ಶಿಗ್ಗಾವಿ 29 : ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ 3 ವಿಷಯಗಳ ಕುರಿತು ಧರ್ಮಸ್ಥಳ ಯೋಜನೆಯಿಂದ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಯೋಜನಾಧಿಕಾರಿ ಉಮಾ ಹೇಳಿದರು.
ಶಿಗ್ಗಾವಿ ವಲಯದ ಹೊಸನೀರಲಗಿ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಗೂ ಪೂಜ್ಯರ ಮಾರ್ಗದರ್ಶನ ದಡಿಯಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ ಅನುಕೂಲವಾಗಲಿದೆ ಎಂದರು.
ಈ ಕಾರ್ಯಕ್ರಮ ಉದ್ಘಾಟನೆಯನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಧರೆಪ್ಪಗೌಡ್ರ. ಪಾಟೀಲ ನೇರವೇರಿಸಿದರು.
ಮುಖ್ಯ ಗುರುಗಳು ಯೋಜನೆಯ ಎಲ್ಲ ಕಾರ್ಯಕ್ರಮ ಮತ್ತು ಶಿಕ್ಷಣದ ಗ್ರಾಮೀಣ ಮಕ್ಕಳಿಗೆ ಇದನ್ನು ಗುರ್ತಿಸಿ ಈ ರೀತಿಯಾಗಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಇನ್ನಷ್ಟು ಅನುಕೂಲ ಆಗಲಿ ಇದರ ಉದ್ದೇಶ ಒಳ್ಳೆ ರೀತಿಯಲ್ಲಿ ಎಲ್ಲರಿಗೂ ಮುಟ್ಟಲಿ ಹಾಗೂ ಪರಮಪೂಜ್ಯರ ಹಾಗೂ ಯೋಜನೆ ಕಾರ್ಯಕ್ರಮ ಕುರಿತು ಶ್ಲಾಘನೀಯ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.