಟಿ.ಪಿ. ಆವರಣ ಅಥವಾ ಕೃಷಿ ಇಲಾಖೆಯ ಚಿಲ್ಲಿ ಮಾರುಕಟ್ಟೆಯಲ್ಲಿ ನಿಮರ್ಾಣ ಮಾಡಲು ಸ್ಥಳವಕಾಶವಿದೆ. ಈಗಾಗಲೇ 10 ಕೋಟಿ ರೂ.ವೆಚ್ಚದಲ್ಲಿ ಮಿನಿ ವಿಧಾನಸೌಧ ನಿಮರ್ಾಣ ಮಾಡಲು ಉದ್ದೇಶಿಸಿದೆ. ಮೂರು ದಿನದೊಳಗಾಗಿ ನೀಲಿ ನಕ್ಷೆಯೊಂದಿಗೆ ಅಂದಾಜುಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಸಹಾಯ ಕಾರ್ಯನಿವರ್ಾಹಕ ಅಭಿಯಂತರರಿಗೆ ಸೂಚನೆ ನೀಡಿದರು. ತಾಲೂಕಾ ಪ್ರವಾಸಿ ಮಂದಿರ ನಿಮರ್ಾಣ ಸೇರಿದಂತೆ ಅಗತ್ಯ ಸಕರ್ಾರಿ ಕಚೇರಿ ಕಟ್ಟಡಗಳ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಜಮೀನು ಗುರುತಿಸಿ: ಅಗ್ನಿಶಾಮಕ ದಳ, ತಾಲೂಕಾ ಕ್ರೀಡಾಂಗಣ, ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಒಳಗೊಂಡಂತೆ ವಿವಿಧ ಇಲಾಖೆಗೆ ಅತ್ಯವಿರುವ ನಿವೇಶನ ಹಾಗೂ ಜಮೀನುಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.  

ಇಲಾಖಾವಾರು ಕಚೇರಿಯ ಮೂಲಕ ಸೌಕರ್ಯಕ್ಕೆ ಅಗತ್ಯವಾದ ಅನುದಾನ, ತಾಲೂಕಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಸೃಜಿಸಿ ನೇಮಕಗೊಳಿಸಲು ಆಯಾ ಇಲಾಖಾ ಕಾರ್ಯದಶರ್ಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನೇಮಕಾತಿ: ನೂತನ ರಟ್ಟೀಹಳ್ಳಿ ತಾಲೂಕಾ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕಾತಿ ಕುರಿತಂತೆ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. 

ಸಂಭ್ರಮದಿಂದ ಆಚರಿಸಿ: ತಾಲೂಕಾ ರಚನೆಯಾದ ಮೇಲೆ ಮೊಟ್ಟಮೊದಲ ಸ್ವಾತಂತ್ರ್ಯೋತ್ಸವ ಆಚರಣೆ ನಿಮ್ಮಮುಂದೆ ಇದೆ. ಅತ್ಯಂತ  ಸಂಭ್ರಮದಿಂದ ವಿವಿಧ ಇಲಾಖೆಯ ಸಮನ್ವಯತೆಯಿಂದ ಆಚರಿಸುವಂತೆ ಸುಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್, ಹಿರೇಕೆರೂರು ತಹಶೀಲ್ದಾರ ಅಶೋಕ ಹಾಗೂ ಪ್ರೋಬೋಷನರಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ, ತಹಶೀಲ್ದಾರ ಮಂಜುನಾಥ ಉಪಸ್ಥಿತರಿದ್ದರು.